ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ಎಚ್‌ಡಿಕೆ ಭೇಟಿ ಮಾಡಿದ ಡಾ. ಸುಧಾಕರ್

By Suvarna NewsFirst Published Apr 21, 2021, 5:16 PM IST
Highlights

ಕೊರೋನಾ ಎರಡನೇ ಅಲೆ ಆರ್ಭಟ/ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕುಮಾರಸ್ವಾಮಿ/ ಕುಮಾರಸ್ವಾಮಿ ಭೇಟಿ ಮಾಡಿದ ಸಚಿವ ಡಾ. ಕೆ ಸುಧಾಖರ್/ ಸರ್ವಪಕ್ಷ ಸಭೆಯಲ್ಲಿ ಸಲಹೆ ನೀಡಿದ್ದ ಕುಮಾರಸ್ವಾಮಿ

ಬೆಂಗಳೂರು (ಏ. 21) ಕೊರೋನಾ ಪರಿಸ್ಥಿತಿ ಕೈಮೀರಿದ್ದು ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಕೊರೋನಾ ಎರಡನೇ ಅಲೆ ರಾಜಕಾರಣಿಗಳನ್ನು ಬಿಟ್ಟಿಲ್ಲ.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ  ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ  ಡಾ. ಕೆ  ಸುಧಾಕರ್ ಬುಧವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಶೀಘ್ರ ಗುಣಮುಖರಾಗುವಂತೆ ಎಚ್‌ಡಿಕೆಗೆ ಹಾರೈಸಿದರು. 

ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಲಭ್ಯವಿದೆ? ಸುಧಾಕರ್ ಮಾಹಿತಿ

ಕೊರೋನಾ ಸೋಂಕಿಗೆ ಗುರಿಯಾದ ಸಂದರ್ಭ ಬೆಡ್ ಸಿಗುತ್ತಿಲ್ಲ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದರು. ತಕ್ಷಣ ಆರೋಗ್ಯ ಸಚಿವರು ಸ್ಪಂದಿಸಿದ್ದರು. 

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೊಂಕಿತರಿಗಾಗಿ ಶೇ 50 ರಷ್ಟು ಬೆಡ್ ಮೀಸಲಿಡುವ ವಿಚಾರದ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿದ್ದು ಈಗಾಗಲೇ 6800 ಬೆಡ್ ಗಳನ್ನ ಖಾಸಗಿ ಆಸ್ಪತ್ರೆಗಳು ಮೀಸಲಿಟ್ಟಿವೆ ಇನ್ನೂ 5200 ಬೆಡ್ ಗಳನ್ನ ಖಾಸಗಿ ಆಸ್ಪತ್ರೆಗಳು ಮೀಸಲಿಡಬೇಕಾಗಿದೆ ಎಂದು ತಿಳಿಸಿದ್ದಾರೆ.

click me!