ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ/ ಬೆಡ್ ಮೀಸಲಿಡುವ ವಿಚಾರ/ ಈಗಾಗಲೇ 6800 ಬೆಡ್ ಗಳನ್ನ ಖಾಸಗಿ ಆಸ್ಪತ್ರೆಗಳು ಮೀಸಲಿಟ್ಟಿವೆ/ ಇನ್ನೂ 5200 ಬೆಡ್ ಗಳನ್ನ ಖಾಸಗಿ ಆಸ್ಪತ್ರೆಗಳು ಮೀಸಲಿಡಬೇಕಾಗಿದೆ
ಬೆಂಗಳೂರು(ಏ. 21) ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೊಂಕಿತರಿಗಾಗಿ ಶೇ 50 ರಷ್ಟು ಬೆಡ್ ಮೀಸಲಿಡುವ ವಿಚಾರದ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿದ್ದಾರೆ ಈಗಾಗಲೇ 6800 ಬೆಡ್ ಗಳನ್ನ ಖಾಸಗಿ ಆಸ್ಪತ್ರೆಗಳು ಮೀಸಲಿಟ್ಟಿವೆ ಇನ್ನೂ 5200 ಬೆಡ್ ಗಳನ್ನ ಖಾಸಗಿ ಆಸ್ಪತ್ರೆಗಳು ಮೀಸಲಿಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಬನ್ನೇರಘಟ್ಟ ರಸ್ತೆ ಬಳಿ ಇರುವ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸುಧಾಕರ್, ಫೋರ್ಟಿಸ್ ಆಸ್ಪತ್ರೆಯವರು 50 ಬೆಡ್ ಕೋವಿಡ್ ಗಾಗಿ ಮೀಸಲಿಟ್ಟಿದ್ದಾರೆ.. ಇನ್ನೂ 110 ಬೆಡ್ ಗಳನ್ನ ಕೊಡುವುದು ಬಾಕಿ ಇದೆ.
undefined
ಕರ್ನಾಟಕದಲ್ಲಿ ಹೊಸ ರೂಲ್ಸ್.. ಏನಿರುತ್ತೆ? ಏನಿರಲ್ಲ?
ಎರಡು ದಿನಗಳೊಳಗಾಗಿ ಶೇ 50 ರಷ್ಟು ಬೆಡ್ ನೀಡುವುದಾಗಿ ಆಸ್ಪತ್ರೆ ಮುಖ್ಯಸ್ಥರು ಭರವಸೆ ನೀಡಿದ್ದಾರೆ. ಘರ್ಷಣೆ ಮೂಲಕ ಖಾಸಗಿ ಆಸ್ಪತ್ರೆಯವರಿಂದ ಬೆಡ್ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು.. ತಕ್ಷಣಕ್ಕೆ ಬೆಡ್ ಗಳನ್ನ ಖಾಲಿ ಮಾಡಿ ಖಾಸಗಿಯವರು ಬೆಡ್ ಗಳನ್ನ ನೀಡೊದು ಕಷ್ಟವಾಗಲಿದೆ. ಎರಡು ಮೂರು ದಿನಗಳೊಳಗಾಗಿ ಶೇ. 50 ರಷ್ಟು ಬೆಡ್ ಗಳನ್ನ ಖಾಸಗಿಯವರು ಮೀಸಲಿರಿಸಲು ಮಾಡುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.
ಆ ಬಳಿಕ ಹೆಚ್ಚುವರಿಯಾಗಿ ಶೇ 10 ರಷ್ಟು ಬೆಡ್ ಗಳನ್ನ ಖಾಸಗಿಯವರಿಂದ ಪಡೆಯುವ ಬಗ್ಗ ನಿರ್ಧಾರ ಮಾಡ್ತೇವೆ. ಪ್ರತಿಯೊಂದ ಖಾಸಗಿ ಆಸ್ಪತ್ರೆಗೂ ಅಧಿಕಾರಿಗಳನ್ನ ನೇಮಿಸಿದ್ದೇವೆ. ನಾನು ಪ್ರತಿದಿನ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸ್ತೇನೆ.ಸರ್ಕಾರ ಲಸಿಕೆ ಹೆಚ್ಚುವ ಕಾರ್ಯ ಮಾಡಲಿದೆ. ಈ ವಿಚಾರವಾಗಿ ಸಿಎಂ ಜತೆ ಚರ್ಚೆ ಮಾಡ್ತೇನೆ
ಲಸಿಕೆಗೆ ರಾಜ್ಯ ಸರ್ಕಾರ ಎಷ್ಟು ಮುಂಗಡ ಹಣ ಕಟ್ಟಬೇಕು..? ಶೇ 50 ರಷ್ಟು ಹಣ ಕೇಂದ್ರ ಸರ್ಕಾರ ಕೊಡಲಿದೆ.. ಸಿಎಂ ಜತೆ ಚರ್ಚಿಸಿದ ಬಳಿಕ ಲಸಿಕೆ ಹೆಚ್ಚಿಸಲು ನಾಳೆಯೊಳಗೆ ತೀರ್ಮಾನ ಕೈಗೊಳ್ತೇವೆ ಎಂದು ಸುಧಾಕರ್ ತಿಳಿಸಿದ್ದಾರೆ.