ಸೋಂಕಿತ ಪೊಲೀಸರ ಮನೆಗಳು ಕಂಟೈನ್ಮೆಂಟ್‌, ಸೀಲ್‌ಡೌನ್‌

By Kannadaprabha News  |  First Published May 26, 2020, 7:14 AM IST

ಭಾನುವಾರ ಪತ್ತೆಯಾದ 4 ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 4 ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್‌ಗಳನ್ನಾಗಿ ಮಾಡಲಾಗಿದೆ.


ಉಡುಪಿ(ಮೇ 26): ಭಾನುವಾರ ಪತ್ತೆಯಾದ 4 ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 4 ಪ್ರದೇಶಗಳನ್ನು ಕಂಟೈನ್ಮೆಂಟ್‌ ಝೋನ್‌ಗಳನ್ನಾಗಿ ಮಾಡಲಾಗಿದೆ.

ಕ್ವಾರಂಟೈನ್‌ ನಲ್ಲಿದ್ದವರನ್ನು ಹೊರತಪಡಿಸಿ 4 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿರುವುದರಿಂದ ಅವರ ಮನೆಗಳನ್ನು ಅನಿವಾರ್ಯವಾಗಿ ಕಂಟೈನ್ಮೆಂಟ್‌ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಂಟೈನ್ಮೆಂಟ್‌ ಝೋನ್‌ಗಳು ಘೋಷಣೆಯಾಗಿವೆ.

Latest Videos

undefined

ಮದುವೆಗೆ ಬ್ರೇಕ್‌; ಕಲ್ಯಾಣ ಮಂದಿರ ಆದಾಯಕ್ಕೆ ಕೊಕ್‌

ಅದೂ ಒಂದೇ ದಿನ 4 ಕಡೆಗಳಲ್ಲಿ ಎನ್ನುವುದು ವಿಶೇಷವಾಗಿದೆ. 4 ಮಂದಿ ಸೋಂಕಿತರಲ್ಲಿ 3 ಮಂದಿ ಪೊಲೀಸರಿದ್ದು, ಅವರು ವಾಸಿಸುವ ತೆಂಕನಿಡಿಯೂರು ಗ್ರಾಮದ ಕೆಳಾರ್ಕಳಬೆಟ್ಟು ಪೋಲಿಸ್‌ ಕ್ವಾಟ್ರ್ರಸ್‌, ವಡ್ಡರ್ಸೆ ಮತ್ತು ಕಾರ್ಕಳದಲ್ಲಿ ಪೊಲೀಸರು ವಾಸಿಸುವ ಮನೆ ಮತ್ತು ಕಾರ್ಕಳದಲ್ಲಿ ಸೋಂಕಿತ ಗರ್ಭಿಣಿ ವಾಸಿಸುತ್ತಿದ್ದ ಮನೆ ಇರುವ ಪ್ರದೇಶಗಳನ್ನು ಕಂಟೈನ್ಮೆಂಟ್‌ ಮಾಡಿ, ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್‌ ಅವರು ಮಾಹಿತಿ ನೀಡಿದ್ದಾರೆ.

ಹೊಸ ಆಟ ಶುರು ಮಾಡಿದ ಕೊರೋನಾ ವೈರಸ್..!

ಈ ಪ್ರದೇಶಗಳಲ್ಲಿ ಪೊಲೀಸ್‌ ಬ್ಯಾರಿಕೇಡ್‌- ರಿಬ್ಬನ್‌ ಬೇಲಿ ಹಾಕಲಾಗಿದೆ. ಎಲ್ಲ ಮಾರ್ಗಗಳನ್ನು ಮುಚ್ಚಿ, ಕಂಟೈನ್ಮೆಂಟ್‌ ಪ್ರದೇಶದಿಂದ ಹೊರಗೆ ಅಥವಾ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅವುಗಳ ಉಸ್ತುವಾರಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

click me!