ಗಣಿ ಜಿಲ್ಲೆಯಲ್ಲಿ ಕೊರೋನಾ ತೀರಾ ಇಳಿಮುಖ| ನಿರ್ಲಕ್ಷ್ಯ ವಹಿಸಿದರೆ ಮತ್ತೆ ದಾಳಿಯ ಸಾಧ್ಯತೆ| ವಯೋಸಹಜ ಕಾಯಿಲೆ ಜನರು ಎಚ್ಚರಿಕೆ ಅಗತ್ಯ| ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಶುರುವಾದ ಮದುವೆ ಸೇರಿದಂತೆ ವಿವಿಧ ಸಮಾರಂಭಗಳು|
ಕೆ.ಎಂ. ಮಂಜುನಾಥ್
ಬಳ್ಳಾರಿ(ನ.05): ಕೊರೋನಾ ಸೋಂಕಿತ ಪ್ರಕರಣಗಳಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತೀರಾ ಇಳಿಮುಖ ಕಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಸಕ್ರೀಯ ಪ್ರಕರಣಗಳು ಸೊನ್ನೆಗೆ ತಿರುಗಲಿದೆ!.
undefined
ಏತನ್ಮಧ್ಯೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪರೀಕ್ಷಾ ಕಾರ್ಯ ನಿರಂತರವಾಗಿ ನಡೆದಿದ್ದು ನೂರಾರು ಸಂಖ್ಯೆ ದಾಟುತ್ತಿದ್ದ ಕೊರೋನಾ ಪಾಸಿಟಿವ್ ಪ್ರಕರಣಗಳೀಗ ನಿತ್ಯ 30ರಿಂದ 40ಕ್ಕೆ ಇಳಿಕೆಯಾಗಿವೆ. ಸಹಜವಾಗಿಯೇ ಸಾವಿನ ಪ್ರಕರಣಗಳು ಸಹ ತೀವ್ರ ಕುಸಿದಿದೆ. ಜಿಲ್ಲೆಯಲ್ಲಿ ಕೊರೋನಾ ಇಳಿಮುಖ ಕಂಡಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಜನರ ನಿರ್ಲಕ್ಷ್ಯ ಮತ್ತೆ ಶುರುವಾಗಿದ್ದು, ಇದು ದೊಡ್ಡ ಪ್ರಮಾಣದ ಅಪಾಯಕ್ಕೆ ಆಸ್ಪದ ನೀಡುವ ಸಾಧ್ಯತೆ ಇದೆ. ಅದರಲ್ಲೂ ವಯೋಸಹಜ ಕಾಯಿಲೆ ಹಾಗೂ ಉಸಿರಾಟ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮುಂಜಾಗ್ರತೆ ವಹಿಸದೇ ಹೋದರೆ ಸಾವಿನ ಮನೆಯ ಕದ ತಟ್ಟಬೇಕಾದ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.
ಮದುವೆ ಸಮಾರಂಭಗಳು ಶುರು:
ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮದುವೆ ಸೇರಿದಂತೆ ವಿವಿಧ ಸಮಾರಂಭಗಳು ಶುರುವಾಗಿವೆ. ಕಲ್ಯಾಣಮಂಟಪಗಳಲ್ಲಿ ಮದುವೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ನೂರಾರು ಜನರು ಜಮಾಯಿಸಿ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮದುವೆಗೆ ಸರ್ಕಾರ ನಿರ್ಬಂಧಿಸಿಲ್ಲ. ಆದರೆ, 100ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂದು ಸೂಚಿಸಿದೆ. ಆದರೆ, ಈ ನಿಯಮ ಎಲ್ಲೂ ಪಾಲನೆಯಾಗುತ್ತಿಲ್ಲ. ಇದು ಅಪಾಯದ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳದೇ ಹೋದರೆ ಅಪಾಯ ಖಚಿತ. ಚಳಿಗಾಲ ಶುರುವಾಗುವುದರಿಂದ ಈ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಹಬ್ಬುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ವೈದ್ಯರು ಹೇಳುತ್ತಾರೆ.
ಅಣ್ಣನಿಂದ ತಂಗಿ ಮೇಲೆ ನಿರಂತರ ಅತ್ಯಾಚಾರ: ಗರ್ಭಿಣಿಯಾದ 17 ವರ್ಷದ ಬಾಲಕಿ
ಬಳ್ಳಾರಿ ನಗರದಲ್ಲಿ ಹೆಚ್ಚು ಪ್ರಕರಣಗಳು:
ಈವರೆಗೆ ಜಿಲ್ಲೆಯಲ್ಲಿ ದೃಢಗೊಂಡಿರುವ ಸಕ್ರೀಯ ಪ್ರಕರಣಗಳ ಪೈಕಿ ಬಳ್ಳಾರಿ ನಗರದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ಈಗಲೂ ನಿತ್ಯ ವರದಿಯಾಗುವ ಪ್ರಕರಣಗಳಲ್ಲಿ ಬಳ್ಳಾರಿಯೇ ಹೆಚ್ಚು. ನ. 3ರ ವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಪಾಸಿಟಿವ್ ಪ್ರಕರಣಗಳಲ್ಲಿ ಬಳ್ಳಾರಿ 258, ಸಂಡೂರು 59, ಸಿರುಗುಪ್ಪ 61, ಕೂಡ್ಲಿಗಿ 56, ಹಡಗಲಿ 49, ಹೊಸಪೇಟೆ 81, ಹಗರಿಬೊಮ್ಮನಹಳ್ಳಿ 57, ಹರಪನಹಳ್ಳಿ 53 ಇತರೆ 7 ಪ್ರಕರಣಗಳಿವೆ. ಈವರೆಗೆ 542 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ಮದುವೆ ಮಾಡಲು ಯಾವುದೇ ನಿರ್ಬಂಧವಿಲ್ಲ 100ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ. ಇದನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುತ್ತದೆ. ನಿಯಮ ಉಲ್ಲಂಘನೆಯಾದರೆ ಕಲ್ಯಾಣಮಂಟಪದವರನ್ನು ಹೊಣೆಗಾರರನ್ನಾಗಿಸಿ ನೊಟೀಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.