'ಮಲಗಿದ್ದ ಗೋವುಗಳ ಮೇಲೆ ಇದೆಂತಾ ದುಷ್ಕೃತ್ಯ'

Kannadaprabha News   | Asianet News
Published : Nov 05, 2020, 12:21 PM IST
'ಮಲಗಿದ್ದ ಗೋವುಗಳ ಮೇಲೆ ಇದೆಂತಾ ದುಷ್ಕೃತ್ಯ'

ಸಾರಾಂಶ

ಮಲಗಿದ್ದ ಗೋವುಗಳ ಮೇಲೆ ಇದೆಂತಾ ದುಷ್ಕೃತ್ಯ.. ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ ಎಂದು ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ಏನಿದು ಘಟನೆ..?

ಬಾಳೆಹೊನ್ನೂರು (ನ.05):   ಪಟ್ಟಣದ ರಂಭಾಪುರಿ ಮಠದ ರಸ್ತೆಯ ಮಸೀದಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಎರಡು ಗೋವುಗಳನ್ನು ಹಂತಕರು ಬರ್ಬರವಾಗಿ ಹತ್ಯೆಗೈದು ಸಾಗಿಸಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಸಹಕಾರ ಸಂಘದ ಆವರಣದಲ್ಲಿ ರಾತ್ರಿವೇಳೆ ಮಲಗಿದ್ದ ಗೋವುಗಳನ್ನು ದುಷ್ಕರ್ಮಿಗಳು ಹತ್ಯೆಗೈದು, ವಾಹನಕ್ಕೆ ತುಂಬಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಅಪಾರ ಪ್ರಮಾಣದ ರಕ್ತ ಹರಿದಿದೆ.

ಇಲ್ಲಿಗೆ ಸಮೀಪದ ಮಸೀದಿಕೆರೆಯಲ್ಲಿ ಗೋ ಹಂತಕರು ಮಲಗಿದ್ದ ಗೋವುಗಳನ್ನು ಬರ್ಬರವಾಗಿ ಹತ್ಯೆ ನಡೆಸಿರುವ ಕೃತ್ಯವನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಪರಿಷತ್ತು ಸದಸ್ಯ ಟಿ.ಎಂ.ಉಮೇಶ್‌ ಕಲ್ಮಕ್ಕಿ ಹೇಳಿದರು.

ಇಲ್ಲಿಗೆ ಸಮೀಪದ ಮಸೀದಿಕೆರೆಯ ಪಿಎಸಿಎಸ್‌ ಶಾಖೆ ಎದುರು ಗೋವುಗಳನ್ನು ಹತ್ಯೆ ಮಾಡಿ ಕೊಂಡೊಯ್ದ ಘಟನೆ ಖಂಡಿಸಿ ವಿಹಿಂಪ ಹಾಗೂ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಬಹುಸಂಖ್ಯಾತ ಹಿಂದೂಗಳು ಗೌರವ ಭಾವನೆಯಿಂದ ಪೂಜಿಸುವ ಗೋ ಮಾತೆಯನ್ನು ಹತ್ಯೆ ನಡೆಸುವುದು ಖಂಡನೀಯ. ಸರ್ಕಾರ ಗೋ ಹತ್ಯೆ ನಿಷೇಧಿಸಿದ್ದರೂ ಪುನಃ ಹತ್ಯೆ ಮಾಡುವ ಮೂಲಕ ಹಿಂದೂಗಳ ಭಾವನೆ ಕೆರಳಿಸುವ ಯತ್ನ ಮಾಡಲಾಗುತ್ತಿದೆ. ಕಿಡಿಗೇಡಿ ಕೃತ್ಯ ನಡೆಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಬಜರಂಗ ದಳದ ಜಿಲ್ಲಾ ಸಂಚಾಲಕ ಶಶಾಂಕ್‌ ಹೇರೂರು ಮಾತನಾಡಿ, ಘಟನೆ ಮರುಕಳಿಸಿದರೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಸಂಘಟನೆಯ ಕಾರ್ಯಕರ್ತರು ಬೀದಿಗಿಳಿದು ಗೋ ಹಂತಕರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಸರ್ಪ ಹೆಡೆಬಿಚ್ಚೀತು : ಎಚ್ಚರಿಕೆ ನೀಡಿದೆ ಮೈಲಾರ ದೇವರ ಕಾರ್ಣಿಕ ಭವಿಷ್ಯ

ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಆರ್‌.ಡಿ.ಮಹೇಂದ್ರ ಮಾತನಾಡಿ, ಪೊಲೀಸ್‌ ಇಲಾಖೆ ತಕ್ಷಣ ಜಿಲ್ಲೆಯ ಎಲ್ಲ ಗಡಿ ಭಾಗಗಳಲ್ಲಿ, ಠಾಣಾ ವ್ಯಾಪ್ತಿಯಲ್ಲಿ ನಿರಂತರ ಚೆಕ್‌ಪೋಸ್ಟ್‌ ಆರಂಭಿಸಬೇಕು. ಆಯಕಟ್ಟಿನ ಭಾಗಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಭಾಸ್ಕರ್‌ ವೆನಿಲ್ಲಾ, ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್‌ ಪ್ರಣಸ್ವಿ, ಸೋಷಿಯಲ್‌ ಮೀಡಿಯಾ ಸಂಚಾಲಕ ಬಿ.ಜಗದೀಶ್ಚಂದ್ರ, ಹೋಬಳಿ ಸಂಯೋಜಕ ಶಮೇಶ್‌, ತಾಲೂಕು ಸಂಚಾಲಕ ಸಂದೀಪ್‌ ಶೆಟ್ಟಿ, ಬಿಜೆಪಿ ಮುಖಂಡ ಕೆ.ಟಿ. ವೆಂಕಟೇಶ್‌, ಮಂಜು ಹಲಸೂರು ಮತ್ತಿತರರು ಹಾಜರಿದ್ದರು.

ಜೇಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾ ಸಭೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಪೊಲೀಸ್‌ ಠಾಣೆಗೆ ತೆರಳಿ ಡಿವೈಎಸ್‌ಪಿ ರಾಜು ಹಾಗೂ ಪಿಎಸ್‌ಐ ನೀತು ಗುಡೆ ಅವರಿಗೆ ಮನವಿ ಸಲ್ಲಿಸಿ ಘಟನೆಯ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

PREV
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!