* ಗ್ರಾಮದಲ್ಲಿ ಸೋಂಕಿನ ಭೀತಿ
* ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
* ಸೆಂಟರ್‌ನಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದು, ಯಾರ ಮಾತನ್ನೂ ಕೇಳುತ್ತಿರಲಿಲ್ಲ ರೋಗಿ
ಮೈಸೂರು(ಜೂ.14): ಕೋವಿಡ್ ಕೇರ್ ಸೆಂಟರ್‌ನಲ್ಲಿ ಅನುಚಿತ ವರ್ತನೆ ತೋರಿದನೆಂದು ಕೊರೋನಾ ಸೋಂಕಿತನನ್ನು ಚಿಕಿತ್ಸೆ ಪೂರ್ಣಗೊಳ್ಳುವ ಮೊದಲೇ ಆತನನ್ನು ಆಟೋವೊಂದರಲ್ಲಿ ಮನೆಗೆ ವಾಪಸ್ ಕಳುಹಿಸಿದ್ದು, ಇದೀಗ ಮನೆಯವರು ಹಾಗೂ ಗ್ರಾಮದವರಿಗೆ ಸೋಂಕಿನ ಭೀತಿ ಎದುರಾಗಿದೆ.
ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಗ್ರಾಮದ ಸಮೀಪದ ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ಈರಪ್ಪ ಎಂಬುವರಿಗೆ ಗುರುವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಆದರೆ, ಈರಪ್ಪ ಸೆಂಟರ್‌ನಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದು, ಯಾರ ಮಾತನ್ನೂ ಕೇಳುತ್ತಿರಲಿಲ್ಲ.
undefined
ಮೈಸೂರು: SSLC ವಿದ್ಯಾರ್ಥಿನಿಯ ಬಾಲ್ಯ ವಿವಾಹ ತಡೆದ ಸ್ನೇಹಿತೆ
ಮೈಮೇಲೆ ಬಟ್ಟೆಯನ್ನು ಸಹ ಧರಿಸುತ್ತಿರಲಿಲ್ಲ, ಇದರಿಂದ ಆತನನ್ನು ಕುಟುಂಬದವರ ಜೊತೆಯಲ್ಲಿ ಸೆಂಟರ್‌ನಿಂದ ಕಳುಹಿಸಿರುವುದಾಗಿ ತಾಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.