ವಿಜಯಪುರದ ಹಲವೆಡೆ ಭೂಕಂಪನದ ಅನುಭವ

Kannadaprabha News   | Asianet News
Published : Jun 14, 2021, 11:16 AM ISTUpdated : Jun 14, 2021, 11:20 AM IST
ವಿಜಯಪುರದ ಹಲವೆಡೆ ಭೂಕಂಪನದ ಅನುಭವ

ಸಾರಾಂಶ

* ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದ ಜನತೆ  * ನಿದ್ದೆ ಮಾಡದೆ ರಾತ್ರಿ ಇಡೀ ಭಯದಲ್ಲಿಯೇ ಕಳೆದ ಜನರು * ಭೂಕಂಪನ ಆಗಿರುವ ಕುರಿತು ಯಾವುದೇ ಮಾಹಿತಿ ದಾಖಲಾಗಿಲ್ಲ: ಡಿಸಿ

ವಿಜಯಪುರ(ಜೂ.14):  ಜಿಲ್ಲೆಯ ಹಲವೆಡೆ ಭಾನುವಾರ ಮುಂಜಾನೆ 2.25 ರಿಂದ 2.30ರ ಅವಧಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. 

ವಿಜಯಪುರ ನಗರದ ಗ್ಯಾಂಗ್‌ ಬಾವಡಿ ಹಾಗೂ ಲೋಹಗಾಂವಿ, ಅರಕೇರಿ, ಕಳ್ಳಕವಟಗಿ ಸೇರಿದಂತೆ ಅನೇಕ ಭಾಗಗಳಲ್ಲಿ ಭಾನುವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ಗಾಢ ನಿದ್ದೆಯಲ್ಲಿದ್ದ ಮಂದಿ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆಯೇ ಹೆದರಿ ಮನೆಯಿಂದ ಆಚೆ ಓಡಿ ಬಂದಿದ್ದಾರೆ. 

ವಿಜಯಪುರ: ಕೊರೋನಾ ನಿಯಮ ಉಲ್ಲಂಘಿಸಿ ಮದುವೆಯಲ್ಲಿ ನೂರಾರು ಜನರು ಭಾಗಿ

ನಿದ್ದೆ ಮಾಡದೆ ರಾತ್ರಿ ಇಡೀ ಭಯದಲ್ಲಿಯೇ ಕಳೆದಿದ್ದಾರೆ. ಆದರೆ, ನಗರ ಸೇರಿದಂತೆ ಜಿಲ್ಲೆಯ ಯಾವ ಭಾಗದಲ್ಲೂ ಭೂಕಂಪನ ಆಗಿರುವ ಕುರಿತು ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!