ಆಂಬ್ಯುಲೆನ್ಸ್‌ನಲ್ಲೇ 2 ತಾಸು ಕೊರೋನಾ ರೋಗಿಯ ಪರದಾಟ

Kannadaprabha News   | Asianet News
Published : Apr 17, 2021, 03:02 PM IST
ಆಂಬ್ಯುಲೆನ್ಸ್‌ನಲ್ಲೇ 2 ತಾಸು ಕೊರೋನಾ ರೋಗಿಯ ಪರದಾಟ

ಸಾರಾಂಶ

ಕೋವಿಡ್‌ ಟೆಸ್ಟ್‌ ಮಾಡಿಸಿದ್ದಕ್ಕೆ ತಕ್ಷಣ ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ| ಸತತ ಎರಡು ತಾಸು ಆಸ್ಪತ್ರೆ ಮುಂದೆ ಆ್ಯಂಬುಲೆನ್ಸ್‌ನಲ್ಲೇ ಪರದಾಡಿದ ರೋಗಿ| ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದ ಘಟನೆ| 

ಬೆಂಗಳೂರು(ಏ.17): ನಗರದ ಉತ್ತರಹಳ್ಳಿಯ ಬಿಜಿಎಸ್‌ ಆಸ್ಪತ್ರೆಗೆ ಆಗಮಿಸಿದ್ದ ನಾನ್‌ ಕೋವಿಡ್‌ ರೋಗಿಯೊಬ್ಬರು ಚಿಕಿತ್ಸೆ ಲಭ್ಯವಾಗದೆ ಪರದಾಡಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುವಾರ ರಾತ್ರಿ ಬಿಜಿಎಸ್‌ ಜಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಸಿಬ್ಬಂದಿ ಕೊರೋನಾ ನೆಗೆಟಿವ್‌ ವರದಿ ನೀಡುವಂತೆ ಕೇಳಿದ್ದಾರೆ. ಪರೀಕ್ಷೆ ಮಾಡಿಸಿಲ್ಲ ಎಂದು ಸಂಬಂಧಿಕರು ತಿಳಿಸಿದ ತಕ್ಷಣ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.

ಬೆಂಗಳೂರೊಂದರಲ್ಲೇ ಆತಂಕದ ಪ್ರಮಾಣದ ಕೇಸ್ : ಸಾವೂ ಹೆಚ್ಚಳ- ಎಚ್ಚರ!

ಪರಿಣಾಮ ರೋಗಿ ಸತತ ಎರಡು ತಾಸು ಆಸ್ಪತ್ರೆ ಮುಂದೆ ಆ್ಯಂಬುಲೆನ್ಸ್‌ನಲ್ಲೇ ಪರದಾಡಿದ್ದಾರೆ. ನಂತರ ಆಸ್ಪತ್ರೆಯ ಹಿರಿಯ ವೈದ್ಯರನ್ನು ಸಂಪರ್ಕಿಸಿದ ಬಳಿಕವಷ್ಟೇ ಚಿಕಿತ್ಸೆ ನೀಡಿದ್ದಾರೆ ಎಂದು ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
 

PREV
click me!

Recommended Stories

ಲಕ್ಕುಂಡಿ ರಹಸ್ಯ: ನೆಲದಾಳದ ನಿಧಿಗೆ ಸರ್ಪಗಾವಲು! ಸರ್ಪ ಕಂಡು ಬೆಚ್ಚಿ ಬಿದ್ದ ಮಂದಿ!
ಲಕ್ಕುಂಡಿ ಉತ್ಖನನದಲ್ಲಿ ಮಡಿಕೆಗಳು ಪತ್ತೆ; ಮಣ್ಣಿನ ಮಡಿಕೆಯೊಳಗೆ ಅಡಗಿದೆಯೇ ಬಂಗಾರದ ನಗ-ನಾಣ್ಯ?