ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೊರೋನಾ ಸೋಂಕಿತ ಕಾಂಪೌಂಡ್ ನಿಂದ ಜಿಗಿದಿದ್ದು, ಈ ವೇಳೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಗಂಗಾವತಿ(ಆ.19): ನಗರದ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವ್ಯಕ್ತಿಯೋರ್ವ ಕಾಂಪೌಂಡ್ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿ ಬಳಿಕ ನರಳಾಡಿ ಸಾವನ್ನಪ್ಪಿದ ದಾರುಣ ಘಟನೆ ಆಸ್ಪತ್ರೆಯ ಹಿಂಭಾಗದಲ್ಲಿ ಮಂಗಳವಾರ ನಡೆದಿದೆ.
ಶೀಘ್ರ ಸಾವಿರಾರು ವೈದ್ಯ ವಿದ್ಯಾರ್ಥಿಗಳು ಕೋವಿಡ್ ಕರ್ತವ್ಯಕ್ಕೆ...
ತಾಲೂಕಿನ ಶ್ರೀರಾಮನಗರದ 40 ವರ್ಷದ ಕೊರೋನಾ ಸೋಂಕಿತ ವ್ಯಕ್ತಿ ಚಿಕಿತ್ಸೆಗೆಂದು ಸೋಮವಾರ ಸಂಜೆ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದ. ಪರಿಸ್ಥಿತಿ ಗಂಭೀರವಾಗಿಯೇ ಇತ್ತು. ಉಸಿರಾಟದ ತೊಂದರೆ ಜೊತೆಯಲ್ಲಿ ತೀವ್ರ ಸಂಕಟ, ನರಳಾಟ, ಬಳಲಿಕೆಯೂ ಇತ್ತು ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಮನೆಯವರಿಗೆ ದೂರವಾಣಿ ಕರೆ ಮಾಡಿ ನನಗೆ ಆರಾಮವಾಗಿದೆ, ಬಂದು ಕರೆದೊಯ್ಯುವಂತೆ ತಿಳಿಸಿದ್ದಾನೆ. ಆಸ್ಪತ್ರೆಯಲ್ಲಿ ನನಗೆ ಶೌಚಾಲಯಕ್ಕೆ ಹೋಗಬೇಕೆಂದು ಸುಳ್ಳು ಹೇಳಿ ಸಲಾಯಿನ್ ಮತ್ತಿತರ ಉಪಕರಣ ತೆಗೆಸಿಕೊಂಡಿದ್ದು ಬಳಿಕ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾಂಪೌಂಡ್ ಹಾರಿದ್ದಾನೆ.
ಕೊರೋನಾ ಪರೀಕ್ಷಾ ದರದಲ್ಲಿ ಭಾರಿ ಇಳಿಕೆ : ಸರ್ಕಾರದ ಆದೇಶ...
ಕಾಂಪೌಂಡ್ ಹಾರಿ ಇನ್ನಷ್ಟುಅಸ್ವಸ್ಥಗೊಂಡಿದ್ದಾನೆ. ಸಂಕಟವಾಗುತ್ತಿದ್ದು, ಯಾರಾದರು ನೀರು ಕೊಡಿ ಎಂದು 1ನೇ ವಾರ್ಡಿನ ಪಂಪಾನಗರ ಪ್ರದೇಶದ ಜನರಲ್ಲಿ ಬೇಡಿದ್ದಾನೆ. ಸ್ಥಳೀಯರು ಬಿಸಿ ನೀರು ಕಾಯಿಸಿ ಕೊಟ್ಟಿದ್ದಲ್ಲದೆ ನಿನಗೆ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಆದರೆ, ಆ ವ್ಯಕ್ತಿ ನೀರು ಕುಡಿದು ಅಲ್ಲಿಯೇ ಕುಸಿದು ಮೃತಪಟ್ಟಿದ್ದಾನೆ. ಸ್ಥಳೀಯರಿಂದ ಮಾಹಿತಿ ಪಡೆದ ವೈದ್ಯರು, ಪೊಲೀಸರು ಮತ್ತು ನಗರಸಭೆಯವರು ಆಗಮಿಸಿ ಪರಿಶೀಲಿಸಿದ ನಂತರ ಶವವನ್ನು ಶ್ರೀರಾಮನಗರಕ್ಕೆ ಕಳಿಸಿಕೊಟ್ಟಿದ್ದಾರೆ. ನಂತರ ನಗರಸಭೆಯವರು ಆ ಪ್ರದೇಶವನ್ನು ಸ್ಯಾನಿಟೈಸ್ ಮಾಡಿದರು.