ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ದಾವಣಗೆರೆ ಜಿಲ್ಲೆ ಆನಎಕೊಂಡದ ಬಸವೇಶ್ವರ ಸ್ವಾಮಿ ಕಾರ್ಣಿಕ ನುಡಿದಿದ್ದು, ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ (ಆ.18): ರಾಮ ರಾಮ ಎಂದು ನುಡಿದೀತಲೇ
ಬುತ್ತಿಯ ರಾಶಿಗೆ ಮುತ್ತು ಬಿಗಿದೀತು
ಶೃಂಗಾರದ ವನಕ್ಕೆ ನರಲೋಕದ ಒಳ್ಳೆಯ ಗಾಳಿ ಬೀಸೀತಲೇ
ಶೃಂಗಾರದ ಮನೆಗೆ ನರಲೋಕದ ಆನೆ ಚರ ಉಗ್ಗೀತು
ಎಚ್ಚರ ಲೇ!
ಇದು ಪ್ರತೀ ವರ್ಷ ಕಾರ್ಣಿಕದ ಮೂಲಕ ವರ್ಷದ ಆಗು ಹೋಗುಗಳ ಬಗ್ಗೆ ಸೂಚ್ಯವಾಗಿ ಸುಳಿವು ನೀಡುವ ಸಂದೇಶವೆಂದೇ ಕರೆಯಲ್ಪಡುವ ಇಲ್ಲಿನ ಆನೆಕೊಂಡದ ಶ್ರೀಬಸವೇಶ್ವರ ಸ್ವಾಮಿ 2020ನೇ ಸಾಲಿನ ಶ್ರಾವಣ ಮಾಸದ ಕಡೆಯ ಸೋಮವಾರದ ಕಾರ್ಣಿಕವಾಗಿದೆ.
ಈ ವರ್ಷ ಎಲ್ಲೆಡೆ ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ಇರುವ ಬೆನ್ನಲ್ಲೇ ಬಸವೇಶ್ವರರು ಎಚ್ಚರಿಕೆಯನ್ನು ನೀಡಿದ್ದಾರೆ.
ಕಪ್ಪೆಳ್ಳು ದಾನ ಮಾಡಿದ್ರೆ ಧನ ಲಾಭ..! ನೀವರಿಯದ ಕಪ್ಪೆಳ್ಳಿನ ಗುಣಗಳಿವು
ಮಧ್ಯ ಕರ್ನಾಟಕದ ರಾಜ್ಯ ರಾಷ್ಟ್ರದ ಭವಿಷ್ಯವೆಂದೇ ಕರೆಯಲ್ಪಡುವ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣಿಕ ಹಾಗೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಆಚರಣೆಯಾಗುತ್ತಾ ಬಂದಿತ್ತು. ಆದರೆ ಈ ಬಾರಿ ಕೊರೋನಾ ಹಿನ್ನೆಲೆ ಜಾತ್ರಾಮಹೋತ್ಸವ ರದ್ದು ಮಾಡಲಾಗಿತ್ತು.
ಪಾರಿಜಾತ ಪುರಾಣ; ಆರೋಗ್ಯಕ್ಕೆ ರಾಮಬಾಣ.
ದೇವಸ್ಥಾನದಲ್ಲೆ ಊರಿನ ಮುಖಂಡರ ಸಮ್ಮುಖದಲ್ಲಿ ಪೂಜೆ ಹಾಗೂಕಾರ್ಣಿಕವನ್ನು ನೆರವೇರಿಸಲಾಯಿತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಸವೇಶ್ವರ ಸ್ವಾಮಿಯ ದರ್ಶನ ಪಡೆದರು.