ಮುಂಬೈನಿಂದ ಬಂದಿದ್ದರೂ ಶಿವಮೊಗ್ಗ ಅಥವಾ ಸಾಗರದ ಉಪವಿಭಾಗೀಯ ಆಸ್ಪತ್ರೆಗಾಗಲೀ ತೆರಳಿ ಮಾಹಿತಿ ನೀಡಿರಲಿಲ್ಲ. ಸುದ್ದಿ ತಿಳಿದ ತಕ್ಷಣ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಸ್ಥಳೀಯ ಗ್ರಾಮ ಪಂಚಾಯ್ತಿಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಂಜೆ 6 ಗಂಟೆಯ ಸುಮಾರಿಗೆ ಅಂಬ್ಯುಲೆನ್ಸ್‌ನಲ್ಲಿ ದಂಪತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಇದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಜೂ.29): ತಾಲೂಕಿನ ಯಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ಕರ್ಕಿಕೊಪ್ಪ ಗ್ರಾಮದಲ್ಲಿ ಮುಂಬೈನಿಂದ ಬಂದವರಿಂದ ಕೊರೋನಾತಂಕ ಶುರುವಾಗಿದೆ. ಶುಕ್ರವಾರ ಮಧ್ಯಾಹ್ನ ಮುಂಬೈನಿಂದ ಓರ್ವ ಮಹಿಳೆ ಪತಿಯೊಂದಿಗೆ ಖಾಸಗಿ ವಾಹನದಲ್ಲಿ ತವರುಮನೆಗೆ ಬಂದಿದ್ದಾರೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪವೇ ಈಕೆ ತಾಯಿ ಮನೆ ಇದೆ.
ಮುಂಬೈನಿಂದ ಬಂದಿದ್ದರೂ ಶಿವಮೊಗ್ಗ ಅಥವಾ ಸಾಗರದ ಉಪವಿಭಾಗೀಯ ಆಸ್ಪತ್ರೆಗಾಗಲೀ ತೆರಳಿ ಮಾಹಿತಿ ನೀಡಿರಲಿಲ್ಲ. ಸುದ್ದಿ ತಿಳಿದ ತಕ್ಷಣ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಸ್ಥಳೀಯ ಗ್ರಾಮ ಪಂಚಾಯ್ತಿಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಂಜೆ 6 ಗಂಟೆಯ ಸುಮಾರಿಗೆ ಅಂಬ್ಯುಲೆನ್ಸ್‌ನಲ್ಲಿ ದಂಪತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಗಂಟಲುದ್ರವದ ಮಾದರಿ ಪರೀಕ್ಷೆಗೆ ಕಳಿಸಿ ಕ್ವಾರೆಂಟೈನ್‌ಗೆ ಕಳಿಸಲಾಗಿದೆ ಎನ್ನಲಾಗಿದೆ. ಒಂದೊಮ್ಮೆ ಈ ದಂಪತಿಗೆ ಸೋಂಕು ಇರುವುದು ದೃಢಪಟ್ಟರೆ ಗ್ರಾಮದ ಈಕೆಯೆ ತಾಯಿ ಮನೆಯನ್ನು ಸೀಲ್‌ಡೌನ್ ಮಾಡುವ ಸಾಧ್ಯತೆ ಇದೆ.
ಗದಗ: 40 ಮಂದಿಗೆ ಕೊರೋನಾ ವೈರಸ್ ಅಂಟಿಸಿದ ನೀರಾವರಿ ಇಲಾಖೆಯ ಅಕೌಂಟೆಂಟ್
ಇದರಿಂದಾಗಿ ಗ್ರಾಮದ ಜನರಿಗೆ ಆತಂಕ ಶುರುವಾಗಿದೆ. ಪಂಚಾಯ್ತಿಯ ಕೇಂದ್ರ ಸ್ಥಾನವಾದ ಕರ್ಕಿಕೊಪ್ಪ ಗ್ರಾಮದಲ್ಲಿ ನೂರಾರು ಕುಟುಂಬಗಳಿವೆ. ಗ್ರಾಮದ ಆಸುಪಾಸಿನಲ್ಲಿ ಹತ್ತಾರು ಗ್ರಾಮಗಳಿವೆ. ದಿನನಿತ್ಯ ಕೇಂದ್ರಸ್ಥಾನವಾದ ಕರ್ಕಿಕೊಪ್ಪಕ್ಕೆ ತಮ್ಮ ದೈನಂದಿನ ಕೆಲಸಕ್ಕೆ ನೂರಾರು ಜನರು ಬಂದುಹೋಗುತ್ತಾರೆ. ಈಗ ಎಲ್ಲರಿಗೂ ಕೋರೋನಾತಂಕ ಶುರುವಾಗಿದ್ದು ಯಾವುದಕ್ಕೂ ಸ್ವ್ಯಾಬ್ ವರದಿ ಬರುವತನಕ ಕಾಯಬೇಕಾಗಿದೆ.