ಮಹಾರಾಷ್ಟ್ರದಿಂದ ಬೆಳಗಾವಿಗೆ ಮತ್ತೆ ಕೊರೋನಾ ಆತಂಕ

Kannadaprabha News   | Asianet News
Published : Sep 09, 2021, 07:20 AM IST
ಮಹಾರಾಷ್ಟ್ರದಿಂದ ಬೆಳಗಾವಿಗೆ ಮತ್ತೆ ಕೊರೋನಾ ಆತಂಕ

ಸಾರಾಂಶ

ತಾಲೂಕಿನ ವಿವಿಧ ಭಾಗಗಳಿಂದ ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿರುವ ಅಸಂಖ್ಯಾತ ಮಂದಿ  ಚತುರ್ಥಿ ಹಿನ್ನೆಲೆಯಲ್ಲಿ ತವರಿನತ್ತ ಮುಖ ಮಾಡಿದ್ದು, ಕೊರೋನಾ ಭೀತಿ 

ಖಾನಾಪುರ (ಸೆ.09):  ತಾಲೂಕಿನ ವಿವಿಧ ಭಾಗಗಳಿಂದ ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿರುವ ಅಸಂಖ್ಯಾತ ಮಂದಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತವರಿನತ್ತ ಮುಖ ಮಾಡಿದ್ದು, ಕೊರೋನಾ ಭೀತಿ ಎದುರಾಗಿದೆ.

ತಾಲೂಕಿನ ವಿವಿಧ ಭಾಗಗಳಿಂದ ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿರುವವರು ಪ್ರತಿವರ್ಷ ಗಣೇಶ ಹಬ್ಬಕ್ಕೆ ಮರಳಿ ತಮ್ಮ ಸ್ವಗ್ರಾಮಗಳಿಗೆ ಬಂದು ಹಲವು ದಿನ ತಂಗುವ ವಾಡಿಕೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಕಳೆದ ವರ್ಷ ಅಂತಾರಾಜ್ಯ ಪ್ರವಾಸಕ್ಕೆ ಉಭಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಮಹಾರಾಷ್ಟ್ರದಿಂದ ಜನರು ಇಲ್ಲಿಗೆ ಬಂದಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಮಹಾರಾಷ್ಟ್ರದಲ್ಲಿ ಯಾವುದೇ ಕಟ್ಟೆಚ್ಚರ ಜಾರಿಯಲ್ಲಿಲ್ಲ. ಜೊತೆಗೆ ಕರ್ನಾಟಕದ ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯದಿರುವುದೇ ಸಾಕಷ್ಟುಜನರು ಇಲ್ಲಿಗೆ ಬರಲು ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಕೋವಿಡ್‌ ರೋಗದ ತೀವ್ರತೆ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಅಲ್ಲಿಂದ ಬಂದ ಜನರಿಂದ ರೋಗ ಹರಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾಗೆ 2 ವರ್ಷದ ಮಗು ಸಾವು: 3ನೇ ಅಲೆಯ ಮುನ್ಸೂಚನೆಯೇ?

ಕಳೆದ ಕೆಲ ತಿಂಗಳುಗಳ ಹಿಂದೆ ಮಹಾರಾಷ್ಟ್ರದಿಂದ ತಾಲೂಕಿನ ಅಬನಾಳಿ ಗ್ರಾಮಕ್ಕೆ ಕೆಲ ನಾಗರಿಕರು ಬಂದಿದ್ದರಿಂದ ಅವರಿಂದ ಇಡೀ ಅಬನಾಳಿ ಗ್ರಾಮಕ್ಕೆ ಕೋವಿಡ್‌ ಸೋಂಕು ವ್ಯಾಪಿಸಿತ್ತು. ಒಂದೇ ಗ್ರಾಮದ 144 ನಾಗರಿಕರಲ್ಲಿ ಕೋವಿಡ್‌ ಪಾಸಿಟಿವ್‌ ವರದಿಯಾಗಿತ್ತು. ಈಗಲೂ ತಾಲೂಕು ಆಡಳಿತ, ಗ್ರಾಮ ಪಂಚಾಯ್ತಿಗಳು ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಈ ವರ್ಷದ ಗಣೇಶೋತ್ಸವ ಕೂಡ ಮಾರಕವಾಗುವುದರಲ್ಲಿ ಅನುಮಾನ ಇಲ್ಲ ಆತಂಕ ಕಾಡುತ್ತಿದೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ