ಕೊರೋನಾ ಸಂಕಷ್ಟ : ಈ ಕುಟುಂಬಗಳಿಗೆ ಮಾಸಿಕ ಸಹಾಯಧನ..?

Kannadaprabha News   | Asianet News
Published : Sep 07, 2020, 12:08 PM ISTUpdated : Sep 07, 2020, 01:03 PM IST
ಕೊರೋನಾ ಸಂಕಷ್ಟ : ಈ ಕುಟುಂಬಗಳಿಗೆ ಮಾಸಿಕ ಸಹಾಯಧನ..?

ಸಾರಾಂಶ

ಕೊರೋನಾ ಹಾವಳಿ ಬಡ ಕುಟುಂಬಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಆರ್ಥಿಕ ಸಹಾಯದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂಧು ಆಗ್ರಹಿಸಲಾಗಿದೆ. 

ಗುಬ್ಬಿ (ಸೆ.07):  ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳಿಗೆ ಕೋವಿಡ್‌ ಸಮಸ್ಯೆ ಇತ್ಯರ್ಥವಾಗುವವರೆಗೆ ಮಾಸಿಕ 7,500 ರು.ಗಳ ನೆರವು ನೀಡಬೇಕು. ಜತೆಗೆ ತಲಾ 10 ಕೆಜಿಯಷ್ಟುಆಹಾರ ಸಾಮಗ್ರಿ ನೀಡಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಒತ್ತಾಯಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂದೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು, ಪ್ರಾಂತ ರೈತ ಸಂಘ ಅಂಗನವಾಡಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಗುಣಹೊಂದಿದ ಮಹಿಳೆಗೆ ಮತ್ತೆ ಕೊರೋನಾ! ಎಚ್ಚರ! ...

ಅಸಂಘಟಿತ ಕಾಮಿಕರಾದ ಟೈಲರ್‌ಗಳು, ಮನೆಗೆಲಸಗಾರರು, ಬೀದಿಬದಿ ವ್ಯಾಪಾರಿಗಳು, ಹಮಾಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಕಟ್ಟಡ ಕಾರ್ಮಿಕರು ಹೀಗೆ ಹಲವು ಮಂದಿ ಕಾರ್ಮಿಕರ ಬದುಕಿಗೆ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಬೇಕು ಎಂದ ಅವರು ಬಗರ್‌ಹುಕುಂ ಸಮಿತಿ ರಚಿಸಿ ಬಡ ರೈತರ ಸಾಗುವಳಿ ಚೀಟಿ ವಿತರಿಸಲು ಕ್ರಮವಹಿಸಬೇಕಾದ ಸರ್ಕಾರ ಕಂದಾಯ ಇಲಾಖೆ ದಾಖಲೆಗಳಿರುವ ಸ್ಥಳವನ್ನು ಅರಣ್ಯವೆಂದು ಅನುಭವದಲ್ಲಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ತುರ್ತು ನಿಗಾವಹಿಸಿ ಬಡ ರೈತರ ಜಮೀನು ಹಕ್ಕು ನೀಡಬೇಕು ಜತೆಗೆ ದಾಖಲೆಯಲ್ಲಿನ ಪೈಕಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕೊರೋನಾ ಲಸಿಕೆ ಕದಿಯಲು ಗುಪ್ತಚರ ದಳಗಳ ರೇಸ್‌! .

ನಂತರ ತಹಸೀಲ್ದಾರ್‌ ಡಾ.ಪ್ರದೀಪ್‌ಕುಮಾರ್‌ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತಸಂಘದ ಅಜ್ಜಪ್ಪಯ್ಯ, ಲೋಕೇಶ್‌, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲ, ತಾಲೂಕು ಅಧ್ಯಕ್ಷೆ ಅನುಸೂಯ, ತಾಲೂಕು ಕಾರ್ಯದರ್ಶಿ ಮಂಜುಳಾ, ಸರೋಜಾದೇವಿ, ವಿರೂಪಾಕ್ಷಮ್ಮ, ಮುಖಂಡರಾದ ಮಧು, ಈರಣ್ಣ, ದೊಡ್ಡನಂಜಯ್ಯ, ನರಸಿಂಹಮೂರ್ತಿ ಇತರರು ಇದ್ದರು.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ