ಚಿಕ್ಕಮಗಳೂರು/ಬೆಳಗಾವಿ [ಮಾ.14]: ಮಾ.15ರಂದು ನಡೆಯಬೇಕಿರುವ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಹಾಗೂ ಮಾ.19ರಂದು ನಿಗದಿಯಾಗಿರುವ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಪುತ್ರಿಯ ಮದುವೆಗೂ ಕಿಲ್ಲರ್ ಕೊರೋನಾ ಭೀತಿ ಕಾಡಲಾರಂಭಿಸಿದೆ. ಶಾಸಕ ರಾಜೇಗೌಡರ ಪುತ್ರಿ ಡಾ.ಸಂಜನಾ ಅವರ ವಿವಾಹ ಮಾ.19ರಂದು ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ವಚನ್ ಲಕ್ಷ್ಮಣ್ ಎಂಬುವರ ನಿಗದಿಯಾಗಿದ್ದು, ಮದುವೆ ಸಕಲ ಸಿದ್ಧತೆಗಳು ನಡೆದಿವೆ. ಇದರ ನಡುವೆ ಇದೀಗ ಸರ್ಕಾರ ಅದ್ಧೂರಿ ಮದುವೆಗಳಿಗೆ ಬ್ರೇಕ್ ಹಾಕಿದ್ದು, ಶಾಸಕರ ಮಗಳ ಮದುವೆಗೆ ಗಣ್ಯಾತಿಗಣ್ಯರು ಆಗಮಿಸುವುದು ಅನುಮಾನವಾಗಿದೆ.
ಕವಟಗಿಮಠ ಪುತ್ರಿ ವಿವಾಹಕ್ಕೂ ಭೀತಿ
ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಮಾ.15 ರಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕವಟಗಿಮಠ ತಮ್ಮ ಬಂಧು ಬಳಗ, ಆಪ್ತರು, ಸ್ನೇಹಿತರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಮತ್ತಿತರರಿಗೆ ವಿವಾಹ ಆಹ್ವಾನ ಪತ್ರಿಕೆಯನ್ನು ನೀಡಿದ್ದಾರೆ. ವಿವಾಹಕ್ಕೆ ಇನ್ನೊಂದು ದಿನ ಬಾಕಿ ಇದ್ದು, ಯಾವ ರೀತಿ ವಿವಾಹ ಮಾಡಬೇಕೆಂಬ ಚಿಂತನೆಯಲ್ಲಿ ತೊಡಗಿದ್ದಾರೆ.
ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ಮದುವೆ ಕಾರ್ಯದಲ್ಲಿ ಎಷ್ಟುಜನ ಭಾಗವಹಿಸಬಹುದು ಎಂದು ಸರ್ಕಾರದಿಂದ ಅಧಿಕೃತವಾಗಿ ಸುತ್ತೋಲೆ ಹೊರಬಂದರೆ ಅದರಂತೆ ನಡೆದುಕೊಳ್ಳಲಾಗುವುದು. ಶಾಸಕನಾಗಿ ಇದು ನನ್ನ ಜವಾಬ್ದಾರಿಯೂ ಆಗಿದೆ.
- ಟಿ.ಡಿ.ರಾಜೇಗೌಡ, ಶಾಸಕ
ಮಾಜಿ ಶಾಸಕರ ಪುತ್ರಿಯ ಮದುವೆಗೂ ತಟ್ಟಿದ ಬಿಸಿ:
"