ದೊಡ್ಡಬಳ್ಳಾಪುರದ ಮಹಿಳೆಯೋರ್ವರಿಗೆ ಕೊರೋನಾ ತಗುಲಿದೆ ಎಂದು ವೈದ್ಯರು ಹೇಳಿದ್ದು, ಆತಂಕಗೊಂಡ ಘಟನೆ ನಡೆದಿದೆ. ಆದರೆ ವೈದ್ಯರ ಯಡವಟ್ಟಿನಿಂದ ಇದೆಲ್ಲಾ ಆಗಿದೆ.
ದೊಡ್ಡಬಳ್ಳಾಪುರ [ಮಾ.14]: ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ವದಂತಿ ಹಬ್ಬಿ, ಜನರಲ್ಲಿ ಆತಂಕ ಮನೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ನಡೆದಿದೆ. ಸ್ವತಃ ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು ಇದನ್ನು ನಿರಾಕರಿಸಿದ್ದು, ಮಹಿಳೆಗೆ ಕೊರೋನಾ ಸೋಂಕು ತಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
undefined
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್, ಜ್ವರ ಹಾಗೂ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು, ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳನ್ನು ಗಮನಿಸಿ, ರೋಗಿಯ ತಪಾಸಣೆ ಪುಸ್ತಕದಲ್ಲಿ ಕೋವಿಡ್-9 ಶಂಕೆ ವ್ಯಕ್ತಪಡಿಸಿ ವರದಿ ಬರೆದಿದ್ದಾರೆ.
ಕೊರೋನಾ ತಗುಲಿಸಿಕೊಂಡರೆ, ಈ ಕಂಪನಿ ಕೊಡುತ್ತೆ ದೊಡ್ಡ ಮೊತ್ತ!..
ಜತೆಗೆ ಆಂಬುಲೆನ್ಸ್ ಅನ್ನು ಕರೆಸಿ ರೋಗಿಯನ್ನು ಬೆಂಗಳೂರಿನ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಮಹಿಳೆಯನ್ನು ಕಳುಹಿಸಿದ್ದಾರೆ. ಅಲ್ಲದೆ ತಮ್ಮ ತಪಾಸಣೆ ವರದಿ ಪ್ರತಿಯನ್ನು ಫೋಟೋ ತೆಗೆದು ಮಾಧ್ಯಮಗಳಿಗೆ ತಾವೇ ಹರಿಬಿಟ್ಟು ಆತಂಕ ಸೃಷ್ಟಿಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿಲಾಗಿದೆ ಎಂದಿದ್ದಾರೆ.