ಬೆಂಗ್ಳೂರಲ್ಲಿ ವಾಯು ಮಾಲಿನ್ಯ ಪ್ರಮಾಣ ಕುಸಿತ: ಕಾರಣ ಕೊರೋನಾ ವೈರಸ್..!

Published : Mar 19, 2020, 10:35 PM IST
ಬೆಂಗ್ಳೂರಲ್ಲಿ ವಾಯು ಮಾಲಿನ್ಯ ಪ್ರಮಾಣ ಕುಸಿತ: ಕಾರಣ ಕೊರೋನಾ ವೈರಸ್..!

ಸಾರಾಂಶ

ಬೆಂಗಳೂರು ಎನ್ನುವ  ಕಾಂಕ್ರೀಟ್  ಕಾಡಿನಲ್ಲಿ, ವಾಹನಗಳ ಹೊಗೆಮಯವಾಗಿದ್ದ ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳಿಂದ ಸುಂದರ ಪ್ರಕೃತಿ ಸೌಂದರ್ಯದಿಂದ ತಂಗಾಳಿ ಹೆಚ್ಚಾಗಿದೆ. ಅಂದ್ರೆ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಕಾರಣ ಕೊರೋನಾ ವೈರಸ್. 

ಬೆಂಗಳೂರು, (ಮಾ.19): ಯಾವಾಗಲೂ ಹೊಗೆಯಿಂದ ತುಂಬಿಕೊಂಡಿರುತ್ತಿದ್ದ ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳಿಂದ ತೃಪ್ತಿಕರ ವಾತಾವರಣ ಸಿಗುತ್ತಿದೆ. ಇದಕ್ಕೆ ಕಾರಣ ಕೊರೋನಾ ವೈರಸ್. ಅರೇ ಇದೇನಿದು ಕೊರೋನಾ ವೈರಸ್‌ಗೂ ವಾಯು ಮಾಲಿನ್ಯ ಪ್ರಮಾಣ ಕುಸಿತಕ್ಕೂ ಏನು ಕಾರಣ? ಎಂದು ಅಚ್ಚರಿ ಎನಿಸಿದರೂ ಸತ್ಯ.

ಹೌದು... ಕೊರೋನಾ ವೈರಸ್‌ನಿಂದ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದಾ ವಾಹನಗಳ ದಟ್ಟಣೆಯಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಿನ ರೋಡುಗಳು ಬಿಕೋ ಎನ್ನುತ್ತಿವೆ. 

ಕೊರೋನಾ ವೈರಸ್ ಭಯಕ್ಕೆ ಯಾರು ರಸ್ತೆಗೆ ಇಳಿಯದೇ ಮನೆಯಲ್ಲಿಯೇ ಬೀಡುಬಿಟ್ಟಿದ್ದಾರೆ.ಇದ್ರಿಂದ ವಾಹನ ಸಂಚಾರದಲ್ಲೂ ಕಡಿಮೆಯಾಗಿದ್ದು, ಮಾಲಿನ್ಯ ಪ್ರಮಾಣ ಇಳಿಕೆಯಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಕೊರೋನಾ ವೈರಸ್‌ನಿಂದ ದೇಶವನ್ನ ಉಳಿಸಲು ನಮೋ ಮಂತ್ರ..!

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಟಿಸಿದ್ದು, ಸಿಲಿಕಾನ್ ಸಿಟಿಯಲ್ಲಿ ಸದ್ಯ ಇರುವ ಗಾಳಿ ತೃಪ್ತಿಕರ, ಯೋಗ್ಯ ಗಾಳಿ ಎಂದು ವರದಿಯಲ್ಲಿ ತಿಳಿಸಿದೆ.

ನಗರದಲ್ಲಿ ಜನದಟ್ಟಣೆ ಕಡಿಮೆಯಾಗಿ ವಾಹನಗಳ ಓಡಾಟ ನಿಯಂತ್ರಣದಿಂದ ಒಂದು ವಾರದಿಂದ ಅಂದ್ರೆ ಮಾರ್ಚ್ 9ರಿಂದ ಮಾ.18ರವರೆಗೆ ಶೇ.10-15ರಷ್ಟು ಮಾಲಿನ್ಯ ಪ್ರಮಾಣದಲ್ಲಿ ಕುಸಿದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಸಿಟಿ ರೈಲು ನಿಲ್ದಾಣ, ಬಸವೇಶ್ವರ ನಗರ, ಹೆಬ್ಬಾಳ, ಮೈಸೂರು ರಸ್ತೆ, ನಿಮ್ಹಾನ್ಸ್ , ಸಿಲ್ಕ್ ಬೋರ್ಡ್ ಬಳಿ ಮೌಲ್ಯ ಮಾಪನ ಮಾಡಿ ಈ ವರದಿ ನೀಡಿದೆ.

PREV
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ