ದುಬೈ To ಕೊಡಗು: ಕೊರೋನಾ ವೈರಸ್ ಸೋಂಕಿತನ ಸುತ್ತಾಟ ಪತ್ತೆ

By Suvarna News  |  First Published Mar 19, 2020, 5:46 PM IST

ಕೊಡಗಿನ ವ್ಯಕ್ತಿ ಕೊರೋನಾ ಸೋಂಕು ಇರುವುದು ಖಚಿತವಾಗಿದ್ದು, ಕೊರೋನಾ ವೈರಸ್ ಸೋಂಕಿತನ ಜಾಡು ಮತ್ತೆ ಮಾಡಲಾಗಿದೆ.ಎಲ್ಲೆಲ್ಲಿ ಸುತ್ತಾಡಿದ್ರು..? ಎನ್ನುವುದನ್ನ ಕೊಡಗು ಜಿಲ್ಲಾಡಳಿತ ಪತ್ತೆ ಮಾಡಿದೆ. ಹಾಗಾದ್ರೆ ಸೋಂಕಿತ ಸುತ್ತಾಡಿದ ರೂಟ್ ಮ್ಯಾಪ್ ಈ ಕೆಳಗಿನಂತಿದೆ ನೋಡಿ.


ಕೊಡಗು. (ಮಾ.19): ಇಂದು (ಗುರುವಾರ) ಕೊಡಗಿನಲ್ಲಿ ವ್ಯಕ್ತಿಯೊಬ್ಬರಲ್ಲಿ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ. 

ದುಬೈಯಿಂದ ಪ್ರವಾಸದಿಂದ ಹಿಂತಿರುಗಿದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇರುವುದು ಅಧಿಕೃತಗೊಂಡಿದ್ದು, ಆ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಜಿಲ್ಲೆಯಲ್ಲಿ ಆತಂಕ ಉಂಟಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಹೆಲ್ತ್‌ ಎಮರ್ಜೆನ್ಸಿ ಘೋಷಿಸಿದ್ದಾರೆ.

Tap to resize

Latest Videos

ಮಡಿಕೇರಿಯಲ್ಲಿ ಮೊತ್ತೊಬ್ಬ ವ್ಯಕ್ತಿಗೆ ಕೊರೋನಾ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

 ಸೋಂಕಿತನ ಸುತ್ತಾಟ
 ಸೋಂಕಿತ ವ್ಯಕ್ತಿ ಪ್ರಯಾಣಿಸಿದ ಬಸ್ ಮತ್ತು ಫ್ಲೈಟ್ ಅನ್ನ ಜಿಲ್ಲಾಡಳಿತ ಪತ್ತೆ ಮಾಡಿದ್ದು, ಬಸ್ ಹಾಗೂ ವಿಮಾನದಲ್ಲಿ ಪ್ರಯಾಣಿಸಿದವರಿಗೆ ಕೂಡಲೇ 
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಕೊರೋನಾ ಕನ್ಫರ್ಮ್ ಕೇಸ್: ಮಡಿಕೇರಿಯಲ್ಲಿ ಹೆಲ್ತ್ ಎಮರ್ಜೆನ್ಸಿ

ದುಬೈ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಮಾ.15ರ ಬೆಳಗ್ಗೆ ಬಸ್‍ನಲ್ಲಿ ಮೈಸೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿಂದ ರಾಜಹಂಸ ಬಸ್‍ನಲ್ಲಿ ಮಡಿಕೇರಿಗೆ ಪ್ರಯಾಣ ಮಾಡಿದ್ದಾನೆ. ಬಳಿಕ ಗ್ರಾಮಕ್ಕೆ ತೆರಳಿದ್ದಾನೆ. ರಾಜಹಂಸ ಬಸ್ ಮೈಸೂರಿನಲ್ಲಿ ಟೀ, ಕಾಫಿಗೆ ನಿಲ್ಲಿಸಿತ್ತು ಎನ್ನುವುದು ತಿಳಿದುಬಂದಿದೆ.

* ದುಬೈ-ಬೆಂಗಳೂರು ಇಂಡಿಗೋ 6E96 ವಿಮಾನದಲ್ಲಿ ಆಗಮನ
* ಮಾ.15 ಸಂಜೆ 4.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್
* ರಾತ್ರಿ 11.30ಕ್ಕೆ ಮಡಿಕೇರಿ ಕಡೆ ಪ್ರಯಾಣ
* KA19 F 3170 ರಾಜಹಂಸ ಬಸ್‌ನಲ್ಲಿ ಪ್ರಯಾಣ
* 16ರ ನಸುಕಿನ ಜಾವ ಮೂರ್ನಾಡುವಿಗೆ ಆಗಮಿಸಿದ ಬಸ್
* ಬೆಂಗಳೂರು-ಮೈಸೂರು-ವಿರಾಜಪೇಟೆ ಮಾರ್ಗದಲ್ಲಿ‌ ಮೂರ್ನಾಡಿಗೆ ಆಗಮಿಸಿದ ಬಸ್

District Administration Kodagu, Karnataka releases advisory asking those who were on IndiGo flight 6E96 on 15th March, KSRTC Bus No. KA19F3170 from Bengaluru to Madikeri, should report to the nearest Govt hospital, as a positive case of COVID19 had used these facilities. pic.twitter.com/EJpwml2QFf

— ANI (@ANI)

15ನೆ ಸೋಂಕಿತ ವ್ಯಕ್ತಿಯು, 15.03.2020 ರ ರಾತ್ರಿ 11.35ಕ್ಕೆ ಹೊರಟ KA 19 F3170 ನೋಂದಣಿ ಸಂಖ್ಯೆಯ KSRTC ರಾಜಹಂಸ ಬಸ್ಸಿನಲ್ಲಿ ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಡಿಕೇರಿಗೆ ಕಡೆಗೆ ಪ್ರಯಾಣಿಸಿದ್ದು, ಇವರೊಂದಿಗೆ ಆ ಬಸ್ಸಿನಲ್ಲಿ 33 ಪ್ರಯಾಣಿಕರು ಮುಂಗಡ ಟಿಕೆಟ್ ಬುಕಿಂಗ್ ಇಲ್ಲದೆ ಪ್ರಯಾಣಿಸುತ್ತಾರೆ.

— B Sriramulu (@sriramulubjp)
click me!