ಮೂರಂಕಿಗೆ ಕೊರೋನಾ ಸೋಂಕಿತರ ಸಂಖ್ಯೆ : ಎರಡು ಸಾವು

Kannadaprabha News   | Asianet News
Published : Nov 09, 2020, 10:22 AM ISTUpdated : Nov 09, 2020, 11:01 AM IST
ಮೂರಂಕಿಗೆ ಕೊರೋನಾ ಸೋಂಕಿತರ ಸಂಖ್ಯೆ :  ಎರಡು ಸಾವು

ಸಾರಾಂಶ

ಕೊರೋನಾ ಸೋಂಕಿತರ ಸಂಖ್ಯೆ ಅತ್ಯಂತ ಕಡಿಮೆಯಾಗಿದ್ದು ಸಾವಿನ ಸಂಖ್ಯೆಯಲ್ಲಿಯೂ ಭಾರೀ ಇಳಿಕೆಯಾಗಿದೆ. 

ಮೈಸೂರು(ನ.09):  ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 135 ಮಂದಿಗೆ ಕೊರೋನಾ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈಗಾಗಲೇ ಸೋಂಕಿತರ ಪೈಕಿ 69 ಮಂದಿ ಗುಣಮುಖರಾಗಿ ಡಿಸ್ಚಾಜ್‌ರ್‍ ಆಗಿದ್ದಾರೆ.

ಕೊರೋನಾ ಸೋಂಕಿತರ ಸಂಪರ್ಕದಿಂದ 91, ಐಎಲ…ಐ ಪ್ರಕರಣ 29, ಸರಿ ಪ್ರಕರಣ 4, ಇತರೆ 11 ಸೇರಿದಂತೆ ಒಟ್ಟು 135 ಮಂದಿಗೆ ಸೋಂಕು ಇರುವುದು ದೃಢವಾಗಿದೆ.

ಕೋವಿಡ್‌ -19 ಸಂಬಂಧ ಜಿಲ್ಲೆಯಲ್ಲಿ ಈವರೆಗೂ ಒಟ್ಟು 312749 ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಇದರಲ್ಲಿ 256803 ಮಂದಿ 14 ದಿನಗಳ ಐಸೋಲೇಶನ್‌ ಮುಗಿಸಿದ್ದಾರೆ. ಇನ್ನೂ 7191 ಮಂದಿಯನ್ನು 14 ದಿನಗಳ ಹೋಂ ಐಸೋಲೇಶನ್‌ನಲ್ಲಿ ಇರಿಸಲಾಗಿದೆ.

ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌: ಚಳಿಗಾಲದಲ್ಲಿ ಕೊರೋನಾ ಆಯಸ್ಸು ಹೆಚ್ಚು.

ಜಿಲ್ಲೆಯಲ್ಲಿ ಈವರೆಗೂ 48755 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಇದರಲ್ಲಿ 46,712 ಮಂದಿ ಗುಣಮುಖರಾಗಿದ್ದು, 974 ಮಂದಿ ಮೃತಪಟ್ಟಿದ್ದಾರೆ. ಉಳಿದ 1069 ಮಂದಿ ಸಕ್ರಿಯ ಸೋಂಕಿತರ ಪೈಕಿ 153 ಮಂದಿಯನ್ನು ಸರ್ಕಾರಿ ಕೋವಿಡ್‌ ಆಸ್ಪತ್ರೆ, 291 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ, 60 ಮಂದಿಯನ್ನು ಸರ್ಕಾರಿ ಹಾಗೂ 74 ಮಂದಿಯನ್ನು ಖಾಸಗಿ ಕೋವಿಡ್‌ ಹೆಲ್ತ್‌ ಕೇರ್‌ಗಳಲ್ಲಿ, 36 ಮಂದಿಯನ್ನು ಸರ್ಕಾರಿ ಹಾಗೂ 12 ಮಂದಿಯನ್ನು ಖಾಸಗಿ ಕೋವಿಡ… ರ್ಕೇ ಕೇಂದ್ರಗಳಲ್ಲಿ ಹಾಗೂ 443 ಮಂದಿಯನ್ನು ಮನೆಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೂ 371389 ಜನರ ಸ್ಯಾಂಪಲ್‌ ಪರೀಕ್ಷಿಸಲಾಗಿದೆ.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!