ಗುಡ್ ನ್ಯೂಸ್: ನೂರಕ್ಕಿಂತಲೂ ಕೆಳಗಿಳಿದ ಕೊರೋನಾ ಮರೆಯಾಗುವ ದಾರಿಯತ್ತ

Kannadaprabha News   | Asianet News
Published : Oct 29, 2020, 03:12 PM IST
ಗುಡ್ ನ್ಯೂಸ್: ನೂರಕ್ಕಿಂತಲೂ ಕೆಳಗಿಳಿದ ಕೊರೋನಾ ಮರೆಯಾಗುವ ದಾರಿಯತ್ತ

ಸಾರಾಂಶ

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಕೊರೋನಾ ಮಹಾಮಾರಿ ಸಂಪೂರ್ಣ ಇಳಿಕೆಯತ್ತ ಸಾಗಿದೆ

ಮಂಗಳೂರು (ಅ.29):  ಕೆಲ ದಿನಗಳಿಂದ ಕೊರೋನಾ ಇಳಿಮುಖವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸೋಂಕಿತರ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿದಿದೆ. 

99 ಮಂದಿಗೆ ಪಾಸಿಟಿವ್‌ ದೃಢಪಟ್ಟಿದ್ದು, ಮೂವರು ಸಾವಿಗೀಡಾಗಿದ್ದಾರೆ. 161 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 30 ಸಾವಿರ ಸಮೀಪಿಸಿದೆ (ಒಟ್ಟು 29,914). ಇವರಲ್ಲಿ ಇದುವರೆಗೆ 27,019 ಮಂದಿ ಗುಣಮುಖರಾಗಿದ್ದರೆ, 671 ಮಂದಿ ಮೃತಪಟ್ಟಿದ್ದಾರೆ. ಗುಣಮುಖರ ಸಂಖ್ಯೆ ಏರುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಹಾದಿಯಲ್ಲಿದೆ.

ಕೊರೋನಾ ಪಾಸಿಟಿವ್‌ ಕೇಸ್‌ ರಾಜ್ಯದಲ್ಲೇ ಉತ್ತರ ಕನ್ನಡದಲ್ಲಿ ಅತಿ ಕಡಿಮೆ ..

ಪ್ರಸ್ತುತ 2,224 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2,51,859 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದುವರೆಗೆ ಒಟ್ಟು 10,010 ಮಾಸ್ಕ್‌ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, 11,22,535 ರು. ದಂಡ ವಸೂಲಿ ಮಾಡಲಾಗಿದೆ.

PREV
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು