'ಕೊರೋನಾಗೆ ಹೆದರದಿರಿ : ಅದಕ್ಕಿಂತ ಮಾರಕ ರೋಗ ಬಂದು ಹೋಗಿದೆ'

By Kannadaprabha NewsFirst Published Sep 28, 2020, 9:46 AM IST
Highlights

ದೇಶದಲ್ಲಿ ಕೊರೋನಾಕ್ಕಿಂತ ಮಾರಕ ರೋಗ ಬಂದು ಹೋಗಿವೆ. ಕೊರೋನಾಗೆ ಭಯ ಬೀಳದಿರಿ ಎಂದು ವೈದ್ಯರು ಸೂಚಿಸಿದ್ದಾರೆ. ಕೊರೋನಾ ಜಾಗೃತಿ ಕಾರ್ಯಕ್ರಮದಲ್ಲಿ ಈ ವಿಚಾರ ತಿಳಿಸಲಾಗಿದೆ.

ಮೈಸೂರು (ಸೆ.28): ಕೊರೋನಕ್ಕಿಂತಲೂ ಇನ್ನೂ ಹೆಚ್ಚಿನ ಮಾರಕ ರೋಗಗಳು ನಮ್ಮ ದೇಶದಲ್ಲಿ ಹಿಂದೆ ಬಂದು ಹೋಗಿವೆ ಎಂದು ಪ್ರಾಧ್ಯಾಪಕ ಡಾ.ಕೆ. ಜಯರಾಮ್‌ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ರಾವಂದೂರಿನ ಮಾನಸ ಸಾಂಸ್ಕೃತಿಕ ಸೇವಾ ಕೇಂದ್ರದಲ್ಲಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಸೆ.23 ರಂದು ಪ್ರಕಟವಾದ ಕೊರೋನಾ ಏಪ್ರಿಲ್‌ನಲ್ಲಿ ತಾರಕಕ್ಕೆ ಎಂಬ ಕನ್ನಡಪ್ರಭ ವರದಿಯಿಂದ ಎಚ್ಚೆತ್ತು ಆಯೋಜಿಸಿದ್ದ ಕೋವಿಡ್‌-19 ಮತ್ತು ನಾವು-ನೀವು ಎಂಬ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ದೇಶದಲ್ಲಿ ಇಂದಿನಿಂದಲೂ ಒಂದಲ್ಲ ಒಂದು ಮಾರಕ ರೋಗಗಳು ಬಂದು ಹೋಗುತ್ತಿದ್ದು, ಅವುಗಳಿಗೂ ಸೂಕ್ತ ಪರಿಹಾರವಾಗಿ ಔಷಧಿಗಳು ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೊರೋನಾ ಎಂಬ ಕಾಯಿಲೆ ಬಂದು ಪ್ರಾರಂಭದ ಹಂತದಲ್ಲಿ ಜನರು ಹೆಚ್ಚು ಭಯಭೀತರಾಗಿದ್ದರು.

ಕೊರೋನಾ ಸಂಕಷ್ಟದ ಕಾಲದಲ್ಲೂ ಹೊಸ ಉದ್ದಿಮೆ ಆರಂಭ..!

ಆದರೆ, ಕಾಲಕ್ರಮೇಣ ಕೊರೋನಾ ಭೀತಿ ಕಡಿಮೆಯಾಗಿ ಜನರು ಸಹಜ ಸ್ಥಿತಿಯತ್ತ ಬರುತ್ತಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೊರೋನಾ ಮೃತರ ಸಂಖ್ಯೆ ಕಡಿಮೆ ಇದೆ. ಇದು ಇನ್ನು ಮುಂದೆ ಕೊರೋನಾ ಕಾಯಿಲೆ ಕಡಿಮೆಯಾಗುವ ಸೂಚನೆಯಾಗಿದೆ. ಜನರು ಭಯಪಡುವ ಅಗತ್ಯವಿಲ್ಲ. ತಮ್ಮ ಜವಾಬ್ದಾರಿಯನ್ನರಿತು ಕಾಯಿಲೆ ಬರದಂತೆ ಎಚ್ಚರವಹಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.

'ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು, ಮಾಸ್ಕ್‌ ಧರಿಸಿದ್ದರೆ ಅಂಗಡಿ ಬದುಕಿರುತ್ತಿದ್ದರು' ...

ನಮ್ಮ ದೇಶದಲ್ಲಿ ಮೊದಲಿನಿಂದಲೂ ಕೊರೋನಾ ವೈರಸ್‌ ಇತ್ತು ಆದರೆ, ಈ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ವಾತಾವರಣಕ್ಕೆತಕ್ಕಂತೆ ಒಂದಲ್ಲಾ ಒಂದು ರೋಗಗಳು ಹರಡುತ್ತಿದ್ದು, ಅವುಗಳಿಗೆ ಸೂಕ್ತ ಚಿಕಿತ್ಸೆ ದೊರೆತಿದೆ ಆದರೆ, ಕೊರೋನಾಕ್ಕೆ ಇನ್ನು ಸೂಕ್ತ ರೀತಿಯಲ್ಲಿ ಔಷಧಿ ದೊರೆಯದಕಾರಣ ಔಷಧಿ ಕಂಡು ಹಿಡಿಯಲು ಸಂಶೋಧನೆ ನಡೆಯುತ್ತಿದೆ. ಔಷಧಿ ಸಿಗುವವರೆಗೆ ಜನರು ಜಾಗೃತರಾಗಿರಬೇಕು ಎಂದರು.

ಡಾ.ಪ್ರಕಾಶ್‌ಬಾಬುರಾವ್‌ ಮಾತನಾಡಿ, ಕೊರೋನಾ ಭೀತಿಗೆ ಜನರು ಹೆಚ್ಚು ಆತಂಕ ಪಡದೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆರೋಗ್ಯದ ಕಡೆ ಗಮನಹರಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದದಂತೆ ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಬಳಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಆಹಾರ ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.

click me!