ಆ್ಯಸಿಡ್‌ ದಾಳಿ ಸಂತ್ರಸ್ತೆಗೆ ರಕ್ತದಾನ ಮಾಡಿ ಪೊಲೀಸರ ಮಾನವೀಯತೆ..!

By Kannadaprabha NewsFirst Published Jun 17, 2022, 9:17 PM IST
Highlights

*   ಕಾಮಾಕ್ಷಿಪಾಳ್ಯ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ
*  ಆ್ಯಸಿಡ್‌ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಯುವತಿ 
*  ಹೊಸೂರು ರಸ್ತೆಯ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ 

ಬೆಂಗಳೂರು(ಜೂ.17): ಇತ್ತೀಚೆಗೆ ಪ್ರೇಮ ವಿಚಾರವಾಗಿ ಆ್ಯಸಿಡ್‌ ದಾಳಿಗೆ ತುತ್ತಾಗಿದ್ದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ 24 ವರ್ಷದ ಯುವತಿ ಶಸ್ತ್ರ ಚಿಕಿತ್ಸೆ ಸಲುವಾಗಿ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್‌ ಸೇರಿದಂತೆ ಐವರು ಪೊಲೀಸರು ಗುರುವಾರ ರಕ್ತದಾನ ಮಾಡಿದ್ದಾರೆ.

ಹೊಸೂರು ರಸ್ತೆಯ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಶಸ್ತ್ರ ಚಿಕಿತ್ಸೆಗೆ ರಕ್ತದ ಅವಶ್ಯಕತೆ ಬಗ್ಗೆ ಪೋಷಕರಿಂದ ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಮಾಹಿತಿ ಪಡೆದಿದ್ದರು. 

ಬೆಂಗಳೂರು: ಮದುವೆಗೆ ಒಪ್ಪಲಿಲ್ಲ ಅಂತ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ದಾಳಿ..!

ಈ ಮಾತಿಗೆ ಸ್ಪಂದಿಸಿದ ಪ್ರಶಾಂತ್‌ ಅವರು, ತಮ್ಮ ಠಾಣೆಯ ಪ್ರೊಬೇಷನರಿ ಪಿಎಸ್‌ಐ ವಿಶ್ವನಾಥ್‌ ರೆಡ್ಡಿ, ಸಿಬ್ಬಂದಿ ಮೋಹನ್‌ ಕುಮಾರ್‌, ಚಂದ್ರಯ್ಯ ಹಾಗೂ ನಟರಾಜ್‌ ಜತೆ ಗುರುವಾರ ಆಸ್ಪತ್ರೆಗೆ ತೆರಳಿ ಐದು ಬಾಟಲಿ ರಕ್ತ ದಾನ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.
 

click me!