ಸಹಕಾರಿ ಸಂಘಗಳು ರೈತರ ಬೆನ್ನೆಲುಬು: ಉದಾಸಿ

By Web DeskFirst Published Sep 23, 2019, 12:43 PM IST
Highlights

ಸಹಕಾರಿ ಸಂಘಗಳು ರೈತರ ಬೆನ್ನೆಲುಬು| ಗ್ರಾಮೀಣ ಭಾಗಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಹಕಾರಿ ಬ್ಯಾಂಕುಗಳು ಪೈಪೋಟಿ ನೀಡುತ್ತಿವೆ| ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿವೆ| ಈ ಮೂಲಕ ದುರ್ಬಲ ಮತ್ತು ರೈತಾಪಿ ವರ್ಗದವರ ಆರ್ಥಿಕ ಅಭಿವೃದ್ಧಿಯ ಕನಸಿಗೆ ಬೆನ್ನೆಲುಬಾಗಿ ಸಹಕರಿಸುತ್ತಿವೆ| 

ಅಕ್ಕಿಆಲೂರು:(ಸೆ.23) ಗ್ರಾಮೀಣ ಭಾಗಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗುತ್ತಿರುವ ಸಹಕಾರಿ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವ ಮೂಲಕ ದುರ್ಬಲ ಮತ್ತು ರೈತಾಪಿ ವರ್ಗದವರ ಆರ್ಥಿಕ ಅಭಿವೃದ್ಧಿಯ ಕನಸಿಗೆ ಬೆನ್ನೆಲುಬಾಗಿ ಸಹಕರಿಸುತ್ತಿವೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

ಪಟ್ಟಣದ ಚನ್ನವೀರೇಶ್ವರ ವಿರಕ್ತಮಠದಲ್ಲಿ ನಡೆದ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕಿನ 60ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಸ್ಥಾಪನೆಗೊಳ್ಳುವ ಸಹಕಾರಿ ಬ್ಯಾಂಕುಗಳು ರೈತ ವರ್ಗದವರ, ಮಧ್ಯಮ ಮತ್ತು ದುರ್ಬಲವರ್ಗದವರನ್ನು ಸಮಾಜಮುಖಿಯಾಗಿ ಮುನ್ನಡೆಸುವಲ್ಲಿ ಸಕಾರಾತ್ಮಕ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಆಧುನಿಕ ಜಗತ್ತಿನ ಬೇಡಿಕೆಗಳಿಗನುಸಾರವಾಗಿ ಸಾಲ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ವರ್ಷದಿಂದ ವರ್ಷಕ್ಕೆ ಲಾಭಗಳಿಸುತ್ತ ಬಂದ ಲಾಭದಿಂದ ಬ್ಯಾಂಕುಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿ ಗ್ರಾಹಕರಿಗೆ ವಿನೂತನ ಸೇವೆ ನೀಡುತ್ತಿರುವುದು ಬ್ಯಾಂಕಿನ ಪ್ರಾಮಾಣಿಕ ಆಡಳಿತ ಮತ್ತು ವಿಶ್ವಸನೀಯ ನಡುವಳಿಕೆಯನ್ನು ಬಿಂಬಿಸುತ್ತದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಹೆಚ್ಚಿನ ಸೇವೆ ಒದಗಿಸಲು ಅನುವು ಮಾಡಿಕೊಡುವುದು ಸದಸ್ಯರೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. 

ಇದೆ ವೇಳೆ ಮಾತನಾಡಿದ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಸಹಕಾರಿ ಬ್ಯಾಂಕಗಳು ಹಳ್ಳಿಗರ ಜೀವನಾಡಿಯಾಗಿದ್ದು, ಆಯಾ ಭಾಗದ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಸಾಲ ವಿತರಣೆ ಮಾಡುವ ಸಹಕಾರಿ ಬ್ಯಾಂಕಗಳ ಕಾರ್ಯ ತತ್ಪರತೆ ಅಭಿನಂದನಾರ್ಹವಾಗಿದೆ. ಆರಂಭದಿಂದಲೇ ಈ ಭಾಗದ ಜನರ ಆಶಾಕಿರಣವಾಗಿ, ಭವಿಷ್ಯದ ಭದ್ರ ಬುನಾದಿಯಾಗಿ ಹೆಮ್ಮರವಾಗಿ ಬೆಳೆದು ನಿಂತಿರುವ ಅರ್ಬನ್‌ ಬ್ಯಾಂಕ್‌ ಜನರ ಜೊತೆಗೆ ಉತ್ತಮ ಬಾಂಧವ್ಯವಿಟ್ಟುಕೊಳ್ಳುವ ಮೂಲಕ ಗ್ರಾಮೀಣ ಭಾಗಗಳ ಅಭಿವೃದ್ಧಿಯ ಕನಸು ಕಾಣುತ್ತಿದೆ ಎಂದು ನುಡಿದರು. 

ಬಳಿಕ ಮಾತನಾಡಿದ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಅವರು, ಆರ್ಥಿಕವಾಗಿ ಗ್ರಾಮೀಣರು ಬಲಿಷ್ಠರಾಗುವಂತೆ ಪ್ರೇರೇಪಿಸುವ ಯತ್ನ ಮುಂದುವರೆಸಿಕೊಂಡು ಸಾಗಿರುವ ಅರ್ಬನ್‌ ಬ್ಯಾಂಕ್‌ ಇದೀಗ ನೂತನ ಸೇವೆಗಳೊಂದಿಗೆ ಗ್ರಾಹಕರ ಸೇವೆಗೆ ತನ್ನನ್ನು ತಾನು ತೆರೆದುಕೊಂಡಿದೆ. ಬ್ಯಾಂಕು ನವೀಕೃತಗೊಂಡು ಸದಸ್ಯರಿಗೆ ತ್ವರಿತಗತಿಯಲ್ಲಿ ಎಲ್ಲಾ ಸೇವೆಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು 


ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ವಿವಿಧ ಪ್ರಯತ್ನಗಳನ್ನು ನಡೆಸಿ ಉತ್ತಮ ನಿರ್ದೇಶನದ ಮೂಲಕ ಈ ಭಾಗದ ರೈತರ, ವ್ಯಾಪಾರಸ್ಥರಿಗೆ ನೆರವಾಗುವ ಪ್ರಮುಖ ಉದ್ಧೇಶವನ್ನು ಬ್ಯಾಂಕು ಹೊಂದಿದೆ. ಭಾರತೀಯ ರಿಸವ್‌ರ್‍ ಬ್ಯಾಂಕು ಮುಂದೆ ತರಬಹುದಾದ ಬದಲಾವಣೆಗಳನ್ನು ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಆರ್‌ಟಿಜಿಎಸ್‌, ನೆಫ್ಟ್‌ ಮತ್ತು ಪ್ರತ್ಯೇಕ ಐಎಫ್‌ಎಸ್‌ಸಿ ಕೊಡ್‌ಗಳ ವ್ಯವಸ್ಥೆಯನ್ನು ಈಗಾಗಲೇ ಬ್ಯಾಂಕು ಆರಂಭಿಸಿದೆ. ಮುಂದಿನ 3 ವರ್ಷಗಳಲ್ಲಿ ಬ್ಯಾಂಕು ಶತಮಾನೋತ್ಸವ ಆಚರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ ಎಂದು ತಿಳಿಸಿದರು. 
 

click me!