ಸುರಪುರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಹಕಾರ: ಸಚಿವ ದರ್ಶನಾಪೂರ್‌

By Kannadaprabha News  |  First Published Aug 18, 2023, 11:00 PM IST

ಕ್ಷೇತ್ರದಲ್ಲಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಹುಲಕಲ್‌, ಕಂಚನಕವಿ, ಶಖಾಪುರ ಮತ್ತು ಅಳ್ಳಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ 25 ಕೋಟಿ ಮಂಜೂರು ಮಾಡಲಾಗಿದ್ದು, ಅಂದಾಜು ಪತ್ರಿಕೆ ಸಿದ್ಧಪಡಿಸಿ 2 ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು. ಈ ಎರಡು ಯೋಜನೆಗಳು ಪೂರ್ಣಗೊಂಡಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರ್‌


ಶಹಾಪುರ(ಆ.18): ನಗರದಲ್ಲಿ ಕೈಗಾರಿಕೋಧ್ಯಮ ಸ್ಥಾಪನೆಗಾಗಿ ವಿವಿಧಡೆ ಲಭ್ಯವಿರುವ ಸರಕಾರಿ ಜಮೀನು ಪರಿಶೀಲನೆ ನಡೆಸಿ ಪತ್ತೆ ಹಚ್ಚಲಾಗಿದ್ದು ಮುಂಬರುವ ದಿನಗಳಲ್ಲಿ ಸ್ಥಳಾವಕಾಶದ ಆಧಾರದಲ್ಲಿ ಕೈಗಾರಿಕೋಧ್ಯಮ ಪ್ರಾರಂಭಿಸಲು ಅನುಕೂಲ ಕಲ್ಪಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರ್‌ ಹೇಳಿ​ದ​ರು.

ನಗರದಲ್ಲಿ ವಿವಿಧಡೆ ಕಂದಾಯ ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ಅವರು ಕೈಗಾರಿಕೋದ್ಯಮಕ್ಕಾಗಿ ಸ್ಥಳ ಪರಿಶೀಲನೆ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಗರದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸುಮಾರು 8 ಎಕರೆ ಜಮೀನು ಲಭ್ಯವಾಗಿದೆ. ಇನ್ನೂ ಹೆಚ್ಚಿಗೆ ಜಮೀನು ಲಭ್ಯವಿದ್ದಲ್ಲಿ ಸರ್ಕಾರದಿಂದ ಖರೀದಿಸಿ ವಿವಿಧ ಸಮುದಾಯಗಳಿಗೆ ವಸತಿ ಸೌಕರ್ಯ ಮತ್ತು ಉಳಿದ ಸರ್ಕಾರಿ ಜಮೀನಿನಲ್ಲಿ ಸ್ಮಶಾನ ಭೂಮಿಗಾಗಿ ಮೀಸಲಿಡಲಾಗುವುದು ಎಂದು ತಿಳಿಸಿದರು.

Latest Videos

undefined

'ಮುಸ್ಲಿಮರ ವೋಟು ಬೇಡ' ಎಂಬ ಕೆಲವರ ತೆವಲಿಗೆ 30% ವೋಟುಗಳೂ ಹೋದ್ವು: ಛಲವಾದಿ

ಕುಡಿವ ನೀರಿಗೆ 120 ಕೋಟಿ ಅನುದಾನ ಮಂಜೂರು:

ನಗರದ ಜನತೆಗೆ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ 4 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 120 ಕೋಟಿ ರು.ಗಳು ಅಮೃತ 2.0 ಯೋಜನೆಯಡಿ ಅನುದಾನ ಮಂಜೂರು ಮಾಡಿದ್ದು, ಅಂದಾಜು ಪತ್ರಿಕೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ದರ್ಶನಾಪೂರ್‌ ಹೇಳಿದರು.

ನಗರದ ಜನತೆಗೆ ಈಗಾಗಲೇ 70 ಕೋಟಿ ರು.ಗಳ ವೆಚ್ಚದಲ್ಲಿ ಭೀಮಾನದಿಯಿಂದ ಪೈಪ್‌ಲೈನ್‌ ಮೂಲಕ ಫಿಲ್ಟರ್‌ ಬೆಡ್‌ ಕೆರೆಗೆ ನೀರು ಸರಬರಾಜು ಮಾಡುವ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಕೆರೆಯಿಂದ ನಗರದಾದ್ಯಂತ ದಿನದ 24ಗಂಟೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು 150 ಕೋಟಿ ರು.ಗಳ ಅನುದಾನ ನೀಡುವಂತೆ ಪ್ರಸ್ಥಾವನೆ ಸಲ್ಲಿಸಲಾಗಿತ್ತು. ಸದ್ಯ ಮುಖ್ಯಮಂತ್ರಿಗಳು ನಗರದ ಯೋಜನೆಗೆ 95 ಕೋಟಿ ಮಂಜೂರು ಮಾಡಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಹುಲಕಲ್‌, ಕಂಚನಕವಿ, ಶಖಾಪುರ ಮತ್ತು ಅಳ್ಳಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ 25 ಕೋಟಿ ಮಂಜೂರು ಮಾಡಲಾಗಿದ್ದು, ಅಂದಾಜು ಪತ್ರಿಕೆ ಸಿದ್ಧಪಡಿಸಿ 2 ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು. ಈ ಎರಡು ಯೋಜನೆಗಳು ಪೂರ್ಣಗೊಂಡಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದರು.

ತಹಸೀಲ್ದಾರ್‌ ಉಮಾಕಾಂತ ಹಳ್ಳೆ, ಪೌರಾಯುಕ್ತ ರಮೇಶ ಬಡಿಗೇರ್‌ ಸೇರಿದಂತೆ ಕಂದಾಯ ಮತ್ತು ನಗರಸಭೆ ಅಧಿಕಾರಿಗಳು, ನಗರ ವಸತಿ ಯೋಜನೆ ಮಾಜಿ ಅಧ್ಯಕ್ಷ ವಸಂತ ಸುರಪುರಕರ್‌ ಹಾಗೂ ಮುಖಂಡರು ಇದ್ದರು.

click me!