ಮತಾಂತರಕ್ಕೆ ಯತ್ನ : 20 ಮಂದಿ ಅರೆಸ್ಟ್

By Kannadaprabha News  |  First Published Mar 15, 2021, 11:25 AM IST

ಕ್ರಿಶ್ಚಿಯನ್ ಮಿಷನರಿಯ ಸದಸ್ಯರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಈ ಸಂಬಂಧ 20 ಮಂದಿ ಅರೆಸ್ಟ್ ಮಾಡಲಾಗಿದೆ.  ತುಮಕೂರು ಜಿಲ್ಲೆ ತಿಪಟೂರಲ್ಲಿ ಈ ಘಟನೆ ನಡೆದಿದೆ. 


ತುಮಕೂರು (ಮಾ.15):  ಮತಾಂತರಕ್ಕೆ ಯತ್ನಿಸುತ್ತಿದ್ದವರ ಮೇಲೆ ಸ್ಥಳೀಯರು ದಾಳಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮತಾಂತರ ಯತ್ನದ ಆರೋಪದಲ್ಲಿ 20 ಜನರನ್ನ ಅರೆಸ್ಟ್ ಮಾಡಲಾಗಿದೆ. 

ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸರು ಮತಾಂತರ ಯತ್ನದ ಆರೋಪದಡಿಯಲ್ಲಿ 20 ಜನರನ್ನು ಬಂಧಿಸಿದ್ದಾರೆ. 

Tap to resize

Latest Videos

ಕ್ರಿಶ್ಚಿಯನ್ ಮಿಷನರಿ ಸದಸ್ಯರು ಸ್ಥಳೀಯರಿಗೆ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದರು ಎನ್ನಲಾಗಿದೆ‌. ಸ್ಥಳೀಯರು ನೀಡಿದ ದೂರಿನ ಮೇಲೆ 20 ಮಂದಿಯನ್ನು ಬಂಧಿಸಲಾಗಿದೆ. 

'ಮತಾಂತರ ಮಹಾಮೋಸ' ಬಯಲಿಗೆಳೆದ ಕವರ್ ಸ್ಟೋರಿಗೆ ಗೂಳಿಹಟ್ಟಿ ಶೇಖರ್ ಅಭಿನಂದನೆ ..

ತಿಪಟೂರು ನಗರದ ಗೊರಗೊಂಡನಹಳ್ಳಿಯಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದರೆನ್ನಲಾಗಿದೆ. ಮನೆಯೊಂದನ್ನು ಬಾಡಿಗೆ ಪಡೆದು ಇಲ್ಲಿಯೇ ವಾಸ ಮಾಡುತ್ತಾ ಈ ಕೃತ್ಯ ಎಸಗುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ತಿಪಟೂರು ನಗರ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

click me!