‘ವಿಷ ಹಾಕಿಬಿಟ್ಟಾರು... ಪ್ರಸಾದ ತಿನ್ನಲು ಭಯಪಡುತ್ತೇನೆ..'

By Web DeskFirst Published Dec 6, 2018, 5:13 PM IST
Highlights

ಸಂವಿಧಾನದ ಕುರಿತಾಗಿ ಮತ್ತೆ ತೋಂಟದಾರ್ಯ ಮಠದ ಶ್ರೀ  ನಿಜಗುಣಾನಂದ ಸ್ವಾಮೀಜಿ‌ ಮಾತನಾಡಿದ್ದಾರೆ. ಬ್ರಾಹ್ಮಣರನ್ನು ತಮ್ಮ ಮಾತಿನ ಮಧ್ಯೆ ಎಳೆದು ತಂದಿದ್ದಾರೆ.

ಧಾರವಾಡ[ಡಿ.06] ನಾನು ಹೊರಗೆ ದೇವರ ಪ್ರಸಾದ ತಿನ್ನುವುದಕ್ಕೂ ವಿಚಾರ ಮಾಡುತ್ತೇನೆ. ಪ್ರಸಾದದಲ್ಲಿ ವಿಷ ಹಾಕಿಬಿಟ್ಟಾರು ಎಂದು ಭಯಪಡುತ್ತೇನೆ ಎಂದು ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ‌ ಆತಂಕ ವ್ಯಕ್ತಪಡಿಸಿದ್ದಾರೆ.

"

ಧಾರವಾಡ ಕವಿವಿಯಲ್ಲಿ ನಡೆದ ಅಂಬೇಡ್ಕರ್‌ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಅಂಬೇಡ್ಕರ್‌ ಅವರ ಸಂವಿಧಾನವೇ ನಮ್ಮಂತಹ ಸ್ವಾಮೀಜಿಗಳಿಗೆ ಮಾತನಾಡುವ ಅವಕಾಶ ಕಲ್ಪಿಸಿದೆ. ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ನಮ್ಮನ್ನು ಗುಂಡಿಕ್ಕಿ ಕೊಲ್ಲುತ್ತಿದ್ದರು ಎಂದು ಹೇಳಿದರು.

‘ಚುನಾವಣಾ ಸಮಯದಲ್ಲಿ ಜನಿವಾರ ಹಾಕ್ಕೊಂಡ್ರೆ ಪ್ರಯೋಜನವಿಲ್ಲ’

ನಾನು ಬ್ರಾಹ್ಮಣ ವಿರೋಧಿ ಇಲ್ಲ. ನಾನು ಎಂದಿಗೂ ಬ್ರಾಹ್ಮಣರನ್ನು ಬೈಯುವುದಿಲ್ಲ. ಬ್ರಾಹ್ಮಣರನ್ನು ಬೈಯುವುದು ಅಂದರೆ ನಮ್ಮ ದೇಶದಲ್ಲಿ ಅದು ಅಪರಾಧ ಆಗುತ್ತದೆ ಎಂದು ವಿಡಂಬನಾತ್ಮಕವಾಗಿ ಹೇಳಿದರು.

ತುಪ್ಪ ತಿಂದವರಿಂದ ದೇಶ ಹಾಳಾಗಿದೆ ಹೊರತು ಮಾಂಸ ತಿಂದವರಿದ್ದಲ್ಲ ಅಂತಾ ಮಾತ್ರ ನಾನು ಹೇಳಿದ್ದೆ. ನಾನು ಹೇಳಿದ ರೀತಿಯೇ ಬೇರೆ ಜನ ತಿಳಿದುಕೊಂಡಿದ್ದೇ ಬೇರೆ. ಬ್ರಾಹ್ಮಣ ವಿರೋಧಿ ಎನ್ನುವ ಶಬ್ದವೇ ಬಹಳ ದೊಡ್ಡದು. ಮತೀಯವಾದಿಗಳು, ಜಾತಿವಾದಿಗಳು, ಪಟ್ಟಭದ್ರಹಿತಾಸಕ್ತಿಗಳಿ ಸಮಾಜ ಒಡೆಯುವ ಕೆಲಸವನ್ನು ಸದಾ ಮಾಡಿಕೊಂಡು ಬಂದಿವೆ ಎಂದು ಆರೋಪಿಸಿದರು.

click me!