ತಾರಕಕ್ಕೇರಿದ ಶಿವಯೋಗಿ ಸ್ವಾಮೀಜಿ-ವಿನಯ ಕುಲಕರ್ಣಿ ನಡುವಿನ ವಾಕ್ಸಮರ

By Web DeskFirst Published Nov 28, 2018, 10:10 PM IST
Highlights

ಧಾರವಾಡದ ಮುರುಘಾಮಠದ ಮಾಜಿ ಪೀಠಾಧಿಪತಿ ಶ್ರೀ ಶಿವಯೋಗಿ ಸ್ವಾಮೀಜಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ನಡುವಿನ ವಾಕ್ಸಮರ  ತಾರಕ್ಕೇರಿದೆ. ಏನದು? ಇಲ್ಲಿದೆ ನೋಡಿ

ಧಾರವಾಡ, [ನ.28]: ಧಾರವಾಡದ ಶ್ರೀ ಮುರುಘಾಮಠದ ಮಾಜಿ ಪೀಠಾಧಿಪತಿ ಶ್ರೀ ಶಿವಯೋಗಿ ಸ್ವಾಮೀಜಿ ಆರೋಪ ಹಿನ್ನೆಲೆ ಮಾಜಿ ಸಚಿವ ವಿನಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ. 

ಧಾರವಾಡದಲ್ಲಿ ಇಂದು [ಬುಧವಾರ] ಪ್ರತಿಕ್ರಿಯಿಸಿರುವ ವಿನಯ್ ಕುಲಕರ್ಣಿ, ಅವ್ಯವಹಾರ ನಡೆದಿದ್ದರಿಂದ ನಾವು ಸಾವಿರಾರು ಭಕ್ತರು ಸೇರಿ ಅವರನ್ನ ಹೊರ ಹಾಕಿದ್ದು, ಮಠದ ಆಸ್ತಿ ಸೇಲ್ ಮಾಡಿದ್ದರು.  9 ವರ್ಷಗಳ ಹಿಂದೆ ನಡೆದ ಘಟನೆ ಆಗಿದ್ದು, ಮಠದ ವಿಚಾರವಾಗಿ ನ್ಯಾಯಾಲಯದಲ್ಲಿ ಸ್ವಾಮೀಜಿ ಸೋತಿದ್ದಾರೆ ಎಂದು ತಿರುಗೇಟು ನೀಡಿದರು.

ನನಗೆ ಅವರ ಮದುವೆ‌ ವಿಚಾರ ಗೊತ್ತಿಲ್ಲ, ಆದರೆ‌ ಮಠದ ಆಸ್ತಿ ಬಗ್ಗೆ ಅಷ್ಟೇ ಗೊತ್ತು . ಇದು ಸಮಾಜದ ಮಠ, ಅದು ನನ್ನ ಮಠ ಅಲ್ಲಾ, ನಮ್ಮ ಕುಟುಂಬ ಕೊಟ್ಟಿದ್ದ 75 ಎಕರೆ ಆಸ್ತಿ ಗೊಲ್ಮಾಲ್ ನಡೆದಿತ್ತು.  ಈ ಹಿನ್ನೆಲೆ ನಾನು ಆಗ ಭಾಗವಹಿಸಿದ್ದೆ, ಸ್ವಾಮೀಜಿಗಳನ್ನ ತೆಗೆದು ಹಾಕೊದು ನನಗೆ ಏಕೆ ಬೇಕು ಎಂದು ಸ್ಪಷ್ಟನೆ ನೀಡಿದರು.

ವಿನಯ ಕುಲಕರ್ಣಿ ಹಾಗೂ ಆತನ ಬೆಂಬಲಿಗರ ದಬ್ಬಾಳಿಕೆಯಿಂದ ನಾನು  ಅನ್ಯಾಯಕ್ಕೊಳಗಾಗಿದ್ದೇನೆ. ನನಗೆ ಅನ್ಯಾಯ ಆಗಿದೆ ಎಂದು ಆರೋಪ ಮಾಡಿದ್ದರು.

ನನ್ನ ಬೆದರಿಸಿ ಧಾರವಾಡದ ಶ್ರೀ ಮುರುಘಾಮಠದ ಪೀಠತ್ಯಾಗ ಪತ್ರ ಬರೆಸಿಕೊಂಡಿದ್ದರು. ಕಳೆದ ಒಂಬತ್ತು ವರ್ಷಗಳಿಂದ ನರಕಯಾತನೆ ಅನುಭವಿಸಿದ್ದೇನೆ. ಮದುವೆಯಾಗಿದೆ, ಮಕ್ಕಳಾಗಿವೆ ಹಾಗೂ ಮಠದ ಆಸ್ತಿ ಕಬಳಿಕೆ ಆರೋಪ ಸುಳ್ಳ. ನನ್ನ ಮೇಲಿನ ಆರೋಪವನ್ನು ಸಾಬಿತ್ತು ಮಾಡಲಿ ಎಂದು ಸವಾಲು ಹಾಕಿದ್ದರು.

click me!