ದೇಶದ ಪ್ರಗತಿಗೆ ಮಹಿಳೆಯರ ಕೊಡುಗೆ ಮಹತ್ವದ್ದು: ಸಚಿವ ಕೃಷ್ಣ ಬೈರೇಗೌಡ

By Kannadaprabha NewsFirst Published Mar 16, 2024, 10:00 AM IST
Highlights

ದೇಶದ ಜನಸಂಖ್ಯೆಯಲ್ಲಿ ಶೇ. 47%ರಷ್ಟಿರುವ ಮಹಿಳೆಯರ ಕೊಡುಗೆ ದೇಶದ ಪ್ರಗತಿಯ ನಿಟ್ಟಿನಲ್ಲಿ ಮಹತ್ವಪೂರ್ಣವಾದುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ (ಮಾ.16): ದೇಶದ ಜನಸಂಖ್ಯೆಯಲ್ಲಿ ಶೇ. 47%ರಷ್ಟಿರುವ ಮಹಿಳೆಯರ ಕೊಡುಗೆ ದೇಶದ ಪ್ರಗತಿಯ ನಿಟ್ಟಿನಲ್ಲಿ ಮಹತ್ವಪೂರ್ಣವಾದುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.ಜಕ್ಕೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಕರ್ನಾಟಕ ಜಾತ್ಯಾತೀತ ಸಮಾಜವಾದಿ ಸಂಘಟನೆ ಇವರ ಸಂಯುಕ್ತಾಶ್ರಯದಲ್ಲಿ, ಜಿ.ಪಂ‌. ಮಾಜಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ರವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಗುಂಪಿನ 300ಕ್ಕೂ ಹೆಚ್ಚು ಮಹಿಳೆಯರಿಗೆ ತವರುಮನೆ ಉಡುಗೊರೆ ನೀಡಿ ಗೌರವಿಸಿದ ನಂತರ ಅವರು ಮಾತನಾಡಿದರು.

ಪ್ರಸಕ್ತವಾಗಿ ದೇಶದಲ್ಲಿ ಮಹಿಳೆಯರ ಸ್ಥಿತಿ-ಗತಿ ಹಿಂದಿನಂತಿಲ್ಲ, ಸಮಗ್ರವಾಗಿ ಬದಲಾಗಿದೆ. ಶಿಕ್ಷಣ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ರಂಗಗಳಲ್ಲಿ ಮಹಿಳೆಯರು ಮುಂಚೂಣಿಗೆ ಬರುತ್ತಿದ್ದು, ದೇಶದ ಪ್ರಗತಿಯಲ್ಲಿ ಪುರುಷರಿಗೆ ಸರಿಸಮನಾದ ಕೊಡುಗೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ದಲ್ಲಿ ಮಹಿಳೆಯರ ಸ್ಥಾನಮಾನ ಇನ್ನೂ ಹೆಚ್ಚಿನ ಶ್ರೇಣಿ ತಲುಪಲಿದೆ ಎಂದರು. 

ಜೆಡಿಎಸ್‌ ಈಗ ಇದೆಯೇ? ಇದ್ದರೆ ಎಲ್ಲಿದೆ?: ಡಿಸಿಎಂ ಡಿಕೆಶಿ ವ್ಯಂಗ್ಯ

ಕಾರ್ಯಕ್ರಮ ಉದ್ದೇಶಿಸಿ ಮಾಜಿ ಜಿ.ಪಂ.ಅಧ್ಯಕ್ಷ, ಕಾರ್ಯಕ್ರಮದ ರುವಾರಿ ಜಕ್ಕೂರು ರವಿಕುಮಾರ್ ಮಾತನಾಡಿ ''ಇದೊಂದು ಸಾಂಪ್ರದಾಯಿಕ ಕಾರ್ಯ ಕ್ರಮವಾಗಿದ್ದು, ಪ್ರತಿವರ್ಷ ದಂತೆ ಈ ಬಾರಿಯೂ ಸಹ ಮಹಿಳಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಬ್ಯಾಂಕ್ ನ ಮಹಿಳಾ ಖಾತೆದಾರರು, ಸಂಘಟನೆಯ ಮಹಿಳಾ ಪದಾಧಿಕಾರಿಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಹಿಳೆಯರಿಗೆ ಹರಿಶಿಣ, ಕುಂಕುಮ, ಹೂ, ಗಾಜಿನ ಬಳೆ ಸಹಿತ ಉಡಿತುಂಬಿ ತವರುಮನೆ ಉಡುಗೊರೆ ನೀಡಿದ್ದೇವೆ. ಇದೊಂದು ಭಾವನಾತ್ಮಕ ಬೆಸುಗೆಯಾಗಿದ್ದು, ನಮ್ಮ ಸುತ್ತಮುತ್ತ ಇರುವ ಮಹಿಳೆಯರಿಗೆ ನಮ್ಮ ಕಚೇರಿ ಒಂದು ರೀತಿಯಲ್ಲಿ ತವರುಮನೆ ಇದ್ದಂತೆ, ಯುಗಾದಿಗೆ ಮುನ್ನ ಅವರೆಲ್ಲ ರಿಗೂ ಉಡುಗೊರೆ ನೀಡಿ ಗೌರವಿಸುವ ಸಂತ್ಸಂಪ್ರ ದಾಯವನ್ನು ಕಳೆದ ಹಲವು ವರ್ಷಗಳಿಂದ ಆಚರಿಸಿ ಕೊಂಡು ಬರಲಾಗುತ್ತಿದ್ದು, ಅದೇ ರೀತಿ ಈ ವರ್ಷವೂ ಸಹ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಸುಮಿತ್ರಾ ಲಿಂಗರಾಜು, ರಾಜ ಯೋಗಿನಿ ಬಿ.ಕೆ.ಲೀಲಾ ಬೀಹಾಜಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವ್ಯ ರಾಜಣ್ಣ, ಆಯುರ್ವೇದ ತಜ್ಞೆ ಡಾ.ಶ್ವೇತಾ ಚಿದಾನಂದ್, ಬ್ಯಾಟರಾಯನಪುರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಮ್ಮ, ಸಮಾಜ ಸೇವಕರಾದ ಜಯಲಕ್ಷ್ಮಿ ರವಿಕುಮಾರ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ರತ್ನಮ್ಮ ದೇವರಾಜ್, ಸುಮಿತ್ರಾ ನಾಗೇಶ್, ಶಿಕ್ಷಕಿ ಕೋಮಲ ಜಿ.ಎನ್., ಇ.ಕೃಷ್ಣಪ್ಪ, ಆಂಜಿನಪ್ಪ ಸೇರಿದಂತೆ ಇನ್ನಿತರರಿದ್ದರು.

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಬೆಳಗಾವಿ ಸ್ಪರ್ಧೆಗೆ ಒಪ್ಪಿಗೆ: ಜಗದೀಶ್‌ ಶೆಟ್ಟರ್‌

ಮಹಿಳಾ ದಿನ: ಸ್ತ್ರೀಶಕ್ತಿಗೆ ತವರುಮನೆ ಉಡುಗೊರೆ: ಬ್ಯಾಟರಾಯನಪುರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಕ್ಕೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಕರ್ನಾಟಕ ಜಾತ್ಯಾತೀತ ಸಮಾಜವಾದಿ ಸಂಘಟನೆ ಸಂಯುಕ್ತಾಶ್ರಯದಲ್ಲಿ ರವಿಕುಮಾರ್‌ರವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಗುಂಪಿನ 300ಕ್ಕೂ ಹೆಚ್ಚು ಮಹಿಳೆಯರಿಗೆ ತವರುಮನೆ ಉಡುಗೊರೆ ನೀಡಿ ಕಂದಾಯ ಸಚಿವ ಕೃಷ್ಣಬೈರೇಗೌಡ ಗೌರವಿಸಿದ ನಂತರ ಅವರು ಮಾತನಾಡಿದರು.

click me!