ಗಾಂ. ಪಂಚಾಯತಿ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಗುತ್ತಿಗೆ ನೌಕರ

By Web Desk  |  First Published Jun 25, 2019, 3:31 PM IST

ಕೆಲಸದಿಂದ ತೆಗೆದಿದ್ದಾರೆ ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯಿತಿ ಗುತ್ತಿಗೆ ನೌಕರನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಚಿಕ್ಕಬಳ್ಳಾಪುರ, (ಜೂ.25):  ಕೆಲಸದಿಂದ ತೆಗದಿದ್ದಾರೆಂದು ಮನನೊಂದ ಗುತ್ತಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೀರೆಕಟ್ಟಿಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

 ರಾಮಕೃಷ್ಣಪ್ಪ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಹೀರೆಕಟ್ಟಿಗೆನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರನಾಗಿದ್ದು. ಬಳಿಕ  ರಾಮಕೃಷ್ಣಪ್ಪನನ್ನು ಕೆಲಸದಿಂದ ತಗೆಯಲಾಗಿತ್ತು.

Tap to resize

Latest Videos

ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೇವಣ್ಣ

ಇದರಿಂದ ಮನನೊಂದ  ರಾಮಕೃಷ್ಣಪ್ಪ ತಾನು ಕೆಲಸ ಮಾಡುತ್ತಿದ್ದ ಹೀರೆಕಟ್ಟಿಗೆನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಇಂದು (ಮಂಗಳವಾರ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೋಮವಾರ ಅಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ರೇವಣ್ಣ ಕುಮಾರ್ ಎನ್ನುವಾತ ವಿಧಾನಸೌಧದ ಶೌಚಾಲಯದಲ್ಲಿ ಕತ್ತುಕಪಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

click me!