ಹೆತ್ತವರ ವಿರೋಧಕ್ಕೆ ಮಣಿದು ಲವರ್ ಜೊತೆ ಬ್ರೇಕಪ್| ಸುದ್ದಿ ಇಲ್ಲದೇ ಬೇರೊಬ್ಬನೊಂದಿಗೆ ರಿಜಿಸ್ಟರ್ ಮ್ಯಾರೇಜ್| ಪ್ರೇಯಸಿಯ ಮದುವೆ ವಿಚಾರ ತಿಳಿದ ಯುವಕನಿಂದ ಮಾನಸಿಕ ಕಿರುಕುಳ| ಆತ್ಮಹತ್ಯೆಗೆ ಶರಣಾದ್ಲು ಬೇಸತ್ತ ಯುವತಿ
ಮಡಿಕೇರಿ[ಜೂ.25]: ಮಾಜಿ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ಡೈರಿಫಾರ್ಮ್ ನಿವಾಸಿ ದಿವ್ಯಜ್ಯೋತಿ (19) ಮೃತ ದುರ್ದೈವಿ. ದಿವ್ಯಜ್ಯೋತಿ ತನ್ನ ತಂದೆ ತಾಯಿಗೆ ತಿಳಿಸದೇ ಬ್ರಿಜೇಶ್ ಎಂಬಾತನ ಜೊತೆ ರಿಜಿಸ್ಟರ್ ಮದುವೆ ಆಗಿದ್ದಳು. ಆದರೆ ದಿವ್ಯಾ ಈ ಮದುವೆಗೂ ಮುನ್ನ ತನ್ನ ಪರಿಚಯಸ್ಥ ಪವನ್ ನನ್ನು ಪ್ರೀತಿಸುತ್ತಿದ್ದಳು. ಯಾವಾಗ ಹೆತ್ತವರು ಈ ಪ್ರೀತಿಗೆ ನಿರಾಕರಿಸಿದರೋ, ಆಗ ಪವನ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದಳು.
ಬಳಿಕ ತಂದೆ ತಾಯಿಗೆ ತಿಳಿಸದೆಯೇ ಬ್ರಿಜೇಶ್ ಜೊತೆ ಮದುವೆಯಾಗಿದ್ದಳು. ಆದರೆ ಈ ಮದುವೆಯ ವಿಚಾರ ಪವನ್ ಗೆ ಗೊತ್ತಾಗಿದೆ. ಸುಮ್ಮನಾಗದ ಪವನ್, ದಿವ್ಯಾಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ಇದರಿಂದ ಬೇಸತ್ತ ದಿವ್ಯಾ ಪವನ್ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿರುಕುಳ ನೀಡಿದ್ದನೆನ್ನಲಾದ ಪವನ್ ಹಾಗೂ ರಿಜಿಸ್ಟರ್ ಮದುವೆಯಾಗಿರುವ ಬ್ರಿಜೇಶ್ ಇಬ್ಬರನ್ನೂ ಬಂಧಿಸಿದ್ದಾರೆ.