Udupi; ಕಲುಷಿತ ನೀರು ಕುಡಿದು ಲಕ್ಷಾಂತರ ಮೀನುಗಳ ಸಾವು, ಕೊಳಕು ನೀರು ಬಂದಿದ್ದೆಲ್ಲಿಂದ?

By Suvarna News  |  First Published Jun 15, 2022, 5:16 PM IST

ಉಡುಪಿಯ ಸೀತಾ ನದಿಯ ಉಪನದಿಯಲ್ಲಿ ಸತ್ತ ಮೀನಿನ ಪ್ರವಾಹವೇ ಹರಿಯುತ್ತಿದೆ. ಈ ಪ್ರಮಾಣದ ಮೀನುಗಳ ಮಾರಣಹೋಮದಿಂದ ಕುಂದಾಪುರ ಸಾಲಿಗ್ರಾಮ ಕೋಡಿಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜೂ.15): ಸ್ವಚ್ಛಂದವಾಗಿ ನದಿಯಲ್ಲಿದ್ದ ಈಜಾಡುತ್ತಿದ್ದ  ಲಕ್ಷ ಲಕ್ಷ ಮೀನುಗಳು ರಾತ್ರಿ ಮುಂಜಾನೆಯೊಳಗೆ ಸತ್ತು ತೇಲಾಡುತ್ತಿವೆ. ಲಕ್ಷಗಟ್ಟಲೆ ಹಣ ಸುರಿದು ವರ್ಷ ಪೂರ್ತಿ ಮೀನುಗಾರರು ಮಾಡಿದ ಪಂಜರ ಕೃಷಿಯ ಮೀನುಗಳು ಕೂಡ ಸತ್ತು ಬಿದ್ದಿದೆ. ಸೀತಾ ನದಿಯ ಉಪನದಿಯಲ್ಲಿ ಸತ್ತ ಮೀನಿನ ಪ್ರವಾಹವೇ ಹರಿಯುತ್ತಿದೆ. ಈ ಪ್ರಮಾಣದ ಮೀನುಗಳ ಮಾರಣಹೋಮದಿಂದ ಕುಂದಾಪುರ ಸಾಲಿಗ್ರಾಮ ಕೋಡಿಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.

Latest Videos

undefined

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಾಲಿಗ್ರಾಮ ಕೋಡಿ ಭಾಗದಲ್ಲಿ  ಹರಿಯುವ ಸೀತಾ ನದಿಯ ಉಪನದಿ ಈ ಮತ್ಸ್ಯ ನಾಶ ಉಂಟಾಗಿದೆ. ಈ ನದಿಯು ಉಪ್ಪು ಮಿಶ್ರಿತ  ಸಿಹಿನೀರಿನ ಹರಿವಿನಿಂದ ಕೂಡಿದೆ. ಹೊಳೆ ಮೀನಿಗೆ ಈ ನದಿ ಹೆಚ್ಚು ಪ್ರಸಿದ್ಧಿ ಕೂಡ ಪಡೆದಿದೆ.  ಹೆರಿ, ಕೆಂಬೇರಿ,ಇರ್ಪೆ, ಹೊಳೆಬೈಗೆ, ಪಚ್ಚಿಲೆ ಹೀಗೆ ನಾನಾ ಬಗ್ಗೆ ಯ ಮೀನುಗಳು ಇರುವ ಹೊಳೆ ಇದು.

ಈ ನದಿಯಲ್ಲಿ ಮೀನುಗಾರಿಕೆ ನಡೆಸಿ ಜೀವನ ನಡೆಸುವ ಮೀನುಗಾರರು ಒಂದು ಕಡೆಯಾದ್ರೆ ಇದೇ ನದಿಯಲ್ಲಿ ಪಂಜರ ಮೀನುಗಾರಿಕೆ ಕೃಷಿ ಮಾಡಿ ಬದುಕು ಕಟ್ಟಿಕೊಂಡ ಮಂದಿ ಅನೇಕರಿದ್ದಾರೆ. ಆದ್ರೆ ಸದ್ಯ ಈ ನದಿಯಲ್ಲಿ ಎಲ್ಲಿ‌ ನೋಡಿದ್ರೂ ಸತ್ತ ಮೀನುಗಳೇ ತೇಲಾಡುತ್ತಿವೆ. ಕಲುಷಿತ ನೀರಿನ ಮಿಶ್ರಿಣದಿಂದ ನದಿಯಲ್ಲಿ ಮೀನುಗಳು ಈ ರೀತಿಯಾಗಿ ಸಾವನ್ನಪ್ಪಿದೆ ಎನ್ನುತ್ತಾರೆ ಸ್ಥಳೀಯರು. ಸಾಲಿಗ್ರಾಮ ತೋಡ್ಕಟ್ಟು ಬಳಿ ಸೇತುವೆ ನಿರ್ಮಾಣದ ಕಾರಣ ಹೊಳೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿತ್ತು. ಏಕಾಏಕಿ ತಡೆಗೋಡೆಯನ್ನು ತೆರವುಗೊಳಿಸಿದ ಕಾರಣ. ಕೊಳಕು ಮಿಶ್ರಿತ ನೀರಿನಿಂದ ಮೀನುಗಳ ಮಾರಣ ಹೋಮ ನೆಡೆದಿದೆ ಅನ್ನೋದು ಸ್ಥಳೀಯರ ಅಭಿಪ್ರಾಯ.

Kodaguನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಐವರ ಬಂಧನ

ರಾಶಿ ರಾಶಿ ಮೀನುಗಳು ಸತ್ತು ಬಿದ್ದು ಗ್ರಾಮಕ್ಕೆ ಗ್ರಾಮವೇ ದುರ್ವಾಸನೆ ಬೀರುತ್ತಿದೆ. ಅಷ್ಟೇ ಅಲ್ಲ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ವರ್ಷ ಪೂರ್ತಿ‌ ಶ್ರಮ ವಹಿಸಿ ಮೀನುಗಾರ ಕುಟುಂಬಗಳು ನದಿನೀರಿನಲ್ಲಿ ಮಾಡಿದ್ದ ಪಂಜರ ಮೀನು ಕೃಷಿ ಕೂಡ ನೀರಲ್ಲಿ ಇಟ್ಟ ಹೋಮದಂತಾಗಿದೆ. ಕೋಡಿಗ್ರಾಮದಲ್ಲಿ  ನದಿ ತೀರದ ಮೀನುಗಾರರು ಪಚ್ಚಿಲೆ, ಕೆಂಬೇರಿ ಮೀನು ಸೇರಿದಂತೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವ ಮೀನುಗಳನ್ನು ಪಂಜರದಲ್ಲಿ ಸಾಕಿದ್ರು. ಅದ್ರೆ ನದಿನೀರಿನ ಮಾಲಿನ್ಯದಿಂದ ಪಂಜರದೊಳಗೆ ಬಿದ್ದ ಮೀನುಗಳು ಸತ್ತು ತೇಲಾಡುತ್ತಿವೆ.  

ಇದರಿಂದ ಮೀನುಗಾರರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ನಷ್ಟಕ್ಕೆ ತುತ್ತಾಗಿರುವ ಮೀನುಗಾರಿಗೆ ಪರಿಹಾರ ನೀಡಬೇಕು ಎಂದು ಮೀನುಗಾರರು ಒತ್ತಾಯಿಸಿ ದ್ದಾರೆ.

ಅದ್ರೆ ಸೇತುವೆ ನಿರ್ಮಾಣ ಕ್ಕೆ ತಡೆಗೋಡೆ ಹಾಕಿ ನೀರು ನಿಲ್ಲಿಸಿದ ಪರಿಣಾಮ ಈ ಪ್ರಮಾಣದಲ್ಲಿ ಮೀನುಗಳು ಸತ್ತು ಬಿಳೋದಕ್ಕೆ ಸಾಧ್ಯವಿಲ್ಲ. ಅಕ್ಕ ಪಕ್ಕದ ಗ್ರಾಮಗಳಲ್ಲಿ ಇರುವ ಫಿಶ್ ಮಿಲ್ ಗಳ ರಾಸಾಯನಿಕ ಮಿಶ್ರಿತ ನೀರು ನದಿಗೆ ಸೇರಿರುವ ಕಾರಣ ನದಿಯಲ್ಲಿ ಇರುವ ಮೀನುಗಳು ನಾಶವಾಗಿದೆ. ಚಿಕ್ಕಪುಟ್ಟ ಮೀನು, ದೊಡ್ಡ ಗಾತ್ರದ  ಮೀನುಗಳು ಮಾತ್ರವಲ್ಲದೆ ನದಿಯಲ್ಲಿ ಜೀವಿಸುತ್ತಿದ್ದ ಎಲ್ಲ ಜಲಚರಗಳು ನಾಶವಾಗಿದೆ. ಇದಕ್ಕೆ ‌ಫಿಶ್ ಮಿಲ್ ನೀರು ‌ನದಿ ಸೇರಿರುವುದೇ‌ ಕಾರಣ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ. 

Ballari Pearl Scam; ಮುತ್ತಿನ ಮತ್ತಲ್ಲಿ ಕೋಟಿ ಕಳೆದುಕೊಂಡ ನೂರಾರು ಜನ!

ಮೀನುಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ  ತನಿಖೆ  ನಡೆಸಿ ಯಾವ ಕಾರಣದಿಂದ ಮೀನುಗಳು ನಾಶ ಗೊಂಡಿವೆ ಅನ್ನೊದನ್ನು‌ ಪತ್ತೆ ಹಚ್ಚಬೇಕು. ಕಲುಷಿತ ನೀರನ್ನು ನದಿಗೆ ಸೇರಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯಿಸಿದ್ದಾರೆ. ಸದ್ಯ ರಾಶಿ ರಾಶಿ ಮೀನುಗಳು ಸತ್ತುಬಿದ್ದಿರುವ ಕಾರಣ ನದಿ ತೀರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದು  ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಅಗ್ರಹಿಸಿದ್ದಾರೆ

ಒಟ್ಟಿನಲ್ಲಿ ಆಳ ಸಮುದ್ರ ಮೀನುಗಾರಿಕೆ ಬಂದ್ ಅಗಿರುವ ಕಾರಣ ನದಿ ಮೀನುಗಾರಿಕೆ ನಡೆಸುವ ಮೀನುಗಾರರಿಗೂ ಕಸುಬು ಇಲ್ಲವಾಗಿದೆ. ಪಂಜರ ಮೀನು ಕೃಷಿ ಮಾಡಿ ಬದುಕು‌ಕಟ್ಟಿಕೊಳ್ಳುವುದಕ್ಕೆ  ಮುಂದಾಗಿದ್ದ ಮೀನುಗಾರಿಗೂ ಗಾಯದ ಮೇಲೆ ‌ಬರೆ ಎಳೆದಂತಾಗಿದೆ. ತಮ್ಮದಲ್ಲದ ತಪ್ಪಿಗೆ ನದಿಯಲ್ಲಿ ಸ್ವಚ್ಛಂದ ವಾಗಿ ಈಜಾಡುತ್ತಿದ್ದ ಲಕ್ಷಾಂತರ ಮೀನುಗಳು ಪ್ರಾಣ ಕಳೆದುಕೊಂಡಿವೆ. ನದಿ ಮೀನುಗಳು ಸಾಮೂಹಿಕ ಸಾವಿಗೆ ಕಾರಣವಾಗಿ ಮೀನುಗಾರ ಬದುಕಿಗೆ ಸಂಕಷ್ಟ ತಂದು ಒಡ್ಡುವ ಕೃತ್ಯ ಎಸಗಿದವರ ವಿರುದ್ದ ಕ್ರಮವಾಗಬೇಕಿದೆ.

click me!