ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿದಿನವೂ ಪಡಿತರ ಪಡೆಯಲು ತೊಂದರೆಯಾಗುತ್ತಿದೆ. ಸರ್ಕಾರ ಸ್ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಪಡಿತರ ಸುಲಭವಾಗಿ ಸಿಗುವ ರೀತಿ ಮಾಡಬೇಕು. ಅಧಿಕಾರಿಗಳು ಸರ್ವರ್ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲವಾದರೆ ಗ್ರಾಹಕರಿಗೆ ಪ್ರತಿ ತಿಂಗಳು ಇದೆ ಸಮಸ್ಯೆಯಾಗುತ್ತದೆ. ಕೂಡಲೇ ಕ್ರಮ ವಹಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಗಡಿ(ಅ.21): ಸರ್ವರ್ ಸಮಸ್ಯೆಯಿಂದ ಪಡಿತರ ಅಕ್ಕಿ ಪಡೆಯಲು ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನೇತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪುರುಷೋತ್ತಮ್ ಆರೋಪಿಸಿದರು.
ತಾಲೂಕಿನ ನೇತೇನಹಳ್ಳಿ ಗ್ರಾಮದ ಪಡಿತರ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಕಳೆದ ಐದು ದಿನಗಳಿಂದಲೂ ಸರ್ವರ್ ಸಮಸ್ಯೆಯಿಂದ ಪ್ರತಿ ದಿನವೂ ಸರದಿಯಲ್ಲಿ ನಿಂತು ಪಡಿತರ ಅಕ್ಕಿ ಪಡೆಯದೆ ಮನೆಗೆ ಹಿಂದಿರುಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಐದು ದಿನಗಳು ಕಳೆದರು ಗ್ರಾಹಕರಿಗೆ 3 ಕೆಜಿ ಅಕ್ಕಿ ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಲಿ ಮಾಡಿ ಜೀವನ ಮಾಡುವ ಬಡವರು ಐದು ದಿನಗಳ ಕಾಲ ಇಲ್ಲೇ ಇದ್ದರೆ ಅವರ ಜೀವನ ನಡೆಯುವುದು ಹೇಗೆ? 10 ಕೆಜಿ ಅಕ್ಕಿಯಿಂದ ಪಡಿತರ ಈಗ ಕೇವಲ 3 ಕೆಜಿಗೆ ಬಂದಿದೆ. 2 ಕೆಜಿ ರಾಗಿ ನೀಡುತ್ತಿದ್ದಾರೆ. 5 ಕೆಜಿಗೆ ಅಕ್ಕಿ ಹಣ ಇಲ್ಲಿವರೆಗೂ ಹಾಕಿಲ್ಲ. ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿದಿನವೂ ಪಡಿತರ ಪಡೆಯಲು ತೊಂದರೆಯಾಗುತ್ತಿದೆ. ಸರ್ಕಾರ ಸ್ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಪಡಿತರ ಸುಲಭವಾಗಿ ಸಿಗುವ ರೀತಿ ಮಾಡಬೇಕು. ಅಧಿಕಾರಿಗಳು ಸರ್ವರ್ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲವಾದರೆ ಗ್ರಾಹಕರಿಗೆ ಪ್ರತಿ ತಿಂಗಳು ಇದೆ ಸಮಸ್ಯೆಯಾಗುತ್ತದೆ. ಕೂಡಲೇ ಕ್ರಮ ವಹಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಅನ್ನಭಾಗ್ಯದ ದುಡ್ಡು ಬಂದಿಲ್ವಾ?: ಈ ಕೆಲಸ ಮಾಡಿಸದಿದ್ದರೆ ಹಣ ಬರೋದೇ ಇಲ್ಲ..!
300ಕ್ಕೂ ಹೆಚ್ಚು ಗ್ರಾಹಕರು:
ನೆತೇನಹಳ್ಳಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ 300ಕ್ಕೂ ಹೆಚ್ಚು ಪಡಿತರದಾರರಿದ್ದು ನೇತೇನಹಳ್ಳಿ ವ್ಯಾಸರಾಯನಪಾಳ್ಯ, ಕರೇನಹಳ್ಳಿಯಿಂದ ಇಲ್ಲಿಗೆ ಬಂದು ಪಡಿತರ ಪಡೆಯಬೇಕಾಗಿದ್ದು, ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು. ದೂರದ ಊರುಗಳಿಂದ ಬರುವ ಗ್ರಾಹಕರಿಗೆ ಬೆಳಗ್ಗೆಯಿಂದ ಸಂಜೆಯವರೆಗೂ ಸರದಿಯಲ್ಲಿ ನಿಲ್ಲುವಂತಾಗಿದ್ದು ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.