ಇಂದು ವೀರಶೈವ ಸಮಾಜದಲ್ಲಿ ಅಂದಿನ ಒಗ್ಗಟ್ಟು ಮಾಯವಾಗಿದೆ. ಜಾತಿ, ಉಪಜಾತಿಗಳನ್ನು ಸೃಷ್ಠಿಸಿಕೊಂಡು ಸಮಾಜದ ಕವಲು ದಾರಿಯಲ್ಲಿ ಸಾಗುತ್ತಿದೆ. ಇದರಿಂದ ವೀರಶೈವರ ಮುಂದೆ ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ ಸಚಿವ ಎಂ.ಬಿ. ಪಾಟೀಲ್
ಲಿಂಗಸುಗೂರು(ಅ.21): ಜಾತಿ-ಉಪಜಾತಿಗಳಿಂದ ಕವಲು ದಾರಿಯಲ್ಲಿ ಸಾಗುತ್ತಿರುವ ವೀರಶೈವ ಲಿಂಗಾಯತರನ್ನು ಒಂದಾಗಿಸಲು ಮಠ-ಮಾನ್ಯಗಳು ಮುಂದಾಗಬೇಕು ಇದರ ನೇತೃತ್ವವನ್ನು ಪಂಚಪೀಠ ಜಗದ್ಗುರು ರಂಭಾಪುರಿ ಶಿವಾಚಾರ್ಯರು ವಹಿಸಬೇಕೆಂದು ಬೃಹತ್ ಮತ್ತು ಮದ್ಯಮ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಂಭಾಪುರಿ ಜಗದ್ಗುರಗಳ ಶರನ್ನವರಾತ್ರಿ ಧರ್ಮ ಸಮ್ಮೇಳನದ ಮಾನವ ಧರ್ಮ ಮಂಟಪದಲ್ಲಿ ಮಾತನಾಡಿದ ಅವರು, 1904ರಲ್ಲಿ ವೀರಶೈವ ಲಿಂಗಾಯತ ಸಂಘ ರಚನೆ ಆಗಿ ಅಂದು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕರೆ ನೀಡಲಾಯಿತು. ಅದರಂತೆ ಕೆಎಲ್ಇ, ಬಿಎಲ್ಇಡಿ, ಎಚ್‌ಕೆಇ ಅಂತಹ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾಡಿ ಸರ್ಕಾರ ಮಾಡದಂತಹ ಕಾರ್ಯವನ್ನು ವೀರಶೈವ ಮಠ-ಮಾನ್ಯಗಳು ಹಾಗೂ ಸಮುದಾಯದ ಹಿರಿಯರು ಮಾಡಿದರು. ಇಂದು ವೀರಶೈವ ಸಮಾಜದಲ್ಲಿ ಅಂದಿನ ಒಗ್ಗಟ್ಟು ಮಾಯವಾಗಿದೆ. ಜಾತಿ, ಉಪಜಾತಿಗಳನ್ನು ಸೃಷ್ಠಿಸಿಕೊಂಡು ಸಮಾಜದ ಕವಲು ದಾರಿಯಲ್ಲಿ ಸಾಗುತ್ತಿದೆ. ಇದರಿಂದ ವೀರಶೈವರ ಮುಂದೆ ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
undefined
ಸಂಸದ ರಾಜಾ ಅಮರೇಶ್ವರ ಜನಪರವಾದ ರಾಜಕಾರಣಿ: ಸಚಿವ ಬೋಸರಾಜು ಬಣ್ಣನೆ
ಸಾವಯವ ಕೃಷಿ ಒತ್ತು ನೀಡಿರಿ:
ರಸಾಯನಿಕ ರಸಗೊಬ್ಬರಗಳ ಬಳಕೆ ಮಾಡಿ ಉತ್ಪಾದನೆ ಮಾಡುವ ಬೆಳೆಗಳಿಂದ ಮನು ಕುಲಕ್ಕೆ ಅಪಾಯಕಾರಿಯಾಗಿದೆ. ಇದನ್ನು ಸೇವನೆ ಮಾಡಿದರೆ ನಾನಾ ರೋಗ-ರುಜನಗಳು ಉಂಟಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ರಸಗೊಬ್ಬರ, ಕ್ರಿಮಿ ಕೀಟನಾಶಕದಿಂದ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆಹಾರ ವಿಷವಾಗುತ್ತದೆ. ಹಣ್ಣುಗಳ ಪ್ರಾಣಪಾಯ ಒಡ್ಡತ್ತವೆ. ಇದು ಸಂಶೋಧನೆಯಿಂದ ದೃಡಪಟ್ಟಿದೆ. ಇದರಿಂದ ರೈತರು ಸಾವಯವ ಕೃಷಿ ಪದ್ಧತಿ ರೂಡಿಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ, ಕವಲೇದುರ್ಗ ಭುವನಗಿರಿ ಸಂಸ್ಥಾನಮಠದ ಮರುಳಸಿದ್ಧ ಶಿವಾಚಾರ್ಯ ಮಳಲಿ ಸಂಸ್ಥಾನಮಠದ ಡಾ.ನಾಗಭೂಷಣ ಶಿವಾಚಾರ್ಯ, ಶ್ರೀನಿವಾಸ ಸರಡಗಿ ಚಿಕ್ಕಮಠದ ರೇವಣಸಿದ್ಧ ಶಿವಾಚಾರ್ಯ, ಅಭಿನವ ಗಜದಂಡ ಶಿವಾಚಾರ್ಯ, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ, ಸಿದ್ಧರಬೆಟ್ಟ, ಸಂಗೊಳ್ಳಿ, ಮಮದಾಪುರ, ತಡವಲಗ, ಆಲಮೇಲ, ಯಂಕಂಚಿ, ರೌಡಕುಂದ, ಚಿಮ್ಮಲಗಿ, ಗುಂಡಕನಾಳ ಶ್ರೀಗಳು ಬಿಜೆಪಿ ಉಪಾಧ್ಯಕ್ಷ ಶಾಸಕ ಬಿ.ವೈ ವಿಜಯೇಂದ್ರ, ಮಾಜಿ ಸಚಿವ ಕಳಕಪ್ಪ ಬಂಡಿ, ಶಾಸಕ ಡಾ.ಶಿವರಾಜ ಪಾಟೀಲ, ಶಾಸಕ ಮಾನಪ್ಪ ಡಿ.ವಜ್ಜಲ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಇದ್ದರು.