ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಮೇ.24): ಹುಬ್ಬಳ್ಳಿಯ ಸಗೈ ರಾಜದಾಸ್, ಶೈಲಜಾ ಹಣಗಿ ಶಕುಂತಲಾ ರಾವಲ್ ಹಾಗೂ ನಿಂಗಪ್ಪ ಮುಳಗುಂದ ಮತ್ತು ಪರಪ್ಪ ದಂಡಿನ್ ಅನ್ನುವವರು ಹುಬ್ಬಳ್ಳಿಯ ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಜೊತೆ ಅವರು ಇಟಿಗಟ್ಟಿ ಗ್ರಾಮದಲ್ಲಿ ಮಾಡುತ್ತಿದ್ದ ಗಾಮನಗಟ್ಟಿ ಲೇಔಟ್‌ನ್ ಪ್ಲಾಟ್ ನಂ.29,44,47 ಮತ್ತು 45ರ ಖರೀದಿಗೆ ದಿ:07/02/2014ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರತಿಯೊಬ್ಬರು ಕಂತುಗಳಲ್ಲಿ ತಲಾ ರೂ.5,24,000/-, ರೂ.3,15,500/- ಹಾಗೂ ರೂ.3,80,000/- ಮುಂಗಡ ಹಣ ಕಟ್ಟಿದ್ದರು. ಹಲವಾರು ವರ್ಷಗಳಾದರೂ ಎದುರುದಾರರು ಲೇಔಟ್ ಕೆಲಸ ಪೂರ್ತಿಗೊಳಿಸಿರಲಿಲ್ಲ.
ಅಲ್ಲದೇ ಒಪ್ಪಂದದಂತೆ ದೂರುದಾರರಿಗೆ ಆ ಸೈಟುಗಳ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ. ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಅಂತಹ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಎದುರುದಾರ ಹುಬ್ಬಳ್ಳಿಯ ಪ್ರಥ್ವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‍ರವರು ವಕೀಲರ ಮೂಲಕ ಹಾಜರಾಗಿ ಲೇಔಟ್ ಮಾಡಲು ಉದ್ದೇಶಿಸಿದ್ದ ಇಟಿಗಟ್ಟಿ ಗ್ರಾಮದ ಬ್ಲಾಕ್ ನಂ.22/1 ಜಮೀನನ್ನು ಎಮ್ಸ್ ಸ್ಥಾಪನೆಗಾಗಿ ಸರ್ಕಾರದವರು ಭೂ ಸ್ವಾಧೀನ ಮಾಡಿಕೊಂಡಿದ್ದಾರೆ.
ನಾನೇ ಕನಕಪುರಕ್ಕೆ ಬರುತ್ತೇನೆ, ನೀವು ಬೆಂಗಳೂರಿಗೆ ಬರಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದೇಕೆ?
ಕಾರಣ ಲೇಔಟ್ ಕೆಲಸ ಪೂರ್ಣಗೊಳಿಸಿಸಲಾಗಿಲ್ಲ. ಈ ಬಗ್ಗೆ ತಮಗೆ ಸರ್ಕಾರದ ಪರಿಹಾರವು ಬಂದಿಲ್ಲ ಅಂತಾ ಹೇಳಿ ಎಲ್ಲಾ ದೂರುದಾರರ ಹಣ ವಾಪಸ್ಸು ಕೊಡಲು ತಯಾರು ಇರುವುದಾಗಿ ಹೇಳಿ ಆಕ್ಷೇಪಣೆ ಹಾಕಿದ್ದರು ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಅವರು 2014ರಲ್ಲಿ ಪ್ರತಿಯೊಬ್ಬ ದೂರುದಾರನಿಂದ ಲಕ್ಷಗಟ್ಟಲೇ ಹಣ ಪಡೆದುಕೊಂಡು ಅದನ್ನು ಲೇಔಟ್ ನಿರ್ಮಾಣದ ತಮ್ಮ ಕೆಲಸಕ್ಕೆ ಎದುರುದಾರರು ಉಪಯೋಗಿಸಿಕೊಂಡಿದ್ದಾರೆ.
ಬಿಜೆಪಿ ಸೋಲಿನ ಹೊಣೆ ಎಲ್ಲರೂ ಹೊರಬೇಕು: ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ಅವರು ದೂರು ದಾಖಲಿಸುವವರೆಗೆ ದೂರುದಾರರ ಹಣ ಹಿಂದಿರುಗಿಸದೇ ಇರುವುದು ತಪ್ಪು ಅಂತಾ ಮಾನ್ಯ ಆಯೋಗ ತೀರ್ಪು ನೀಡಿ ಪ್ರತಿಯೊಬ್ಬ ದೂರುದಾರರಿಗೆ ಅವರು ನೀಡಿದ ಹಣ ಮತ್ತು ಅದರ ಮೇಲೆ ದಿ:11/06/2017 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಮತ್ತು ಈ ಪ್ರಕರಣಗಳ ಖರ್ಚು ವೆಚ್ಚ ಅಂತಾ ತಲಾ ರೂ.10,000/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.