Breaking: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಜೋರು ಶಬ್ದಕ್ಕೆ ಬೆಚ್ಚಿಬಿದ್ದ ಜನತೆ!

By Girish Goudar  |  First Published Oct 22, 2024, 12:55 PM IST

ಜೋರಾದ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಜೋರು ಶಬ್ದಕ್ಕೆ ಅಡುಗೆ ಮನೆಯಲ್ಲಿನ ಪಾತ್ರೆ, ಪಗಡೆಗಳು ಬಿದ್ದಿವೆ. ತಿಕೋಟ ತಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹುಬನೂರ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. 

ವಿಜಯಪುರ(ಅ.22): ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಹೌದು, ಜಿಲ್ಲೆಯ ತಿಕೋಟಾ ಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು(ಮಂಗಳವಾರ) ಬೆಳಿಗ್ಗೆ 11-29 ನಿಮಿಷಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. 

ಜೋರಾದ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಜೋರು ಶಬ್ದಕ್ಕೆ ಅಡುಗೆ ಮನೆಯಲ್ಲಿನ ಪಾತ್ರೆ, ಪಗಡೆಗಳು ಬಿದ್ದಿವೆ. ತಿಕೋಟ ತಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹುಬನೂರ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. 

Tap to resize

Latest Videos

undefined

 ವಿಜಯಪುರದಲ್ಲಿ ಭೂಕಂಪ: ಭಯಾನಕ ಸದ್ದಿಗೆ ಬೆಚ್ಚಿ ಬಿದ್ದ ಜನತೆ..!

ಗಡಿ ಭಾಗದ ಮಹಾರಾಷ್ಟ್ರದ ಮೊರಬಗಿ, ತಿಕ್ಕುಂಡಿ, ಆಸಂಗಿಯಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಜೋರು ಶಬ್ದಕ್ಕೆ ಜನರು ಮನೆಯಿಂದ ಹೊರಗಡೆ ಒಡೋಡಿ ಬಂದಿದ್ದಾರೆ. 

click me!