ಅಂಗನವಾಡಿಗೆ ಜಾಗ ಲಭ್ಯವಾದರೆ ಕಟ್ಟಡ ನಿರ್ಮಾಣ: ಕಾಗೇರಿ

By Kannadaprabha News  |  First Published Oct 8, 2022, 1:04 PM IST

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೆಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕಿದೆ. ಆದರೆ, ಜಾಗದ ಕೊರತೆ ಸಹ ಕಾಡುತ್ತಿದೆ. ಜಾಗ ಲಭ್ಯವಾದಲ್ಲಿ ಕಟ್ಟಡ ನಿರ್ಮಿಸುತ್ತಿದ್ದೇವೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು


ಶಿರಸಿ ಅ.(8) : ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೆಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕಿದೆ. ಆದರೆ, ಜಾಗದ ಕೊರತೆ ಸಹ ಕಾಡುತ್ತಿದೆ. ಜಾಗ ಲಭ್ಯವಾದಲ್ಲಿ ಕಟ್ಟಡ ನಿರ್ಮಿಸುತ್ತಿದ್ದೇವೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಶಾಸಕರ ಮಲೆನಾಡು ಅಭಿವೃದ್ಧಿ ಯೋಜನೆಯಡಿ ಸುಮಾರು .10 ಲಕ್ಷ ವೆಚ್ಚದಲ್ಲಿ ಮಾರಿಗುಡಿ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಹಾಗೂ ಪ್ರಧಾನ ಮಂತ್ರಿ ಜನವಿಕಾಸ ಕಾರ್ಯಕ್ರಮದಡಿ ಸುಮಾರು .15 ಲಕ್ಷ ವೆಚ್ಚದಲ್ಲಿ ಟಿಪ್ಪು ನಗರದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಅಂಗನವಾಡಿ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಈಗ ಇರುವ ಸ್ಥಳಗಳಿಗಿಂತ ದೂರದಲ್ಲಿ ಅಂಗನವಾಡಿ ನಿರ್ಮಿಸಿದರೆ ಮಕ್ಕಳಿಗೆ ಸಮಸ್ಯೆ ಆಗಲಿದೆ ಎಂದರು. ಟಿಪ್ಪು ನಗರ ಕುಳವೆ ಪಂಚಾಯತಿ ವ್ಯಾಪ್ತಿಗೆ ಬರುವುದರಿಂದ ಇಲ್ಕಿನ ಅಭಿವೃದ್ಧಿಗೆ ತೊಡಕಾಗಿರಬಹುದು. ಟಿಪ್ಪು ನಗರ ನಗರ ವ್ಯಾಪ್ತಿಗೆ ಹತ್ತಿರವಾಗುವುದರಿಂದ ನಗರಸಭೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಪ್ರಯತ್ನಮಾಡಲಾಗುವು ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ,ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸಿಡಿಪಿಯು ದತ್ತಾತ್ರೇಯ ಭಟ್ಟ, ಕುಳವೆ ಗ್ರಾಪಂ ಸದಸ್ಯ ಶ್ರೀನಿವಾಸ ಶೆಟ್ಟಿಮುಂತಾದವರು ಇದ್ದರು.

Latest Videos

ಪೊರಕೆ ಹಿಡಿದು ಬಸ್‌ ನಿಲ್ದಾಣ ಸ್ವಚ್ಛಗೊಳಿಸಿದ ಸ್ಪೀಕರ್‌ ಕಾಗೇರಿ

click me!