ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವೀರ ಹುತಾತ್ಮ ಯೋಧ ಕಾಶಿರಾಯ್ ಬೊಮ್ಮನಳ್ಳಿಯ ಕಂಚಿನ ಮೂರ್ತಿಯನ್ನ ಗ್ರಾಮಸ್ಥರೆ ನಿರ್ಮಾಣ ಮಾಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಮೂವರು ಉಗ್ರರನ್ನ ಸದೆಬಡಿದು, ವೀರ ಮರಣವನ್ನಪ್ಪಿದ್ದ ಕಾಶಿರಾಯಗೆ ಗೌರವ ಸಲ್ಲಿಸೋಕೆ ಗ್ರಾಮಸ್ಥರೇ ಪುತ್ಥಳಿ ನಿರ್ಮಿಸಿದ್ದಾರೆ. ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಯೋಧ ಕಾಶಿರಾಯನ ಸರ್ಕಲ್ ನಿರ್ಮಿಸಿ ಎಂಟೂವರೆ ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಿದ್ದಾರೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ನ.05): ಆತ ಆ ಗ್ರಾಮದ ಹೆಮ್ಮೆಯ ಯೋಧ. ದೇಶದ ಮೇಲೆ ಅಪಾರಭಕ್ತಿ ಹೊಂದಿದ್ದ ಆ ಯೋಧ ಉಗ್ರರ ಎದೆಸೀಳಿ ಭಾರತಾಂಬೆಯ ಮಡಿಲು ಸೇರಿದ್ದ. ಮರಣೋತ್ತರವಾಗಿ ರಾಷ್ಟ್ರಪತಿಗಳಿಂದ ಶೌರ್ಯಚಕ್ರ ಪಡೆದಿದ್ದ. ಈಗ ಆ ಧೀರಯೋಧನಿಗೆ ಗೌರವ ಸಲ್ಲಿಸೋಕೆ ಆ ಗ್ರಾಮದ ಜನರೇ ಸೇರಿ ಯೋಧನ ಕಂಚಿನ ಪುತ್ಥಳಿ ನಿರ್ಮಾಣ ಮಾಡಿ ನಿಲ್ಲಿಸಿದ್ದಾರೆ.
undefined
ವೀರಯೋಧನ ಸ್ಮರಣೆಗೆ ಕಂಚಿನ ಪುತ್ಥಳಿ...!
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವೀರ ಹುತಾತ್ಮ ಯೋಧ ಕಾಶಿರಾಯ್ ಬೊಮ್ಮನಳ್ಳಿಯ ಕಂಚಿನ ಮೂರ್ತಿಯನ್ನ ಗ್ರಾಮಸ್ಥರೆ ನಿರ್ಮಾಣ ಮಾಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಮೂವರು ಉಗ್ರರನ್ನ ಸದೆಬಡಿದು, ವೀರ ಮರಣವನ್ನಪ್ಪಿದ್ದ ಕಾಶಿರಾಯಗೆ ಗೌರವ ಸಲ್ಲಿಸೋಕೆ ಗ್ರಾಮಸ್ಥರೇ ಪುತ್ಥಳಿ ನಿರ್ಮಿಸಿದ್ದಾರೆ. ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಯೋಧ ಕಾಶಿರಾಯನ ಸರ್ಕಲ್ ನಿರ್ಮಿಸಿ ಎಂಟೂವರೆ ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಿದ್ದಾರೆ.
ರೈತರ ಹಿತದ ಬದಲು ಕುರ್ಚಿ ಹಿತ ರಕ್ಷಣೆ ಮಾಡುತ್ತಿರುವ ಸಿಎಂ: ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ
ಗ್ರಾಮಸ್ಥರೇ ಹಣ ಸೇರಿಸಿ ಪುತ್ಥಳಿ ನಿರ್ಮಾಣ..!
ಇನ್ನು ವೀರಯೋಧ ಕಾಶಿರಾಯ ಮೂರ್ತಿ ನಿರ್ಮಾಣಕ್ಕೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಯಾರಿಂದಲು ಸಹಾಯ ಪಡೆದಿಲ್ಲ. ತಾವೇ ಸ್ವತಃ ಗ್ರಾಮಸ್ಥರೆಲ್ಲ ಸೇರಿ ಯೋಧನಿಗೆ ಗೌರವ ಸಲ್ಲಿಸಲು ಪ್ರತಿಯೊಬ್ಬರು ಹಣ ಸೇರಿಸಿದ್ದಾರೆ. ಹೀಗೆ ಸೇರಿಸಿದ ಹಣದಲ್ಲಿ 15 ಲಕ್ಷ ವ್ಯಚ್ಚದಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ವೀರಯೋಧನ ಈ ಹೆಮ್ಮೆಯ ಪುತ್ಥಳಿಯನ್ನ ಬಸವನ ಬಾಗೇವಾಡಿ ಶಾಸಕ ಹಾಗೂ ಸಕ್ಕರೆ ಸಚಿವರಾಗಿರೋ ಶಿವಾನಂದ ಪಾಟೀಲ್ ಉದ್ಘಾಟಿಸಿದ್ದಾರೆ.
ಮರಣೊತ್ತರವಾಗಿ ಸಿಕ್ಕಿತ್ತು ಶೌರ್ಯಚಕ್ರ..!
ಕಳೆದ 2ಜುಲೈ 2021 ರಂದು ಪುಲ್ವಾಮಾ ಗಡಿಯಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧ ಕಾಶೀರಾಯನಿಗೆ ಮರೋಣತ್ತರವಾಗಿ ಶೌರ್ಯಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ರಾಷ್ಟ್ರಪತಿಯವರು ನೀಡಿದ ಪ್ರಶಸ್ತಿಯನ್ನ ಯೋಧ ಕಾಶಿರಾಯ್ ಪತ್ನಿ ಸಂಗೀತಾ ಸ್ವೀಕರಿಸಿದ್ರು. ಪ್ರಶಸ್ತಿ ನೀಡುವ ವೇಳೆ ಕಾಶಿರಾಯನ ಹೋರಾಟದವನ್ನ ಸ್ಮರಿಸಲಾಗಿತ್ತು. ಮೂವರು ಉಗ್ರರನ್ನ ಕೊಂದು ಬಳಿಕ ದಾಳಿಯಲ್ಲಿ ವೀರಸ್ವರ್ಗ ಸೇರಿದ ಕಾಶಿರಾಯನ ಧೈರ್ಯ, ಶೌರ್ಯವನ್ನ ಶ್ಲಾಘಿಸಲಾಗಿತ್ತು.
ಹುತಾತ್ಮ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದ ಉಕ್ಕಲಿ ಗ್ರಾಮ..!
ಉಕ್ಕಲಿ ಗ್ರಾಮದವರಾದ ಕಾಶಿರಾಯ 2005 ರಲ್ಲಿ ಭಾರತೀಯ ಸೇನೆಯನ್ನ ಸೇರಿದ್ದರು. ಬಳಿಕ ರಾಷ್ಟ್ರೀಯ ರೈಫಲ್ ಸೆಂಟರ್ ವಿಭಾಗದಲ್ಲಿ ನಿಯುಕ್ತಿಯಾಗಿದ್ದರು. ಶ್ರೀನಗರ ಬಳಿ ಗಡಿಯ ಪುಲ್ವಾಮಕ್ಕೆ ವರ್ಗಾವಣೆಗೊಂಡಿದ್ದ ವೇಳೆ ಉಗ್ರರ ದಾಳಿ ನಡೆದಿತ್ತು. ಕಾಶಿರಾಯ ತನ್ನ ಪ್ರತಿಆಕ್ರಮಣದ ಮೂಲಕ ಉಗ್ರರನ್ನ ಬೆಚ್ಚಿಬೀಳುವ ಹಾಗೇ ಮಾಡಿದ್ದರು. ಸೆಣೆಸಾಟದಲ್ಲಿಯೂ ತಾನು ಪ್ರಾಣ ಚೆಲ್ಲುವ ಮೊದಲು ಮೂವರು ಉಗ್ರರನ್ನ ಬಲಿ ಪಡೆದಿದ್ದರು ಅನ್ನೋದು ವಿಶೇಷ. ಈ ಸುದ್ದಿ ತಿಳಿದ ಉಕ್ಕಲಿ ಗ್ರಾಮಸ್ಥರು ಕಣ್ಣೀರು ಹಾಕಿದ್ದರು. ಅಂತ್ಯಕ್ರಿಯೆ ವೇಳೆ ವಿಜಯಪುರ ಜಿಲ್ಲೆ ಅಷ್ಟೆ ಅಲ್ಲದೆ ಸುತ್ತಮುತ್ತಲ ಜಿಲ್ಲೆಗಳ ದೇಶಭಕ್ತರು ಪಾಲ್ಗೊಂಡಿದ್ದರು.