ಕೊಪ್ಪಳ:11 ಹಳ್ಳಕ್ಕೆ 39.80 ಕೋಟಿಯಲ್ಲಿ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ

By Kannadaprabha NewsFirst Published Jul 3, 2024, 6:43 PM IST
Highlights

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ₹ 39.80 ಕೋಟಿಯಲ್ಲಿ ನಿರ್ಮಾಣವಾಗಲಿವೆ ಬ್ರೀಡ್ಜ್ ಕಂ ಬ್ಯಾರೇಜ್.  ನಿಟ್ಟಾಲಿಯಲ್ಲಿ ಜಿನುಗು ಕೆರೆ ನಿರ್ಮಾಣ. 

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು (ಜು.3): ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ನಾನಾ ಗ್ರಾಮದಲ್ಲಿ ರಸ್ತೆಯ ಮಧ್ಯ ಹರಿಯುತ್ತಿರುವ ಹಳ್ಳಕ್ಕೆ ಬ್ರಿಜ್‌ ಕಂ ಬ್ಯಾರೇಜ್, ತಾಲೂಕಿನ ನಿಟ್ಟಾಲಿ ಗ್ರಾಮದಲ್ಲಿ ಜಿನುಗು ಕೆರೆ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿ ಅನುದಾನ ನೀಡಿ ಆದೇಶ ಹೊರಡಿಸಿದೆ.

ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ 11 ಗ್ರಾಮದಲ್ಲಿ ಹಳ್ಳಕ್ಕೆ ಬ್ರಿಜ್‌ ಕಂ ಬ್ಯಾರೇಜ್ ಹಾಗೂ ನಿಟ್ಟಾಲಿಯಲ್ಲಿ ಜಿನುಗು ಕೆರೆ ನಿರ್ಮಾಣಕ್ಕೆ ಬರೋಬ್ಬರಿ ₹39.80 ಕೋಟಿ ಅನುದಾನ ಬಿಡುಗಡೆಯಾಗಿದೆ. ಸದ್ಯ ಟೆಂಡರ್ ಆಗಿ ಕಾಮಗಾರಿ ಆರಂಭವಾಗಬೇಕಿದೆ.

ಮಲೆನಾಡು-ಕರಾವಳಿ ರೈಲ್ವೆ ಯೋಜನೆ ಶೀಘ್ರ ಜಾರಿಗೆ ಮನವಿ

ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಹಳ್ಳಗಳಿಗೆ ಬ್ರೀಡ್ಜ್ ಕಂ ಬ್ಯಾರೇಜ್, ಕೆರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕ್ಷೇತ್ರದಲ್ಲಿ ಹಳ್ಳಕ್ಕೆ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಹಳ್ಳಗಳಲ್ಲಿ ಹರಿಯುತ್ತಿರುವ ನೀರು ನಿಂತು ಅಂತರ್ಜಲ ಮಟ್ಟ ಸಹ ಹೆಚ್ಚುತ್ತದೆ. ಅಲ್ಲದೆ ರಸ್ತೆ ಸಂಪರ್ಕ ಸಹ ಸುರಕ್ಷಿತವಾಗಿರುತ್ತದೆ ಎಂಬ ಉದ್ದೇಶದಿಂದ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದಾರೆ.

ಎಲ್ಲೆಲ್ಲಿ ಬ್ರಿಜ್‌ ಕಂ ಬ್ಯಾರೇಜ್: ಕುಕನೂರು ತಾಲೂಕಿನ ಬಳಗೇರಿ-ನೂದಗುಂಪಾ ಗ್ರಾಮಗಳ ಮಧ್ಯೆದ ಹಳ್ಳಕ್ಕೆ ₹9.90 ಕೋಟಿ ವೆಚ್ಚದಲ್ಲಿ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣ. ಸಿದ್ನೇಕೊಪ್ಪ ಮತ್ತು ಯರೇಹಂಚಿನಾಳ ಮಧ್ಯೆ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ಕಮ್ ಬ್ರಿಡ್ಜ್‌ ನಿರ್ಮಾಣಕ್ಕೆ ₹2.50 ಕೋಟಿ. ಮನ್ನಾಪೂರ ಮತ್ತು ಮಾಳೆಕೊಪ್ಪ ಗ್ರಾಮದ ಮಧ್ಯೆದ ಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ರಿಜ್‌ ನಿರ್ಮಾಣ ಕಾಮಗಾರಿಗೆ ₹3.20 ಕೋಟಿ. ತಳಕಲ್ಲ-ಕೋಮಲಾಪೂರ ಮಧ್ಯೆದ ಬಣ್ಣಗೇರಿ ಹಳ್ಳಕ್ಕೆ ₹2.75 ಕೋಟಿ ಅನುದಾನ.

ರಕ್ಷಿಸುವ ಹೊಣೆ ಹೊತ್ತ ಗುತ್ತಿಗೆದಾರನಿಂದಲೇ ಪಾರ್ಕ್‌ನ ಮರಕ್ಕೆ ಕೊಡಲಿ, 25 ಸಾವಿರ ರು. ದಂಡ

ಯಲಬುರ್ಗಾ ತಾಲೂಕಿನ ಗುಂಟುಮಡು ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ಕಮ್ ಬ್ರಿಜ್‌ ನಿರ್ಮಾಣಕ್ಕೆ ₹4.75 ಕೋಟಿ. ಬಂಡಿ ಮತ್ತು ಕಡಬಲಕಟ್ಟಿ ಗ್ರಾಮದ ಮಧ್ಯೆ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣಕ್ಕೆ ₹1.50 ಕೋಟಿ. ಬಳೂಟಗಿ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಚೆಕ್ ಟ್ಯಾಂ ಕಮ್ ಬ್ರಿಜ್‌ ನಿರ್ಮಾಣಕ್ಕೆ ₹1.80 ಕೋಟಿ. ಮದ್ಲೂರು-ಲಗಳೂರು ಮಧ್ಯೆ ಹರಿಯುವ ಹಳ್ಳಕ್ಕೆ ಬ್ಯಾರೇಜ್ ಕಂ ಬ್ರಿಜ್‌ ನಿರ್ಮಾಣಕ್ಕೆ ₹3.35 ಕೋಟಿ, ಚಿಕೇನಕೊಪ್ಪ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಬ್ರಿಜ್‌ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹2.40 ಕೋಟಿ, ಶಿಡ್ಲಬಾವಿ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಬ್ರಿಜ್‌ ಕಂ ಬ್ಯಾರೇಜ್ ಗೆ ₹2 ಕೋಟಿ, ಸೋಮಫೂರು, ಮಾಳೇಕೊಪ್ಪ ಮಧ್ಯೆ ಹರಿಯುವ ಹಳ್ಳಕ್ಕೆ ₹3.20 ಕೋಟಿ, ನಿಟ್ಟಾಲಿ ಗ್ರಾಮದ ಸರ್ವೆ ನಂ 11ರಲ್ಲಿ ಹೊಸ ಜಿನುಗು ಕೆರೆ ನಿರ್ಮಾಣಕ್ಕೆ ₹ 2.45 ಕೋಟಿ ಅನುದಾನ ಬಿಡುಗಡೆಯಾಗಿದೆ.

ಯಲಬುರ್ಗಾ ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ನೀರಿನ ಅಭಾವ ನೀಗಿಸಲು, ರಸ್ತೆ ಸಂಪರ್ಕ ಸುರಕ್ಷಿತವಾಗಿರಲು ಕೆರೆ ನಿರ್ಮಾಣಕ್ಕೆ ಸರ್ಕಾರದಿಂದ ₹39.80 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ 11 ಗ್ರಾಮದ ಹಳ್ಳಗಳಿಗೆ ಬ್ರಿಜ್‌ ಕಂ ಬ್ಯಾರೇಜ್, ಚೆಕ್ ಡ್ಯಾಂ ಹಾಗೂ ನಿಟ್ಟಾಲಿ ಗ್ರಾಮದಲ್ಲಿ ಜಿನುಗು ಕೆರೆ ನಿರ್ಮಾಣವಾಗಲಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

click me!