ದೇಶಕ್ಕೆ ಸಂವಿಧಾನ ಲಿಖಿತ ಗುರು: ಯೋಗೀಶ್‌

Published : Jul 04, 2023, 07:30 AM IST
 ದೇಶಕ್ಕೆ ಸಂವಿಧಾನ ಲಿಖಿತ ಗುರು: ಯೋಗೀಶ್‌

ಸಾರಾಂಶ

ನಗರದ ಜಯನಗರ ದಕ್ಷಿಣ ಹೊರವಲಯದಲ್ಲಿರುವ ವರದರಾಜ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಸೋಮವಾರದಂದು ಗುರುಪೂರ್ಣಿಮಾ ದಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

  ತುಮಕೂರು :  ನಗರದ ಜಯನಗರ ದಕ್ಷಿಣ ಹೊರವಲಯದಲ್ಲಿರುವ ವರದರಾಜ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಸೋಮವಾರದಂದು ಗುರುಪೂರ್ಣಿಮಾ ದಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪ್ರಾಂಶುಪಾಲ ಡಿ.ಪಿ. ಯೋಗೀಶ್‌ ಮಾತನಾಡಿ, ಅರಿವೇ ಗುರು ವ್ಯಕ್ತಿಯನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಮಾರ್ಪಡಿಸುವವನೇ ನಿಜವಾದ ಗುರು. ಅಂತಹ ಮೊದಲ ಹಂತದ ಗುರುಗಳಾದ ಬುದ್ಧ, ಮಹಾವೀರ, ವ್ಯಾಸ, ವಾಲ್ಮೀಕಿ, ಸಾವಿತ್ರಿಬಾಯಿ ಪುಲೆ ಮುಂತಾದ ಗುರುಗಳಿಗೆ ವಂದನೆಯನ್ನು ಸಲ್ಲಿಸುನವುದರ ಜೊತೆಗೆ ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಗುರಿ ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.

ಈ ದಿಸೆಯಲ್ಲಿ ಒಂದು ಅಕ್ಷರವ ಕಲಿಸಿದಾತ ಗುರು ಅಂದರೆ ಕಲಿಯುವುದಕ್ಕೆ ಕಾರಣಕರ್ತನಾದ ಪ್ರತಿಯೊಬ್ಬರು ಗುರುಗಳೇ. ಇದರಲ್ಲಿ ಹಿರಿಯ ಕಿರಿಯನೆಂಬ ಭೇದವಿಲ್ಲ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೆಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಸತತ ಅಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಪ್ರತಿಫಲ ಸಿಕ್ಕೆ ಸಿಗುತ್ತದೆ. ಸದಾಶಯದಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು ಹಾಗೆ ಪ್ರಯತ್ನವನ್ನು ಬಿಡಬಾರದು. ಈ ಹಿನ್ನೆಲೆಯಲ್ಲಿ ಕಲಿಸಿದ ವ್ಯಕ್ತಿಗಳು ಮಾತ್ರ ಗುರುವೆಂದು ಭಾವಿಸಬಾರದು ಬದಲಿಗೆ ಕಲಿಕೆಗೆ ಕಾರಣವಾದ ಪ್ರಕೃತಿ ಮತ್ತು ಪುಸ್ತಕಗಳು ಕೂಡ ನಮಗೆ ಗುರುವಿನ ಸ್ಥಾನವನ್ನು ತುಂಬುತ್ತವೆ ಎಂದರು.

ಉದಾಹರಣೆಗೆ ಭಾರತದ ಸಂವಿಧಾನ ಕೃತಿಯು ಕೂಡ ಗುರುವೇ ಹೇಗಂದರೆ ಎಲ್ಲರಿಗೂ ಕಲಿಯುವ ಸಮಾನ ಅವಕಾಶ ದೊರಕಿಸಿ ಕೊಟ್ಟಂತಹ ಸಂವಿಧಾನ ಲಿಖಿತ ಗುರುವೇ ಆಗಿದೆ ಎನ್ನಬಹುದು. ಹಾಗಾಗಿ ವಿದ್ಯಾರ್ಥಿಗಳಿಗೆ ಅಂತಹ ಗುರುಗಳು ದೊರೆತು ವ್ಯಕ್ತಿಗಳ ಗುರಿಗಳು ನನಸಾಗಿಸುವುದಕ್ಕೆ ಈ ಎಲ್ಲವೂ ಪೂರಕವಾಗಿರಲಿ ಎಂದು ಅಭಿಪ್ರಾಯಪಟ್ಟರು.

ಗುರುವಂದನ ಕಾರ್ಯಕ್ರಮದಲ್ಲಿ ಅಧ್ಯಾಪಕರು, ಅಧ್ಯಾಪಕೇತರರು, ಆಡಳಿತ ಅಧಿಕಾರಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಸಂವಿಧಾನ ಪೀಠಿಕೆ ಓದು

, ವಿಧಾನಸಭೆ (ಜು.4) : ವಿಧಾನಸಭೆಯಲ್ಲಿ ಸಂವಿಧಾನ ಪೀಠಿಕೆ ಓದುವ ಸಂಪ್ರದಾಯಕ್ಕೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಸೋಮವಾರ ಚಾಲನೆ ನೀಡಿದರು. ಆದರೆ ಇದೇ ವೇಳೆ, ಪೀಠಿಕೆ ಓದುವುದರಲ್ಲಿ ಆದ ಸಣ್ಣ ಲೋಪಗಳ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಸಿದ್ದು 2.0 ಸರ್ಕಾರದ ಮೊದಲ ಅಧಿವೇಶನ ಆರಂಭ: ಹಸಿವು, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಸರ್ಕಾರ ಪಣ

ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ ಮುಗಿದ ಬಳಿಕ ಸದನವನ್ನು ಮುಂದೂಡಿ ಮತ್ತೆ ಸಮಾವೇಶಗೊಳಿಸಲಾಯಿತು. ಈ ವೇಳೆ ಸದಸ್ಯರಿಗೆ ಮಾಹಿತಿ ನೀಡಿ, ಸಂವಿಧಾನ ಪೀಠಿಕೆ ಓದಲಾರಂಭಿಸಿದ ಸ್ಪೀಕರ್‌ ಯು.ಟಿ. ಖಾದರ್‌, ಸದಸ್ಯರಿಗೆ ಪುನರುಚ್ಛಾರ ಮಾಡುವಂತೆ ಕೋರಿದರು.

PREV
Read more Articles on
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!