ಸಂವಿಧಾನವೇ ನಮ್ಮ ಬದುಕಿಗೆ ದಾರಿದೀಪ: ಶಾಸಕ ಎಂ.ವೈ.ಪಾಟೀಲ್‌

By Kannadaprabha News  |  First Published Jun 16, 2023, 11:59 PM IST

ಭಾರತದಂತ ಸರ್ವಧರ್ಮಗಳ ದೇಶದಲ್ಲಿ ಎಲ್ಲರಿಗೂ ಸಮಾನತೆ, ಸಹಬಾಳ್ವೆ, ಸ್ವಾತಂತ್ರ ಕಲ್ಪಿಸಿದ್ದಲ್ಲದೆ ಎಲ್ಲಾ ರೀತಿಯ ಹಕ್ಕುಗಳನ್ನು ಕೊಡುವ ಮೂಲಕ ನಾವು ಸ್ವತಂತ್ರವಾಗಿ ಬದುಕು ನಡೆಸಲು ಅಂಬೇಡ್ಕರ್‌ ಅವರು ಬರೆದ ಸಂವಿಧಾನವೇ ಕಾರಣವಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್‌ ಹೇಳಿದರು. 


ಚವಡಾಪುರ (ಜೂ.16): ಭಾರತದಂತ ಸರ್ವಧರ್ಮಗಳ ದೇಶದಲ್ಲಿ ಎಲ್ಲರಿಗೂ ಸಮಾನತೆ, ಸಹಬಾಳ್ವೆ, ಸ್ವಾತಂತ್ರ ಕಲ್ಪಿಸಿದ್ದಲ್ಲದೆ ಎಲ್ಲಾ ರೀತಿಯ ಹಕ್ಕುಗಳನ್ನು ಕೊಡುವ ಮೂಲಕ ನಾವು ಸ್ವತಂತ್ರವಾಗಿ ಬದುಕು ನಡೆಸಲು ಅಂಬೇಡ್ಕರ್‌ ಅವರು ಬರೆದ ಸಂವಿಧಾನವೇ ಕಾರಣವಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್‌ ಹೇಳಿದರು. ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದ 132ನೇ ಜಯಂತಿ ಕಾರ್ಯಕ್ರಮ ಹಾಗೂ ತಥಾಗತ ಗೌತಮ ಬುದ್ಧರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ 140 ಕೋಟಿ ಜನರಿಗೆ ನ್ಯಾಯ ಒದಗಿಸಿರುವ ಹಾಗೂ ಭಾರತವನ್ನು ಜಗತ್ತಿನ ಮುಂದೆ ಬಲಿಷ್ಠವಾಗಿ ನಿಲ್ಲಲು ಕಾರಣವಾಗಿರುವ ಸಂವಿಧಾನವನ್ನು ಸಡಿಲಗೊಳಿಸುವ ಕೆಲಸ ನಡೆಸಲಾಗುತ್ತಿದೆ ಹೀಗಾಗಿ ಸಂವಿಧಾನದ ಉಳಿವಿಗೆ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ ಎಂದ ಅವರು ಬಡದಾಳ ಗ್ರಾಮಸ್ಥರೆಲ್ಲ ಕೂಡಿಕೊಂಡು ಸಂವಿಧಾನ ಶಿಲ್ಪಿಯ ಜಯಂತಿ ಆಚರಣೆಯ ಜೊತೆಗೆ ಜಗತ್ತಿಗೆ ಶಾಂತಿಯ ಸನ್ಮಾರ್ಗ ತೋರಿದ ಭಗವಾನ್‌ ಬುದ್ಧರ ಪ್ರತಿಮೆ ಅನಾವರಣ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ. ಹಿಂದುಳಿದ ಸಮುದಾಯಗಳ ಏಳಿಗೆಗೆ ಬೇಕಾದ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ನಾನು ಸದಾ ಸಿದ್ಧನಿದ್ದೇನೆ ಎಂದರು.

Tap to resize

Latest Videos

undefined

ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮತ್ತೆ ಒತ್ತಾಯ!

ಕಲಬುರಗಿ ಬುದ್ಧ ವಿಹಾರದ ಸಂಘಾನಂದ ಭಂತೆಜೀ, ಬಡದಾಳ ಮಠದ ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ನಾವಿಂದು ಎಂತಹ ಉತ್ಕೃಷ್ಟಜೀವನ ಮಟ್ಟಅನುಭವಿಸುತ್ತಿದ್ದೇವೋ ಅದಕ್ಕೆ ಬಾಬಾಸಾಹೇಬರು ಕಾರಣವಾಗಿದ್ದಾರೆ. ಅವರ ಜಯಂತಿಯನ್ನು ಕೇವಲ ಆಚರಣೆ ಮಾಡಿ ಬಿಡುವ ಬದಲಾಗಿ ಅವರ ವಿಚಾರಧಾರೆಗಳನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ವಕೀಲ ನಾಗೇಶ ಕೊಳ್ಳಿ, ಶಿಕ್ಷಕ ಮಹೇಶ ಅಂಜುಟಗಿ, ಸಾರಿಗೆ ಬಸ್‌ ನಿರ್ವಾಹಕ ತಿಪ್ಪಣ್ಣ ಸಿಂಗೆ ಮಾತನಾಡಿದರು. ಮುಖಂಡ ದಸ್ತಯ್ಯ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ಸೋನಕಾಂಬಳೆ ಭಗವಾನ್‌ ಗೌತಮ ಬುದ್ಧರ ಪ್ರತಿಮೆ ಅನಾವರಣಗೊಳಿಸಿದರು. ತಹಸೀಲ್ದಾರ ಸಂಜೀವಕುಮಾರ ದಾಸರ್‌ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು: ಸಿ.ಟಿ.ರವಿ

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅಮೃತ ಮಾತಾರಿ, ಮಾಜಿ ಜಿಪಂ ಸದಸ್ಯ ಸಿದ್ದಾರ್ಥ ಬಸರಿಗಿಡ, ದಸಂಸ ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಜಯಂತಿ ಸಮಿತಿ ಅಧ್ಯಕ್ಷರಾದ ಖಾಜಪ್ಪ ಸಿಂಗೆ, ಮರೇಪ್ಪ ಸಿಂಗೆ, ಮುಖಂಡರಾದ ಶ್ರೀಕಾಂತ ನಿಂಬಾಳ, ಮಹಾಲಿಂಗ ಅಂಗಡಿ, ಮಲ್ಲಿನಾಥ ಅತನೂರೆ, ಅಂಬಾರಾಯ ಗುಡೆದಮನಿ, ಪರಮೇಶ್ವರ ಶಿರೂರ, ಪುತ್ರು ಕುರುಬತಳ್ಳಿ, ಸದಾಶಿವ ಬ್ಯಾಡಿಗಿಹಾಳ, ರೂಪವಾನ ಪ್ಯಾಟಿ, ವಿನೋದ ಅತನೂರ, ಶೆಟ್ಟೆಪ್ಪ ಇಮ್ಮನ, ಚನ್ನಬಸು ದೊಡ್ಮನಿ, ಬಡದಾಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರತ್ನಶೀಲಾ, ಮುಖ್ಯಗುರು ರಾವುತಪ್ಪ ಬಿಂಗೋಳಿ, ಪಿಡಿಒ ವಾಸಿಮೋದ್ದೀನ್‌ ಮಣೂರಕರ ಇದ್ದರು. ಚಂದ್ರಕಾಂತ ಶಿರೂರ ಸ್ವಾಗತಿಸಿದರು. ನಿಂಗರಾಜ್‌ ನಾಗರಳ್ಳಿ ನಿರೂಪಿಸಿದರು. ಶಂಕರ ಮುಗಾ ವಂದಿಸಿದರು.

click me!