ಸದೃಢ ಭಾರತಕ್ಕೆ ಸಂವಿಧಾನ ಅಡಿಪಾಯ: ಕುಮಾರಸ್ವಾಮಿ

By Kannadaprabha NewsFirst Published Jan 28, 2024, 12:17 PM IST
Highlights

ಸದೃಢ ಭಾರತ ಮತ್ತು ಸುಭದ್ರ ಸರ್ಕಾರಕ್ಕೆ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವೇ ಅಡಿಪಾಯವಾಗಿದೆ ಎಂದು ಪ್ರಾಂಶುಪಾಲ ಪ್ರೊ.ಎಚ್.ಬಿ. ಕುಮಾರಸ್ವಾಮಿ ತಿಳಿಸಿದರು.

 ತಿಪಟೂರು :  ಸದೃಢ ಭಾರತ ಮತ್ತು ಸುಭದ್ರ ಸರ್ಕಾರಕ್ಕೆ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವೇ ಅಡಿಪಾಯವಾಗಿದೆ ಎಂದು ಪ್ರಾಂಶುಪಾಲ ಪ್ರೊ.ಎಚ್.ಬಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಿಸಿದ 75ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನವು ದೇಶದ ಪ್ರತಿ ನಾಗರಿಕರ ಹಕ್ಕುಗಳನ್ನು ಕಾಪಾಡುತ್ತಿದೆ. ಏಕತೆ, ಸಮಗ್ರತೆ ಮತ್ತು ಸದೃಢ ನಿರ್ಮಾಣದಲ್ಲಿ ಭಾರತದ ವು ಅತ್ಯಂತ ಮೇಲ್ಮಟ್ಟದಲ್ಲಿದೆ. ವಿಶ್ವದ ಅನೇಕ ದೇಶಗಳ ಸಂವಿಧಾನಗಳಿಗಿಂತ ನಮ್ಮ ಸಂವಿಧಾನವು ವರ್ತಮಾನದ ಸನ್ನಿವೇಶಗಳನ್ನು, ದೇಶದ ಸಾರ್ವಭೌಮತೆಯನ್ನು ಸಮಗ್ರತೆ, ಏಕತೆಯನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು. ಸಂವಿಧಾನದ ಕೊಡುಗೆ ಅಪಾರವಾಗಿದ್ದು ಧರ್ಮ, ಜಾತಿ, ಸಮುದಾಯಗಳಿಗೆ ಧಕ್ಕೆಯಾಗದಂತೆ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯಗಳನ್ನು ರಕ್ಷಿಸುವತ್ತ ಸಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಂತೆ ಗಣ ರಾಜ್ಯೋತ್ಸವ ಅಮೃತ ಮಹೋತ್ಸವವನ್ನು ನಾವು ಆಚರಣೆ ಮಾಡುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಬೇಕೆಂದರು.

Latest Videos

ಈ ಸಂದರ್ಭದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಚಂದ್ರಶೇಕರ್, ಸೈಯದ್ ಇಬ್ರಾಹಿಂಸಾಬ್, ಡಾ.ಎಂ.ಜಿ. ಜ್ಯೋತಿ, ಡಾ.ಕೆ.ಬಿ. ಸರಸ್ವತಿ, ಕೆ. ಮಮತಾ, ಆರ್‌. ನಾಗರಾಜು, ಅನುಪ್ರಸಾದ್, ಡಾ.ಎಂ.ಆರ್‌. ಚಿಕ್ಕಹೆಗ್ಗಡೆ, ಸುಭದ್ರಮ್ಮ ಸೇರಿದಂತೆ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

click me!