ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ನಗರದ ಪೊಲೀಸ್ ಬಡಾವಣೆಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ಮೃಗಾಲಯ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಸಂಯುಕ್ತವಾಗಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮೈಸೂರು : ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ನಗರದ ಪೊಲೀಸ್ ಬಡಾವಣೆಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ಮೃಗಾಲಯ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯತ್ ಸಂಯುಕ್ತವಾಗಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಪೊಲೀಸ್ ಬಡಾವಣೆಯ 2ನೇ ಹಂತದಲ್ಲಿರುವ (ಸರ್ದಾರ್ ವಲ್ಲಭಭಾಯ್ ಪಟೇಲ್ ನಗರ) ತಿಪ್ಪಯ್ಯನಕೆರೆ ಸುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ, ಬಡಾವಣೆಯ ನಿವಾಸಿಗಳು ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.
undefined
ಸ್ವಚ್ಛತಾ ಕಾರ್ಯ ಆರಂಭಕ್ಕೂ ಮುನ್ನ ಸ್ವಚ್ಛತೆಯಿಂದ ಮನೆ, ಮನ, ಪರಿಸರ ಹಾಗೂ ದೇಶಕ್ಕಾಗುವ ಲಾಭದ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸಲಾಯಿತು. ಸದಾ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಿವಾಸಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ವೇಳೆ ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಮೈಸೂರು ಪ್ರಕೃತಿದತ್ತವಾದ ನಗರವಾಗಿದ್ದು, ಇಡೀ ದೇಶದಲ್ಲೇ ಭೌಗೋಳಿಕವಾಗಿ ತನ್ನದೇ ಆದ ಸ್ಥಾನ ಕಂಡುಕೊಂಡಿದೆ. ಇಂತಹ ನಗರವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ಕೆರೆಗಳು ಜಲಮೂಲದ ಪ್ರಮುಖ ತಾಣಗಳಾಗಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿರುವ ಕೆಲವೇ ದೊಡ್ಡ ಕೆರೆಗಳ ಪೈಕಿ ಚಾಮುಂಡಿಬೆಟ್ಟದ ಮಗ್ಗುಲಲ್ಲಿರುವ ತಿಪ್ಪಯ್ಯನಕೆರೆ ಕೂಡ ಒಂದಾಗಿದೆ. ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಕೆರೆ ಸುತ್ತಮುತ್ತ ಸ್ಥಳೀಯರು ಕಸ ಸುರಿಯುತ್ತಿರುವುದು ಅತ್ಯಂತ ಬೇಸರದ ವಿಚಾರ. ಬದಲಾದ ಪರಿಸ್ಥಿತಿಯಲ್ಲಿ ಪರಿಸರದ ಮೇಲೆ ಮಾನವನ ಸವಾರಿ ನಡೆದಿದ್ದು, ಇದನ್ನು ತಪ್ಪಿಸಬೇಕಿದೆ. ಅದಕ್ಕಾಗಿ ಕೆರೆ ಆಸುಪಾಸಿನಲ್ಲಿರುವ ಬಡಾವಣೆಗಳ ನಾಗರಿಕರು ಗರಿಷ್ಠ ಪ್ರಮಾಣದ ಕಾಳಜಿಯನ್ನು ಕೆರೆಗೆ ಮೀಸಲಿಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.
ರಮ್ಮನಹಳ್ಳಿ ಪಪಂ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಮೂರ್ತಿ, ಕಿರಿಯ ಆರೋಗ್ಯ ನಿರ್ವಾಹಕ ಚನ್ನನಾಯಕ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಮನುಕುಮಾರ್, ಮಾನಸ, ಮೋಹನಕುಮಾರ್, ಶಿವಸ್ವಾಮಿ, ಲೀಲಾ ಶಿವಕುಮಾರ್, ಬಿ.ಎಲ್. ತ್ರಿಪುರಾಂತಕ, ಮೋಹನರಾವ್ ಮೊದಲಾದವರು ಇದ್ದರು.
ಸ್ವಚ್ಛತಾ ಕಾರ್ಯ
ಮೈಸೂರು : ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಮೈಸೂರು ತಾಲೂಕಿನ ಆನಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನಾಕ್ಷಿಪುರ ಗ್ರಾಮದ ಕೆಆರ್ ಎಸ್ ಹಿನ್ನೀರು ಪ್ರದೇಶದಲ್ಲಿ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಅವರ ನೇತೃತ್ವದಲ್ಲಿ ಭಾನುವಾರ ಶ್ರಮದಾನ ನಡೆಸಲಾಯಿತು.
ಈ ವೇಳೆ ಕೆ.ಎಂ. ಗಾಯತ್ರಿ ಮಾತನಾಡಿ, ಈ ಶ್ರಮದಾನ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಕುರಿತು ಅರಿವನ್ನು ಮೂಡಿಸಲಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಮುಂಭಾಗ ಹಾಗೂ ಅಕ್ಕ ಪಕ್ಕದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಎಲ್ಲೆಂದರಲ್ಲಿ ಕಸ ಹಾಕಬಾರದು. ಗ್ರಾಪಂ ಕಸ ಸಂಗ್ರಹಿಸುವ ವಾಹನಗಳಲ್ಲೇ ಕಸ ಹಾಕುವ ಮೂಲಕ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಅಂಗವಾಗಿ ಗ್ರಾಮದ ಹಿರಿಯರಾದ ಶತಾಯುಸಿ ಕೃಷ್ಣೆಗೌಡ (103), ಪುಟ್ಟರಾಮೇಗೌಡ (83), ಮಾದನಾಯಕ (85), ಸುಬ್ರಮಣಿ (90) ಅವರನ್ನು ಭಾರತೀಯ ಚುನಾವಣಾ ಆಯೋಗದ ಅಭಿನಂದನ ಪತ್ರವನ್ನು ನೀಡುವ ಮೂಲಕ ಸನ್ಮಾನಿಸಲಾಯಿತು.
ಬುಲೆಟ್ ವೇಗದಲ್ಲಿ ಸ್ವಚ್ಛತೆ
ಬೆಂಗಳೂರು (ಅ.2): ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ನಗರದ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 'ಮಿರಾಕಲ್' 14 ನಿಮಿಷಗಳು' ಎಂಬ ಹೆಸರಿನಡಿ ಸ್ವಚ್ಛಗೊಳಿಸುವ ವ್ಯವಸ್ಥೆ ಆರಂಭಿಸಿದೆ.
ಭಾನುವಾರ ಮಧ್ಯಾಹ್ನ ಯಶವಂತಪುರ ರೈಲು ನಿಲ್ದಾಣ(Yaswantapur railway station)ಕ್ಕೆ ಆಗಮಿಸಿದ ಕಾಚಿಗುಡ ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್(Vande bharat express) ರೈಲನ್ನು ಕೇವಲ 13 ನಿಮಿಷಗಳಲ್ಲಿ ಸ್ವಚ್ಛಗೊ ಳಿಸಿ ಪ್ರಯಾಣಿಕರಿಗೆ ರೈಲು ಹತ್ತಲು ಸಿದ್ಧಗೊಳಿಸಲಾಯಿತು. ಮೊದಲೇ ಸಿದ್ಧಗೊಂಡಿದ್ದ 25ಕ್ಕೂ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ರೈಲಿನಿಂದ ಪ್ರಯಾಣಿಕರು ಇಳಿದ ತಕ್ಷಣ ಸ್ವಚ್ಛಗೊಳಿಸಿ ಜನರಿಗೆ ಪ್ರಯಾಣಿಸಲು ಮಾಡಿಕೊಟ್ಟರು.
ರೈಲಲ್ಲಿ 'ನೀನ್ ಚಂದಾನೆ' ಹಾಡಿಗೆ ಆ್ಯಂಕರ್ ಅನುಶ್ರೀ ಸಕತ್ ಎಂಜಾಯ್: ಇಲ್ಲೂ ಮದ್ವೆ ವಿಷ್ಯ ಕೆದಕಿದ ಫ್ಯಾನ್ಸ್!
ಈ ವೇಳೆ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್, ವಂದೇ ಭಾರತ್ ರೈಲುಗಳಲ್ಲಿ ಸ್ವಚ್ಛತಾ ಪ್ರಕ್ರಿ ಯೆಗೆ ಸಮಯ ಕಡಿಮೆ ಇರುವುದರಿಂದ ಪ್ರಯಾಣಿಕರು ಹತ್ತಿ ಇಳಿಸುವುದು ತ್ವರಿತವಾಗಿ ನಡೆಯಬೇಕು. ರೈಲ್ವೆ ಸಚಿವರ ಪರಿಕಲ್ಪನೆಯಂತೆ ಜಾರಿಗೆ ಬರುತ್ತಿದೆ. ಇದು ನಿರಂತರವಾಗಿರಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಡಾ.ಎಂ. ಕೃಷ್ಣರಾಜು, ಮೈಸೂರು ತಾಪಂ ಇಒ ಎಂ.ಎಸ್. ಗಿರಿಧರ್, ಆನಂದೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಅನುರಾಧ ಉಮೇಶ್, ಪಿಡಿಒ ವಿ.ಕೆ. ಗಿರೀಶ್, ಕಾರ್ಯದರ್ಶಿ ಅನ್ನಪೂರ್ಣ ಮೊದಲಾದವರು ಇದ್ದರು.