ಶ್ರೀನಾಥ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ: ಎಐಸಿಸಿ ವೀಕ್ಷಕ ವಿವೇಕ್ ಬನಸಾಲ್‌ಗೆ ಕಾಂಗ್ರೆಸ್ ಕಾರ್ಯಕರ್ತರ ಮನವಿ

Published : Aug 04, 2026, 06:11 PM IST
Gangavathi Congress

ಸಾರಾಂಶ

Gangavathi Congress: ನಗರದ ಮಾಜಿ ಸಂಸದ ಹಾಗು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಎಚ್.ಜಿ.ರಾಮುಲು ನಿವಾಸಕ್ಕೆ ಎಐಸಿಸಿ ವೀಕ್ಷಕರಾಗಿರುವ ವಿವೇಕ್ ಬನಸಾಲ ಅವರು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು.

ಗಂಗಾವತಿ (ಆ.04): ನಗರದ ಮಾಜಿ ಸಂಸದ ಹಾಗು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಎಚ್.ಜಿ.ರಾಮುಲು ನಿವಾಸಕ್ಕೆ ಎಐಸಿಸಿ ವೀಕ್ಷಕರಾಗಿರುವ ವಿವೇಕ್ ಬನಸಾಲ ಅವರು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಘಟಕಗಳ ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಪದಾದಿಕಾರಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದರು.

ನಂತರ ರಾಮುಲು ನಿವಾಸಕ್ಕೆ ಆಗಮಿಸಿ ಜಿಲ್ಲೆ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಪಕ್ಷದ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ .ಆರ್ ಶ್ರೀನಾಥ್ ಅವರು ವಿವೇಕ್ ಬನಸಾಲ ಅವರನ್ನು ಸನ್ಮಾನಿಸಿದರು. ಓಬಿಸಿ ರಾಜ್ಯ ಘಟಕದ ಉಪಾಧ್ಯಕ್ಷರಾದ ರಾಜಶೇಖರ್ ಮುಷ್ಟೂರ್. ಮುಖಂಡರಾದ ರಮೇಶ್ ಗೌಳಿ ಉಪಸ್ಥಿತರಿದ್ದರು .

ಶ್ರೀನಾಥ ಅವರಿಗೆ ಅವಕಾಶ ಕೊಡುವಂತೆ ಒತ್ತಾಯ

ಮಾಜಿ ಸಂಸದ ಹಾಗು ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಎಚ್.ಜಿ.ರಾಮುಲು ಅವರ ಪುತ್ರ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರಿಗೆ ಪ್ರಸ್ತುತ ಸರ್ಕಾರದಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ವೀಕ್ಷಕರಿಗೆ ಒತ್ತಾಯಿಸಿದರು.

ಶ್ರೀನಾಥ ಅವರು ಎರಡು ಭಾರಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಲ್ಲದೆ ಇವರ ಅಧಿಕಾರವಧಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸೇರಿದಂತೆ ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್ ಪಕ್ಷದ ಆಡಳಿತ ನಡೆಸುವಂತೆ ಸಂಘಟಿಸಿದ್ದರು. ಅಲ್ಲದೇ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದರು. ಇವರಿಂದ ಪಕ್ಷ ಸಂಘಟನೆ ಮಾಡುವದಲ್ಲದೆ ಕ್ಷೇತ್ರದ ಕಾರ್ಯಕರ್ತರಿಗೆ ಸ್ಪಂದಿಸುತ್ತಾರೆ. ಕಾರಣ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಸರ್ಕಾರದಲ್ಲಿ ನಿಗಮ ಮಂಡಳಿಗೆ ನೇಮಕ ಮಾಡುವಂತೆ ಒತ್ತಾಯಿಸಿದರು.

PREV
Read more Articles on
click me!

Recommended Stories

GBA ಶಾಂತಿನಗರ ವಿಭಾಗದಲ್ಲಿ 8.91 ಕೋಟಿ ಲೂಟಿ ಆರೋಪ.. ಬೆಚ್ಚಿ ಬೀಳಿಸುತ್ತೆ ಅಂಕಿ-ಅಂಶ..!
ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್: ಬೆಂಗಳೂರು-ವಿರಾಜಪೇಟೆ-ಕಣ್ಣೂರು ನಡುವೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆ!