'ಅಧಿಕಾರಕ್ಕಾಗಿ ಸದನದಲ್ಲಿ ಮಲಗ್ತಾರೆ, ಪ್ರತಿಭಟಿಸ್ತಾರೆ, ಗಲಾಟೆ ಮಾಡ್ತಾರೆ, ಪರಿಹಾರ ತರೋಕೆ ಯಾಕ್ ಮಾಡಲ್ಲಾ..?

Published : Oct 02, 2019, 10:29 AM ISTUpdated : Oct 02, 2019, 10:31 AM IST
'ಅಧಿಕಾರಕ್ಕಾಗಿ ಸದನದಲ್ಲಿ ಮಲಗ್ತಾರೆ, ಪ್ರತಿಭಟಿಸ್ತಾರೆ, ಗಲಾಟೆ ಮಾಡ್ತಾರೆ, ಪರಿಹಾರ ತರೋಕೆ ಯಾಕ್ ಮಾಡಲ್ಲಾ..?

ಸಾರಾಂಶ

ಬಿಜೆಪಿಯವರು ಅಧಿಕಾರಕ್ಕಾಗಿ ಸದನದಲ್ಲೇ ಮಲಗುತ್ತಾರೆ, ಪ್ರತಿಭಟಿಸುತ್ತಾರೆ, ಗಲಾಟೆ ಮಾಡುತ್ತಾರೆ. ಆದರೆ ನೆರೆ ಸಂತ್ರಸ್ತರ ಪರಿಹಾರಕ್ಕೆ ಇವೆಲ್ಲವನ್ನು ಮಾಡುವುದಿಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್‌  ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು(ಅ.02): ಬಿಜೆಪಿಯವರು ಅಧಿಕಾರಕ್ಕಾಗಿ ಸದನದಲ್ಲೇ ಮಲಗುತ್ತಾರೆ, ಪ್ರತಿಭಟಿಸುತ್ತಾರೆ, ಗಲಾಟೆ ಮಾಡುತ್ತಾರೆ. ಆದರೆ ನೆರೆ ಸಂತ್ರಸ್ತರ ಪರಿಹಾರಕ್ಕೆ ಇವೆಲ್ಲವನ್ನು ಮಾಡುವುದಿಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್‌ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದ್ದರೂ ಮಹಿಷ ದಸರಾ ತಡೆಯಲು ಇವರು ಯಾರು? ಅಧಿಕಾರ ಕೊಟ್ಟವರು ಯಾರು? ಮಹಿಷ ಆಚರಣೆಯನ್ನು ನಿಲ್ಲಿಸಿ ಆಚರಣೆಯ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗದ ನಡೆ: ಆರೋಪ

ಭೈರಪ್ಪರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ

ದೊಡ್ಡ ಬುದ್ಧಿಜೀವಿಯಾದ ಡಾ.ಎಸ್‌.ಎಲ್‌. ಭೈರಪ್ಪ ಅವರಿಂದ ಹೆಣ್ಣು ಮಕ್ಕಳ ಬಗೆಗಿನ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಅವರ ಮಾತುಗಳು ಕೆಳವರ್ಗದ ಹೆಣ್ಣು ಮಕ್ಕಳು ಆತ್ಮಸ್ಥೈರ್ಯ ಕುಗ್ಗಿಸುವಂತವಾಗಿವೆ. ಅಂತಹ ವೇದಿಕೆಯಲ್ಲಿ ಈ ರೀತಿಯಾಗಿ ಮಾತಾಡುವ ಅವಶ್ಯಕತೆ ಇರಲಿಲ್ಲ ಎಂದು ಕಿಡಿಕಾರಿದರು.

 ನೆರೆ ಪರಿಹಾರ ತರುವಲ್ಲಿ ‘ಪ್ರತಾಪ’ ತೋರಿಸಲಿ: ಸಂಸದಗೆ ಟಾಂಗ್..

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ