'ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ'

Kannadaprabha News   | Asianet News
Published : Apr 22, 2021, 03:34 PM IST
'ಬಹುಮತದೊಂದಿಗೆ  ಕಾಂಗ್ರೆಸ್‌ ಅಧಿಕಾರಕ್ಕೆ'

ಸಾರಾಂಶ

ಕಾಂಗ್ರೆಸ್‌ ಪಕ್ಷವು ಸರಳ ಬಹುಮತದೊಂದಿಗೆ ಅ​ಧಿಕಾರವನ್ನು ಹಿಡಿಯಲಿದ್ದು, 17ಕ್ಕೂ ಅ​ಧಿಕ ಅಭ್ಯರ್ಥಿಗಳು ಗೆಲ್ಲಲಿದ್ದಾರೆ . ಅಧಿಕಾರ ನಮ್ಮದಾಗಲಿದೆ ಎಂದು ಕೈ ಮುಖಂಡರು ಹೇಳಿದರು. 

ಬೇಲೂರು (ಏ.22):  ಮಾ.27ರಂದು ನಡೆಯಲಿರುವ ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ 14ನೇ ವಾರ್ಡಿನ ದಿವ್ಯಾ ಗಿರೀಶ್‌ ಹಾಗೂ 15ನೇ ವಾರ್ಡಿನ ಉಷಾ ಸತೀಶ್‌ ಪರವಾಗಿ ಪುರಸಭೆ ಮಾಜಿ ಸದಸ್ಯ ಬಿ ಎಲ್‌ ಧರ್ಮೇಗೌಡ ಮತಯಾಚನೆ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ಸರಳ ಬಹುಮತದೊಂದಿಗೆ ಅ​ಧಿಕಾರವನ್ನು ಹಿಡಿಯಲಿದ್ದು, 17ಕ್ಕೂ ಅ​ಧಿಕ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲಿದ್ದಾರೆ.

ದಳಕ್ಕೆ ಅಧಿಕಾರದ ಚುಕ್ಕಾಣಿ : ಪ್ರಜ್ವಲ್ ರೇವಣ್ಣ ಭರವಸೆ

ಪಟ್ಟಣದ ಮೂಲಭೂತ ಸೌಕರ್ಯಗಳಾದ ವಿದ್ಯುತ್‌, ನೀರು, ಚರಂಡಿ ಮುಂತಾದ ಸಮಸ್ಯೆಗಳನ್ನು ಈಡೇರಿಸುವುದೇ ಕಾಂಗ್ರೆಸ್‌ ಪಕ್ಷದ ಧ್ಯೇಯ ಉದ್ದೇಶ ಎಂದರು.

ಪುರಸಭೆ ಮಾಜಿ ಸದಸ್ಯ ಸತೀಶ್‌, ಮಾಜಿ ನಾಮಿನಿ ಸದಸ್ಯ ದೇವರಾಜ್‌,ಗಿರೀಶ್‌, ಸುಲೋಚನ,ವೆಂಕಟೇಶ್‌, ಕೃಷ್ಣಮೂರ್ತಿ, ಬಾಬು ಇದ್ದರು.
 

PREV
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ