‘ಕಾಂಗ್ರೆಸ್ 150 ಸ್ಥಾನ ಗೆಲ್ಲೋದು ಖಚಿತ ’

Kannadaprabha News   | Asianet News
Published : Mar 08, 2021, 09:46 AM ISTUpdated : Mar 08, 2021, 10:15 AM IST
‘ಕಾಂಗ್ರೆಸ್ 150 ಸ್ಥಾನ ಗೆಲ್ಲೋದು ಖಚಿತ ’

ಸಾರಾಂಶ

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿಯಲಾಗಿದೆ. ಈ ಮೂಲಕ ಮತ್ತೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ನಾಯಕರಿದ್ದಾರೆ. 

ಮಧುಗಿರಿ (ಮಾ.08): ಮುಖ್ಯ​ಮಂತ್ರಿ ಬಿ.ಎ​ಸ್‌. ಯಡಿ​ಯೂ​ರಪ್ಪ ಅವರು ಮುಂದಿನ ಸಲ ರಾಜ್ಯ​ದಲ್ಲಿ 150 ಸ್ಥಾನ ಗೆಲ್ಲು​ತ್ತೇವೆ ಎಂದು ಹೇಳು​ತ್ತಿ​ದ್ದಾರೆ. ಪ್ರತಿದಿನ ಜನ ಟೀವಿಯಲ್ಲಿ ಬಿಜೆಪಿ ಸಿನಿಮಾ(ಸೀ​ಡಿ​) ನೋಡು​ತ್ತಿ​ದ್ದಾರೆ, ಇಂಥ ಪರಿ​ಸ್ಥಿ​ತಿ​ಯಲ್ಲಿ ಮುಂದಿನ ಸಲ 150 ಸೀಟು ಗೆಲ್ಲೋದು ಬಿಜೆಪಿ ಅಲ್ಲ, ಕಾಂಗ್ರೆಸ್‌ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ತಿಳಿ​ಸಿ​ದ್ದಾ​ರೆ.

ನಗ​ರ​ದಲ್ಲಿ ಭಾನು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮತ್ತು ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನೂತನ ಗ್ರಾಪಂ ಸದಸ್ಯರ ಅಭಿನಂದನಾ ಸಮಾರಂಭ ಮತ್ತು ಜನಧ್ವನಿ ಯಾತ್ರೆ, ಕಾರ್ಯಕರ್ತರ ಸಮಾವೇಶದಲ್ಲಿ ಮಾ​ತ​ನಾ​ಡಿ ಕೆಲವರು ಕುರ್ಚಿಗಾಗಿ ಗೌರವ ತರುತ್ತಾರೆ. ಇನ್ನು ಕೆಲವರು ಕುರ್ಚಿಗಾಗಿ ಗೌರವ ಕಳೀತಾರೆ ಎಂದು ಮಾರ್ಮಿ​ಕ​ವಾಗಿ ನುಡಿ​ದ​ರು.

'ಸಿದ್ದು-ಡಿಕೆಶಿ ನಡುವಿನ ಬಿರುಕಿಗೆ ತೇಪೆ ಹಚ್ಚದಿದ್ದರೆ ಕಷ್ಟ' ..

ಬಿಜೆಪಿ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಆರೋ​ಪಿ​ಸಿದ ಅವ​ರು, ಜನತೆ ಇದರ ಬಿಸಿ ತಾಳಲಾರದೆ ಪರದಾಡುತ್ತಿದ್ದಾರೆ. ಇದರ ಜತೆಗೆ, ಕಳೆದ ಮೂರು ತಿಂಗಳಿನಿಂದಲೂ ಮಳೆ, ಗಾಳಿಯೆನ್ನದೆ ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆ​ಗ​ಳನ್ನು ವಿರೋ​ಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವರು ಪ್ರತಿ​ಭ​ಟನೆ ವೇಳೆ ಅಸು​ನೀ​ಗು​ತ್ತಿ​ದ್ದಾ​ರೆ. ಸ್ವಾತಂತ್ರ್ಯ ಬಂದಾ​ಗಿ​ನಿಂದಲೂ ಇಂಥ ಪ್ರತಿಭಟನೆಯನ್ನು ದೇಶ ಕಂಡೇ ಇಲ್ಲ. ಇಷ್ಟಾ​ದ​ರೂ ಪ್ರಧಾನಿ ಮೋದಿಗೆ ರೈತರ ಕಷ್ಟಕೇಳುವ ಸೌಜನ್ಯ ಇಲ್ಲ. ನಾವೇ ರೈತರ ರಕ್ಷಣೆಗೆ ಮುಂದಾಗಬೇಕಿದೆ ಎಂದರು.

PREV
click me!

Recommended Stories

ಬೆಂಗಳೂರು ರಸ್ತೆಯಲ್ಲಿ ಹೆಚ್ಚುತ್ತಿರುವ ರೋಡ್ ರೇಜ್, ಎರಡು ವಿಭಿನ್ನ ಘಟನೆ, ಎರಡು ವಿಭಿನ್ನ ಪ್ರತಿಕ್ರಿಯೆ
ಬೆಂಗಳೂರು ಮೆಟ್ರೋ ಬಾಗಿಲಲ್ಲೇ 10 ಹೊಸ ಬಿಎಂಟಿಸಿ ಬಸ್ ನಿಲ್ದಾಣ; ವಿಮಾನ ನಿಲ್ದಾಣವೂ ಮತ್ತಷ್ಟು ಹತ್ತಿರ!