'ನಾಲ್ಕೂ ಕ್ಷೇತ್ರದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು'

By Kannadaprabha News  |  First Published Mar 26, 2021, 4:40 PM IST

 ನಾಲ್ಕು ಕ್ಷೇತ್ರ​ಗಳ ಉಪ​ಚು​ನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿ​ಸ​ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಮಾಗಡಿ (ಮಾ.26):  ಪ್ರಸ್ತುತ ಸನ್ನಿವೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ನಾಲ್ಕು ಕ್ಷೇತ್ರ​ಗಳ ಉಪ​ಚು​ನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿ​ಸ​ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ತಿಪ್ಪಸಂದ್ರ ಹೋಬಳಿ ಹೆಬ್ಬಳಲು ದಾಖ್ಲೆಯ ಮುಳಕಟ್ಟಮ್ಮನಪಾಳ್ಯ ಗ್ರಾಮದಲ್ಲಿರುವ ಮುಳಕಟ್ಟಮ್ಮ ದೇವಿಯ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿ​ಗಾ​ರ​ರೊಂದಿ​ಗೆ ಮಾತನಾಡಿ, ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಘೋಷಣೆಯಾಗಿದ್ದು, ಕಾಂಗ್ರೆಸ್‌ ಪಕ್ಷದಿಂದ ಎಲ್ಲಾ ತಯಾರಿ ನಡೆಸಿದ್ದೇವೆ. ಹೈಕಮಾಂಡ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ನಾವೆಲ್ಲ ಹೋಗಿ ಪ್ರಚಾರ ನಡೆಸುತ್ತೇವೆ ಎಂದರು.

Latest Videos

undefined

ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಇನ್ನೂ ಸಹ ನಿಂತಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಜನ ಬಿಜೆಪಿ ಸರ್ಕಾ​ರಕ್ಕೆ ಶಾಪ ಹಾಕುತ್ತಿದ್ದಾರೆ. ಮತ್ತೆ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಜನ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ನನಗಿಲ್ಲ ಎಂದು ಹೇಳಿ​ದರು.

'ಮೂರರಲ್ಲಿ ಎರಡು ಕಡೆ ಕೈ ಗೆಲುವು : ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ' ...

ಕಲಾಪದಲ್ಲಿ ಸೀಡಿ ವಿಷಯವಾಗಿ ಸತ್ಯ ಹೇಳಿದರೆ ಅದು ಮುಗಿದ ಅಧ್ಯಾಯವಾಗುತ್ತಿತ್ತು. ಆಗ ಕಲಾಪದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಬಹುದು. ನಿಮ್ಮಲ್ಲಿಯೇ ತಪ್ಪು ಇಟ್ಟುಕೊಂಡು ವಿರೋಧ ಪಕ್ಷದವರನ್ನು ದೋಷಣೆ ಮಾಡುವುದರಲ್ಲಿ ಅರ್ಥವಿಲ್ಲ. ವಿರೋಧ ಪಕ್ಷ ಇರುವುದೇ ಆಡಳಿತಾರೂಢ ಸ​ರ್ಕಾ​ರ​ವನ್ನು ಸರಿ ದಾರಿಗೆ ತರುವುದಕ್ಕೆ, ಅಡಳಿತ ನಡೆಸುತ್ತಿರುವ ಪಕ್ಷ ತಪ್ಪು ಮಾಡುತ್ತಿದೆ ಎಂದು ಜನರ ಗಮನಕ್ಕೆ ತರುವುದೇ ವಿರೋಧ ಪಕ್ಷದ ಕೆಲಸ. ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದು, ಅದನ್ನೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಇರಬೇಕು ಎಂದರು.

ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ತಾವು ಕಾಂಗ್ರೆಸ್‌ ಪಕ್ಷದ ಉಸ್ತುವಾರಿಯಾಗಿದ್ದು, ಸೋನಿಯಾ ಗಾಂಧಿ, ರಾಹುಲ… ಗಾಂಧಿಯವರು ನಮ್ಮನ್ನು ಕೇರಳ ರಾಜ್ಯದ ಚುನಾವಣೆಗೆ ಉಸ್ತುವಾರಿ ಮಾಡಿದ್ದಾರೆ. 4 ದಿನ ಕೇರಳದಲ್ಲಿದ್ದು ಪ್ರಚಾರ ಮಾಡುತ್ತಿದ್ದು, ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ನಾವು ಈ ಬಾರಿ ಕೇರಳ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದ್ದೇವೆ ಎಂದು ಹೇಳಿ​ದರು.

ನಮ್ಮ ಮುತ್ತಜ್ಜ ಅವರ ಕಾಲದಿಂದಲ್ಲೂ ಮುಳಕಟ್ಟಮ್ಮ ದೇವಿಯನ್ನು ಪೂಜೆ ಮಾಡಿಕೊಂಡು ಬರುತ್ತಿದ್ದು, ನಾವು ಸಹ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸರ್ಕಾ​ರ ಹಾಗೂ ತಮ್ಮ ಅನುದಾನದಿಂದ ಇಲ್ಲಿ ಭವನವನ್ನು ನಿರ್ಮಿಸಿದ್ದು ಮದುವೆ ಸಮಾರಂಭ ಕಾರ್ಯಕ್ರಮಗಳನ್ನು ತಾಯಿಯ ಸ​ನ್ನಿ​ಧಿಯಲ್ಲಿ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ಪರ​ಮೇ​ಶ್ವರ್‌ ತಿಳಿ​ಸಿ​ದರು.

ಕನ್ನಿಕಾ ಜಿ.ಪರಮೇಶ್ವರ್‌, ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಜಿಪಂ ಪ್ರಭಾರ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ್ಯ, ಮುಮ್ಮೇನಹಳ್ಳಿ ಬಿ.ವಿ.ಜಯರಾಮ…, ಬಿಡಿಎ ಉಪವಿಭಾಗಾಧಿಕಾರಿ ಹರೀಶ್‌ ನಾಯಕ್‌, ಮಾದಿಗೊಂಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಸಿದ್ದಪ್ಪಾಜಿ, ಲಕ್ಷ್ಮೀಪತಿ, ಮೋಟಗಾನಹಳ್ಳಿ ಸೋಮಶೇಖರ್‌ ಮತ್ತಿತರರು ಹಾಜ​ರಿದ್ದರು.

ಬಿಜೆಪಿಯವರು ಒಳ್ಳೆಯ ಕೆಲಸ ಮಾಡಲು ಒಂದು ಅವಕಾಶ ಸಿಕ್ಕಿದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕು. ನಾವು ಸಹ 5 ವರ್ಷ ಆಡಳಿತ ನಡೆಸಿದ್ದು, ಜನರಿಗೆ ತೃಪ್ತಿಯಾಗದ ಕಾರಣ ನಮ್ಮನ್ನು ತೆಗೆದರು. ಬಿಜೆಪಿ ಪಕ್ಷದವರು ಅವರಿಗೆ ಅವರೇ ಅವಕಾಶ ಮಾಡಿಕೊಂಡಿದ್ದಾರೆ. 12 ಶಾಸಕರ ಮನವೊಲಿಸಿ, ದುಡ್ಡಿನ ಅಮಿಷ ತೋರಿಸಿದ್ದಾರೆ. ಅಧಿಕಾರ ಹಿಡಿದಿದ್ದಾರೆ.

ಜಿ.ಪರಮೇಶ್ವರ್‌, ಮಾಜಿ ಉಪ ಮುಖ್ಯಮಂತ್ರಿ

click me!