ಚಿಕ್ಕಬಳ್ಳಾಪುರ : ರೈತರಿಂದ ಲಕ್ಷಾಂತರ ಕ್ವಿಂಟಲ್‌ ರಾಗಿ ಖರೀದಿ

By Kannadaprabha NewsFirst Published Mar 26, 2021, 3:18 PM IST
Highlights

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ  1,57,779.94 ಕ್ವಿಂಟಲ್‌ ರಾಗಿ ಮಾರಾಟ ಮಾಡಲು ನೊಂದಣಿ ಮಾಡಿಕೊಂಡಿದ್ದು, ಈವರೆಗೂ 5742 ರೈತರು 1,10,244.17 ಕ್ವಿಂಟಲ್‌ ರಾಗಿಯನ್ನು ಮಾರಾಟ ಮಾಡಿದ್ದಾರೆ

 ಚಿಕ್ಕಬಳ್ಳಾಪುರ (ಮಾ.26):  ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಅಥವ ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು ಸರ್ಕಾರ ರಾಗಿ ಖರೀದಿ ಗುರಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಂದ ನೊಂದಣಿ ಹಾಗೂ ಸ್ಪೀಕೃತಿಯನ್ನು ಮಾ.31ರ ವರೆಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಪ್ರಸ್ತುತ ಭತ್ತದ ನಿರೀಕ್ಷಿತ ಆವಕದಂತೆ ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲೂಕುಗಳಲ್ಲಿ ತಲಾ ಒಂದು ಭತ್ತ ಖರೀದಿ ಕೇಂದ್ರಗಳನ್ನು ತೆರಯಲಾಗಿದ್ದು ರಾಗಿಯ ನಿರೀಕ್ಷಿತ ಆವಕದಂತೆ ಗುಡಿಬಂಡೆ ತಾಲ್ಲೂಕು ಕೇಂದ್ರವನ್ನು ಹೊರತುಪಡಿಸಿ ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ.

7702 ರೈತರಿಂದ ರಾಗಿ ಮಾರಾಟ:  ಜಿಲ್ಲೆಯ ಸದರಿ ಐದು ಖರೀದಿ ಕೇಂದ್ರಗಳಲ್ಲಿ ಈವರೆಗೆ ಒಟ್ಟು 7702 ರೈತರು 1,57,779.94 ಕ್ವಿಂಟಲ್‌ ರಾಗಿ ಮಾರಾಟ ಮಾಡಲು ನೊಂದಣಿ ಮಾಡಿಕೊಂಡಿದ್ದು, ಈವರೆಗೂ 5742 ರೈತರು 1,10,244.17 ಕ್ವಿಂಟಲ್‌ ರಾಗಿಯನ್ನು ಮಾರಾಟ ಮಾಡಿರುತ್ತಾರೆ. ಈ ಪೈಕಿ 1770 ರೈತರ ಬ್ಯಾಂಕ್‌ ಖಾತೆಗೆ ಪ್ರತಿ ಕ್ವಿಂಟಲ್‌ ರಾಗಿಗೆ ರೂ.3339-00 ರಂತೆ ಒಟ್ಟು ರೂ. 11,47,51,041-00 ಗಳನ್ನು ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ಪಾವತಿಸಲಾಗಿದೆ.

ರೈತರಿಗೆ ಕಹಿಯಾದ ಹುಣಸೆ : ಭಾರೀ ದರ ಕುಸಿತ .

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲ ಯೋಜನೆಯಡಿ ರಾಗಿ ಮಾರಾಟ ಮಾಡುವ ರೈತರಿಗೆ ಪ್ರತಿ ಕ್ವಿಂಟಲ್‌ಗೆ ರೂ. 3295 ರು, Ü ಖರೀದಿ ದರ ಮತ್ತು 50 ಕೆ.ಜಿ ಸಾಮರ್ಥ್ಯದ ಖಾಲಿ ಗೋಣಿ ಚೀಲ ಒಂದಕ್ಕೆ 22ರು ರಂತೆ ಕ್ವಿಂಟಾಲ್‌ಗೆ ಎರಡು ಚೀಲಗಳಿಗೆ ರೂ. 44 ರು, ಸೇರಿ ಒಟ್ಟು ಪ್ರತಿ ಕ್ವಿಂಟಾಲ್‌ ರಾಗಿಗೆ 3339 ರು,ಗಳನ್ನು ರೈತರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.

ರೈತರಿಗೆ ಯಾವುದೇ ಶುಲ್ಕ ಇಲ್ಲ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರು ತಾವು ಬೆಳೆದಿರುವ ಭತ್ತ ಅಥವ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವಂತಿಲ್ಲ. ಅಲ್ಲದೇ ಮಾರಾಟ ಮಾಡುವ 50 ಕೆ.ಜಿ ರಾಗಿಯ ಜೊತೆಗೆ ಖಾಲಿ ಗೋಣಿ ಚೀಲದ ತೂಕ 600 ಗ್ರಾಂ. ರಾಗಿಯನ್ನು ಮಾತ್ರ ಹೆಚ್ಚುವರಿಯಾಗಿ ನೀಡತಕ್ಕದ್ದು.

ಸರ್ಕಾರದಿಂದ ಪ್ರಸ್ತುತ ಜಿಲ್ಲೆಗೆ 5,50,000 ಕ್ವಿಂಟಾಲ್‌ ರಾಗಿ ಖರೀದಿ ಗುರಿಯನ್ನು ನಿಗದಿಪಡಿಸಿರುತ್ತದೆ. ಒಂದು ಎಕರೆಗೆ 10 ಕ್ವಿಂಟಾಲ್‌ ಮಿತಿಯನ್ನು ಮುಂದುವರೆಸಿದ್ದು, ರೈತರಿಂದ ಒಬ್ಬ ರೈತನಿಂದ ಖರೀದಿ ಮಾಡಬಹುದಾದ ರಾಗಿಯ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ. ಪ್ರಯುಕ್ತ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಗಿಯನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ. ಅಲ್ಲದೇ ನೊಂದಣಿ ಮತ್ತು ಸ್ವೀಕೃತಿಯನ್ನು ಮಾ.31ರ ರವರೆಗೆ ವಿಸ್ತರಿಸಲಾಗಿದೆ.

ಪಿ.ಸವಿತಾ, ಉಪ ನಿರ್ದೇಶಕರು, ಆಹಾರ ಇಲಾಖೆ.

click me!