ಸಾಮೂ​ಹಿಕ ನಾಯ​ಕ​ತ್ವ​ದಲ್ಲಿ ಗೆಲು​ವಿಗೆ ಶ್ರಮಿಸಿ : ಕಾಂಗ್ರೆಸ್‌ ಗೆಲುವೇ ಗುರಿ​ಯಾ​ಗಿ​ರ​ಲಿ

By Kannadaprabha News  |  First Published Dec 26, 2022, 6:22 AM IST

ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಪರ​ವಾದ ವಾತಾ​ವ​ರಣ ಇದ್ದು, ಪಕ್ಷದ ಸಂಭವ​ನೀಯ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಅವರ ಸಮಾಜ ಸೇವೆ​ಯನ್ನು ಜನರು ಮೆಚ್ಚಿ​ಕೊಂಡಿ​ದ್ದಾ​ರೆ. ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಸಾಮೂ​ಹಿಕ ನಾಯ​ಕ​ತ್ವ​ದಲ್ಲಿ ಎದು​ರಿಸಿ ಕಾಂಗ್ರೆಸ್‌ ಗೆಲು​ವಿಗೆ ಶ್ರಮಿ​ಸಲು ಪರಿ​ಶಿಷ್ಟಜಾತಿ ​ಮ​ತ್ತು ಪರಿ​ಶಿಷ್ಟಪಂಗ​ಡ​ಗಳ ಮುಖಂಡರ ಸಮಾ​ಲೋ​ಚನಾ ಸಭೆ​ಯಲ್ಲಿ ಒಮ್ಮ​ತದ ತೀರ್ಮಾನ ಕೈಗೊ​ಳ್ಳ​ಲಾ​ಯಿ​ತು.


  ರಾಮನಗರ :  ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಪರ​ವಾದ ವಾತಾ​ವ​ರಣ ಇದ್ದು, ಪಕ್ಷದ ಸಂಭವ​ನೀಯ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಅವರ ಸಮಾಜ ಸೇವೆ​ಯನ್ನು ಜನರು ಮೆಚ್ಚಿ​ಕೊಂಡಿ​ದ್ದಾ​ರೆ. ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಸಾಮೂ​ಹಿಕ ನಾಯ​ಕ​ತ್ವ​ದಲ್ಲಿ ಎದು​ರಿಸಿ ಕಾಂಗ್ರೆಸ್‌ ಗೆಲು​ವಿಗೆ ಶ್ರಮಿ​ಸಲು ಪರಿ​ಶಿಷ್ಟಜಾತಿ ​ಮ​ತ್ತು ಪರಿ​ಶಿಷ್ಟಪಂಗ​ಡ​ಗಳ ಮುಖಂಡರ ಸಮಾ​ಲೋ​ಚನಾ ಸಭೆ​ಯಲ್ಲಿ ಒಮ್ಮ​ತದ ತೀರ್ಮಾನ ಕೈಗೊ​ಳ್ಳ​ಲಾ​ಯಿ​ತು.

ನಗ​ರದ ಪ್ರವಾಸಿ ಮಂದಿ​ರ​ದಲ್ಲಿ ಭಾನು​ವಾರ ರಾಮ​ನ​ಗರ ಟೌನ್‌, ಕಸಬಾ, ಕೈಲಾಂಚ ಹೋಬ​ಳಿಯ(Congress)  ಪಕ್ಷದ ಪರಿ​ಶಿಷ್ಟಜಾತಿ ಮತ್ತು ಪರಿ​ಶಿಷ್ಟಪಂಗ​ಡ​ಗಳ ಮುಖಂಡರ ಸಮಾ​ಲೋ​ಚನಾ ಸಭೆ​ಯಲ್ಲಿ ಸಮು​ದಾ​ಯದ ಮುಖಂಡರು ಭಿನ್ನ​ಮತ, ವೈಮ​ನ​ಸ್ಸನ್ನು ಮರೆತು ಕಾಂಗ್ರೆಸ್‌ (Candidate)  ಇಕ್ಬಾಲ್‌ ಹುಸೇನ್‌ ಗೆಲು​ವಿಗೆ ಒಗ್ಗೂಡಿ ಕೆಲಸ ಮಾಡುವ ನಿರ್ಧಾರವನ್ನು ಪ್ರಕ​ಟಿ​ಸಿ​ದ​ರು.

Tap to resize

Latest Videos

ಪ್ರತಿನಿತ್ಯ ಸಮುದಾಯದ ಜನರ ಕಷ್ಟಸುಖಗಳಲ್ಲಿ ನಮ್ಮ ಜೊತೆಯಿರುವ ಇಕ್ಬಾಲ್‌ ಹುಸೇನ್‌ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮೆಲ್ಲರ ಗುರಿಯಾಗಿದೆ. ಆದರೆ, ಒಬ್ಬ ವ್ಯಕ್ತಿಯ ಗುಂಪು​ಗಾ​ರಿ​ಕೆ​ಯಿಂದ ಪಕ್ಷಕ್ಕೆ ಧಕ್ಕೆಯಾಗು​ತ್ತಿದ್ದು, ಅವ​ರಿಗೆ ತಿಳಿವ​ಳಿಕೆ ಹೇಳ​ಬೇಕು. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ನಮಗೆ ದೊಡ್ಡದಾಗಿದ್ದು, ಸಾಮೂಹಿಕ ನಾಯಕತ್ವಕ್ಕೆ ಮನ್ನಣೆ ನೀಡುವಂತೆ ಕಾಂಗ್ರೆಸ್‌ ವರಿಷ್ಠರಿಗೆ ಸಂದೇಶ ರವಾನಿಸುವುದು ಸಮಾಲೋಚನಾ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಮುಖಂಡರು ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿದರು.

ಜನರ ಸೇವೆಗೆ ಅವ​ಕಾಶ ಸಿಗು​ವುದು ಪುಣ್ಯ:

ಸಭೆ​ಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಮಾತ​ನಾಡಿ, ನನ್ನನ್ನು ಬೆಳೆಸಿದವರು ಕ್ಷೇತ್ರದ ಜನರು. ನನಗೆ ನೀವೇ ತಂದೆ, ತಾಯಿ, ಬಂಧು ಬಳಗ ಎಲ್ಲವೂ ಆಗಿ​ದ್ದೀರಿ. ನಿಮ್ಮೆಲ್ಲರ ಸೇವೆ ಮಾಡಲು ಹಾಗೂ ಕ್ಷೇತ್ರ​ವನ್ನು ಅಭಿವೃದ್ಧಿ ಮಾಡಲು ಅವ​ಕಾಶ ನೀಡಿ. ನಿಮ್ಮೆ​ಲ್ಲ​ರನ್ನು ಒಟ್ಟಾಗಿ ಕರೆ​ದು​ಕೊಂಡು ಹೋಗುವ ಜವಾ​ಬ್ದಾರಿ ನನ್ನ ಮೇಲಿದೆ ಎಂದು ಹೇಳಿ​ದರು.

ಕ್ಷೇತ್ರ ಜನರ ಸೇವೆಗೆ ಅವ​ಕಾಶ ಸಿಗು​ವುದು ಪುಣ್ಯ. ಆದ್ದ​ರಿಂದ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಪರವಾಗಿ ತಾವೆಲ್ಲರೂ ನಿಂತು ತಮ್ಮದೇ ಆದ ಶಕ್ತಿಯನ್ನು ತುಂಬಿದರೆ ಮಾತ್ರ ನನಗೆ ಹೆಚ್ಚು ಬಲ ಸಿಗಲಿದೆ. ಏನಾ​ದರು ಲೋಪ​ವಾ​ಗಿ​ದ್ದರೆ ಕ್ಷಮೆ​ಯಾ​ಚಿ​ಸು​ತ್ತೇನೆ. ಎಲ್ಲರೂ ಒಗ್ಗ​ಟ್ಟಾಗಿ ಪಕ್ಷ ಸಂಘ​ಟ​ನೆ​ಯಲ್ಲಿ ತೊಡ​ಗು​ವಂತೆ ಮನವಿ ಮಾಡಿ​ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌, ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿ​ಷತ್‌ ಸದಸ್ಯ​ರಾದ ಎಸ್‌.ರ​ವಿ, ​ಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಎಲ್ಲ ಜನಾಂಗದ ಸಭೆಗಳನ್ನು ಕರೆದು ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗುವುದು. ನಗರ ಪ್ರದೇಶದಲ್ಲಿ ಆಯಾಯ ವಾರ್ಡುಗಳ ಮತ್ತು ಗ್ರಾಮೀಣ ಭಾಗದಲ್ಲಿ ಬೂತ್‌ ಮಟ್ಟದಲ್ಲಿನ ಸ್ಥಳೀಯ ಮುಖಂಡರಿಗೆ ಚುನಾವಣೆ ಜವಾಬ್ದಾರಿ ವಹಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಇಕ್ಬಾಲ್‌ ತಿಳಿ​ಸಿ​ದ​ರು.

ಕಾಂಗ್ರೆಸ್‌ ಗೆಲುವೇ ಗುರಿ​ಯಾ​ಗಿ​ರ​ಲಿ:

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್‌ ಜಿಯಾವುಲ್ಲಾ ಮಾತ​ನಾಡಿ, ಹಿಂದಿನಿಂದಲೂ ಪರಿಶಿಷ್ಟಜಾತಿ/ಪಂಗಡಗಳ ಜನರು ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರುವುದು ಬೇಡ. ಎಲ್ಲರನ್ನು ಒಗ್ಗಟ್ಟಿನಿಂದ ಕರೆದೊಯ್ಯುವ ಕೆಲಸ ಮಾಡುತ್ತೇವೆ. ನಿಮ್ಮ ಗುರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸುವುದಾಗಿರಲಿ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಸದಸ್ಯ ಕೆ.ರಮೇಶ್‌, ರಾ​ಮ​ನ​ಗರ ನಗ​ರಾ​ಭಿ​ವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್‌ಆರ್‌ ವೆಂಕಟೇಶ್‌ ಮಾತನಾಡಿದರು. ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಬಿ.ಚೇತನ್‌ ಕುಮಾರ್‌, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನದೀಮ…, ಕೆಪಿ​ಸಿಸಿ ಎಸ್ಸಿ ವಿಭಾಗದ ಸದಸ್ಯ ಕೊಂಕಾಣಿದೊಡ್ಡಿ ಶಿವಲಿಂಗಯ್ಯ, ಮುಖಂಡರಾದ ನರಸಿಂಹಯ್ಯ, ಅಂಜ​ನಾ​ಪುರ ವಾಸುನಾಯ್ಕ, ಪಾಪಣ್ಣ, ಶಂಭೂಗೌಡ, ಕೊತ್ತಿಪುರ ಗೋವಿಂದರಾಜು, ಕುಂಬಾಪುರ ಕಾಲೋ​ನಿ ಎಸ್‌.ಕೃಷ್ಣಪ್ಪ, ಗಿರಿಯಪ್ಪ, ರವಿಕುಮಾರ್‌, ಕುಮಾರನಾಯ್ಕ, ಪಾರ್ಥ, ಪದ್ಮನಾಭ, ಕುಮಾರ್‌ ಮತ್ತಿ​ತ​ರರು ಹಾಜ​ರಿ​ದ್ದರು.

ಮೂಲ ಕಾಂಗ್ರೆಸ್ಸಿಗರ ಸಾಮೂಹಿಕ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಬೇಕು. ಏಕವ್ಯಕ್ತಿ ನಾಯಕತ್ವ ಮತ್ತು ತೀರ್ಮಾನವನ್ನು ನಾವು ಒಪ್ಪುವುದಿಲ್ಲ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಮನವಿ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್‌, ಧ್ರುವನಾರಾಯಣ್‌ ಸೇರಿದಂತೆ ಪರಿಶಿಷ್ಟಜಾತಿ ಮುಖಂಡರನ್ನು ಆ​ಹ್ವಾ​ನಿಸಿ ರಾಮನಗರದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗುವುದು.

-ನರಸಿಂಹಯ್ಯ, ಮಾಜಿ ನಿರ್ದೇ​ಶ​ಕರು, ಅರಣ್ಯ ಅಭಿ​ವೃದ್ಧಿ ನಿಗಮ

ಜಿಲ್ಲಾ ಕಾಂಗ್ರೆಸ್‌ ಸಮಿ​ತಿ​ಯಲ್ಲಿ ಎಸ್ಸಿ ಘಟ​ಕ​ದಲ್ಲಿ ಪದಾ​ಧಿ​ಕಾ​ರಿ​ಗ​ಳನ್ನು ನೇಮಕ ಮಾಡು​ವಾಗ ಪಕ್ಷ​ದ​ಲ್ಲಿ​ರುವ ಸಮು​ದಾ​ಯದ ಮುಖಂಡರ ಗಮ​ನಕ್ಕೂ ತಂದಿಲ್ಲ. ಕೆಲ​ವರ ಅಣ​ತಿ​ಯಂತೆ ನೇಮಕ ಮಾಡಿ​ರು​ವುದು ಸರಿ​ಯಲ್ಲ. ಮುಂದಿನ ದಿನ​ಗ​ಳ​ಲ್ಲಿ​ ಎಲ್ಲ ಭಾಗ​ಗ​ಳ​ಲ್ಲಿಯೂ ಪಕ್ಷದ ಮೂಲ ಮುಖಂಡ​ರಿಗೆ ಪ್ರಾಧಾ​ನ್ಯತೆ ನೀಡ​ಬೇಕು. ಎಸ್ಸಿ ವಿಭಾ​ಗದ ಹಾಲಿ ಜಿಲ್ಲಾ​ಧ್ಯ​ಕ್ಷರು ಎಲ್ಲ​ರನ್ನು ಕಡೆ​ಗ​ಣಿಸಿ ಸಭೆ ಸಮಾ​ರಂಭ ಆಯೋ​ಜಿ​ಸು​ವುದು ಸರಿ​ಯಲ್ಲ.

-ಅಂಜ​ನಾ​ಪು​ರ ವಾಸು ನಾಯ್ಕ, ಕಾಂಗ್ರೆಸ್‌ ಮುಖಂಡ​ರು,​ ರಾ​ಮ​ನ​ಗರ

click me!