ಐದು ವರ್ಷಗಳ ಕಾಲ ಜನಪರ ಅಭಿವೃದ್ಧಿ ಕೆಲಸ ಕಾರ‍್ಯಗಳಿಗಾಗಿ ಜೀತದಾಳಾಗಿ ದುಡಿದ್ದೇನೆ. 2023ರ ಸಾರ್ವತ್ರಿಕ ಚುನಾವಣೆ ವೇಳೆ ಕೂಲಿ ಕೇಳುತ್ತೇನೆ. ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಚುನಾವಣೆ ಗಿಮಿಕ ನಡೆಸಿದ್ದಾರೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು
ದೇವದುರ್ಗ : ಐದು ವರ್ಷಗಳ ಕಾಲ ಜನಪರ ಅಭಿವೃದ್ಧಿ ಕೆಲಸ ಕಾರ‍್ಯಗಳಿಗಾಗಿ ಜೀತದಾಳಾಗಿ ದುಡಿದ್ದೇನೆ. 2023ರ ಸಾರ್ವತ್ರಿಕ ಚುನಾವಣೆ ವೇಳೆ ಕೂಲಿ ಕೇಳುತ್ತೇನೆ. ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಚುನಾವಣೆ ಗಿಮಿಕ ನಡೆಸಿದ್ದಾರೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ತಾಲೂಕಿನ ರಾಮದುರ್ಗ ಕ್ರಾಸ್‌ನಲ್ಲಿ ಭಾರತೀಯ (BJP) ದೇವದುರ್ಗ ಮಂಡಲ ವತಿಯಿಂದ ಆಯೋಜಿಸಿದ ತಾಲೂಕುಮಟ್ಟದ ಕಾರ‍್ಯಕರ್ತ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಐದುವರೆ ಸಾವಿರ ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಅಡಿಗಲ್ಲು ಉದ್ಘಾಟನೆ ಕಾರ‍್ಯಕ್ರಮಕ್ಕೆ ಪ್ರಧಾನಿ ಮಂತ್ರಿ ನೆರೇಂದ್ರ ಮೋದಿಯನ್ನು ಆಹ್ವಾನಿಸಲು ಗೆ (Delhi) ನಿಯೋಗ ಕರೆದಯ್ಯೂಲಾಗುತ್ತಿದೆ. ಕೇಂದ್ರದ ನಾಯಕರು ಕಾರ‍್ಯಕ್ರಮಕ್ಕೆ ಸಾಕ್ಷಿಯಗಲಿದ್ದಾರೆ. ಕೆ.ಶಿವನಗೌಡ ನಾಯಕಗೆ ಶಕ್ತಿ ತುಂಬಿದ್ದೇ ಮತದಾರರು. ಆದರೀಗ ರಾಜಕಾರಣ ಕಲುಷಿತಗೊಂಡಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಕೃಷ್ಣಾ ನದಿಯಿಂದ 40 ಕೆರೆಗಳಿಗೆ ನೀರು ತುಂಬಿಸಲು 403 ಕೋಟಿ ರು. ಅನುದಾನ ಮಂಜೂರಾಗಿದೆ. 7 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರು ಮಾಡಿಸಿದ್ದೇನೆ. ಅಭಿವೃದ್ಧಿ ವಿಚಾರಕ್ಕೆ ಬಂದರೇ ತಾಲೂಕಿನಲ್ಲಿ ಒಂದು ಹಳ್ಳಿ ಬಿಟ್ಟಿಲ್ಲ ಎಂದರು.
undefined
ಕಾರ‍್ಯಕರ್ತ 222 ಬೂತ್‌ಗಳಲ್ಲಿ ಲೀಡ್ ಮಾಡಿ ತೊರಿಸಬೇಕು. 1.50 ಲಕ್ಷ ಮತಗಳಿಂದ ಮತ್ತೇ ಗೆದ್ದು ಬರುತ್ತೇನೆ ಎಂದು ಭರವಸೆ ನುಡಿದರು. ಶಾಂತಿ ರಾಜಕಾರಣ ಮಾಡಲು ಬಂದಿದ್ದೇವೆ. ಪಕ್ಷದ ಕಾರ‍್ಯಕರ್ತರು ನರಿ ಮರಿಗಳಲ್ಲ, ಹುಲಿ ಮರಿಗಳು ಇದ್ದಂತೆ, ವಿರೋಧ ಪಕ್ಷಗಳು ಎಚ್ಚರಕೆಯಿಂದ ಮಾತಾಡಿ ಎಂದು ಗುಡಗಿದರು. ಕಾರ‍್ಯಕ್ರಮ ಉದ್ಘಾಟಿಸಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯಾದವ ಮಾತನಾಡಿದರು.
ಮಂಡಲ ಅಧ್ಯಕ್ಷ ಜಂಬಣ್ಣ ನೀಲಗಲ್, ಬಸವರಾಜ ಗಾಣಧಾಳ, ಚಂದಪ್ಪ ಬುದ್ದಿನ್ನಿ, ಕೆಎಂ ಪಾಟೀಲ್ ಸೇರಿದಂತೆ ಹಲವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಪ್ರಕಾಶ ಪಾಟೀಲ್, ರಾಮನಗೌಡ ಕರಡಿಗುಡ್ಡ, ಶರಣಗೌಡ ಗಣೇಕಲ್, ಎಚ್.ಎ.ನಾಡಗೌಡ, ವೀರಣ್ಣ ಬಳೆ, ಸತ್ಯ ನಾರಾಯಣ ನಾಯಕ, ಅಮರೇಶ ಪಾಟೀಲ್, ಶರಣಪ್ಪ ಕೊರವಿ, ದೇವಿಂದ್ರಪ್ಪ ಸ್ವಾಸಿಗೇರಾ, ಬಸವಲಿಂಗಯ್ಯ ತಾತಾ, ಹನುಮಂತ ಕಟ್ಟಿಮನಿ, ಡಾ.ಬಸವರಾಜರೆಡ್ಡಿ ಸೇರಿದಂತೆ ಇತರರು ಇದ್ದರು.
ಸಿದ್ದರಾಮಯ್ಯಗಾಗಿ ಹರಕೆ
ಬಾಗಲಕೋಟೆ (ಡಿ.23): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ತ ಕ್ಷೇತ್ರಗಳ ಹುಡುಕಾಟದಲ್ಲಿ ಬ್ಯೂಸಿಯಾಗಿದ್ದರೆ ಇತ್ತ ಸ್ವಕ್ಷೇತ್ರ ಬಾದಾಮಿಯಲ್ಲಿ ಅವರ ಅಭಿಮಾನಿಗಳು ಮಾತ್ರ ಸಿದ್ದರಾಮಯ್ಯನವರನ್ನ ಮತ್ತೆ ಬಾದಾಮಿಗೆ ಕರೆತರುವ ಪ್ರಯತ್ನವನ್ನ ಮುಂದುರೆಸುತ್ತಲೇ ಇದ್ದಾರೆ. ಇವುಗಳ ಮಧ್ಯೆ ಸಿದ್ದು ಅಭಿಮಾನಿಯೊಬ್ಬರು ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಸಿದ್ದು ಮತ್ತೇ ಬಾದಾಮಿಯಿಂದ ಸ್ಪರ್ಧಿಸಿ ಸಿಎಂ ಆಗಲೆಂದು ಹರಕೆ ಹೊತ್ತರೆ ಮತ್ತೊಂದಡೆ ಅಭಿಮಾನಿಗಳೆಲ್ಲಾ ಸಿದ್ದುಗಾಗಿ ಹೆಲಿಕಾಪ್ಟರ್ ಖರೀದಿ ಸಂಕಲ್ಪ ತೊಟ್ಟಿದ್ದಾರೆ.
ಒಂದೆಡೆ ಸಿದ್ದರಾಮಯ್ಯನವರು ಮತ್ತೇ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿರೋ ಅಭಿಮಾನಿಗಳು, ಮತ್ತೊಂದೆಡೆ ಸಿದ್ದುಗಾಗಿ ಅಯ್ಯಪ್ಪಸ್ವಾಮಿಯಲ್ಲಿ ಹರಕೆ ಹೊತ್ತ ಅಭಿಮಾನಿ, ಇವುಗಳ ಮಧ್ಯೆ ಸಿದ್ದರಾಮಯ್ಯನವರಿಗಾಗಿ ಹೆಲಿಕಾಪ್ಟರ್ ಖರೀದಿ ಸಂಕಲ್ಪ ತೊಟ್ಟ ಕ್ಷೇತ್ರದ ಜನ. ಅಂದಹಾಗೆ ಇಂತಹವೊಂದು ಸಂದರ್ಭಕ್ಕೆ ಸಾಕ್ಷಿಯಾಗಿರೋದು ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಮತಕ್ಷೇತ್ರ. ಕಳೆದ ಬಾರಿ 2018ರಲ್ಲಿ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಬಾದಾಮಿಯಿಂದ ಬಂದು ಸ್ಪರ್ಧಿಸಿ ರಾಜಕೀಯ ಪುನರಜನ್ಮ ಪಡೆದುಕೊಂಡು ಜನತೆಗೆ ಮಾತುಕೊಟ್ಟಂತೆ ಕೋಟ್ಯಂತರ ಅನುದಾನ ತಂದು ಅಭಿವೃದ್ದಿಯನ್ನೂ ಸಹ ಮಾಡಿದ್ರು.
ಆದರೆ ಈ ಬಾರಿ ಕ್ಷೇತ್ರ ದೂರವಾಗುತ್ತೇ ಅನ್ನೋ ನೆಪದಲ್ಲಿ ರಾಜ್ಯದಲ್ಲಿ ಬೇರೆ ಬೇರೆ ಕಡೆಗೆ ಕ್ಷೇತ್ರದ ಹುಡುಕಾಟದಲ್ಲಿದ್ದು, ಹೀಗಾಗಿ ಸ್ವಕ್ಷೇತ್ರ ಬಾದಾಮಿಯ ಯೂತ್ ಕಾಂಗ್ರೆಸ್ ಉಪಾದ್ಯಕ್ಷ, ಸಿದ್ದು ಅವರ ಕಟ್ಟಾ ಅಭಿಮಾನಿ ಹನಮಂತ ಖಾನಗೌಡರ ಇದೀಗ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಸಿದ್ದರಾಮಯ್ಯನವರು ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಮತ್ತು ಇಲ್ಲಿಂದಲೇ ಗೆದ್ದು ರಾಜ್ಯದ ಸಿಎಂ ಆಗುವಂತಾಗಲಿ ಎಂದು ಅಯ್ಯಪ್ಪ ಸ್ವಾಮಿಯಲ್ಲಿ ಹರಕೆ ಹೊತ್ತಿದ್ದಾನೆ.
ಮಾಜಿ ಸಿಎಂ ಸಿದ್ದರಾಮಯ್ಯನವರಿಗಾಗಿ ಹೆಲಿಕಾಪ್ಟರ್ ಸಂಕಲ್ಪ:
ಇನ್ನು ಅಭಿಮಾನಿಯೊಬ್ಬ ಹರಕೆ ಹೊತ್ತಿದ್ದು ಒಂದು ಭಾಗವಾದರೆ ಮತ್ತೊಂದೆಡೆ ಸಿದ್ದರಾಮಯ್ಯನವರು ಬಾದಾಮಿ ಮತಕ್ಷೇತ್ರ ತಮಗೆ ದೂರವಾಗುತ್ತೇ, ಜನರಿಗೆ ಸ್ಪಂದಿಸೋಕೆ ಕಷ್ಟವಾಗುತ್ತೇ ಅನ್ನೋ ಕಾರಣಕ್ಕೆ ಕ್ಷೇತ್ರ ಬಿಡ್ತಿದ್ದಾರೆ ಅನ್ನೋದು ಗೊತ್ತಾಗಿ ಇದೀಗ ಸಿದ್ದು ಅಭಿಮಾನಿಗಳೆಲ್ಲಾ ಸಿದ್ದರಾಮಯ್ಯನವರಿಗಾಗಿ ಒಂದು ಹೆಲಿಕಾಪ್ಟರ್ ಖರೀದಿಸುವ ಸಂಕಲ್ಪ ಸಹ ಮಾಡಿದ್ದಾರೆ.