Kolar : 6 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಬೇಕು

By Kannadaprabha NewsFirst Published Jan 19, 2023, 5:14 AM IST
Highlights

ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರಗಳ ದುರಾಡಳಿತ ಜನತೆಗೆ ತಿಳಿಸಲು ರಾಜ್ಯಾದ್ಯಂತ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಪ್ರಜಾಧ್ವನಿ ಬಸ್‌ ಯಾತ್ರೆ ಹಮ್ಮಿಕೊಂಡಿದ್ದು ಜ.23ರಂದು ಕೋಲಾರ ಜಿಲ್ಲೆಗೆ ಆಗಮಿಸಲಿದ್ದು ಯಶಸ್ವಿಗೊಳಿಸುವಂತೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್‌.ಸೀತಾರಾಮ್‌ ತಿಳಿಸಿದರು.

 ಕೋಲಾರ :  ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರಗಳ ದುರಾಡಳಿತ ಜನತೆಗೆ ತಿಳಿಸಲು ರಾಜ್ಯಾದ್ಯಂತ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಪ್ರಜಾಧ್ವನಿ ಬಸ್‌ ಯಾತ್ರೆ ಹಮ್ಮಿಕೊಂಡಿದ್ದು ಜ.23ರಂದು ಕೋಲಾರ ಜಿಲ್ಲೆಗೆ ಆಗಮಿಸಲಿದ್ದು ಯಶಸ್ವಿಗೊಳಿಸುವಂತೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್‌.ಸೀತಾರಾಮ್‌ ತಿಳಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದ ಹಲವು ಕಡೆ ಈಗಾಗಲೇ ಪ್ರಜಾಧ್ವನಿ ಬಸ್‌ ಯಾತ್ರೆ ನಡೆಸಲಾಗಿದೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗೆಯೇ ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲಾ 6 ಕ್ಷೇತ್ರಗಳಲ್ಲೂ ಮತ್ತೊಮ್ಮೆ ಕಾಂಗ್ರೆಸ್‌ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಎಂಎಲ್‌ಸಿ ನಸೀರ್‌ ಅಹಮದ್‌ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ವರ್ಧೆ ವಿಚಾರವಾಗಿ ವಿರೋಧ ಪಕ್ಷದವರು ಮಾತಾಡಿಕೊಳ್ಳಲಿ ನಮ್ಮ ಕೆಲಸ ಕಾಂಗ್ರೆಸ್‌ ಪಕ್ಷದ ಸಂಘಟನೆಯಾಗಬೇಕು, ಬಿಜೆಪಿ ಪಕ್ಷದ ಅಲ್ಪಸಂಖ್ಯಾತರ ವಿರೋಧಿ ಸರಕಾರವಾಗಿದೆ ಅದರಿಂದಲೇ ರಾಜ್ಯಾದ್ಯಂತ ನಡೆಸಿದ ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಬಾರಿಯೂ ಜನರು ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ನೀಡಲಿದ್ದಾರೆ. ಪ್ರಜಾಧ್ವನಿ ಬಸ್‌ ಯಾತ್ರೆಯ ಮೂಲಕ ಬಿಜೆಪಿಯ ದುರಾಡಳಿತವನ್ನು ಜನತೆಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಎಲೆಕ್ಷನ್ ಗಿಮಿಕ್: ಬಳ್ಳಾರಿಯಲ್ಲಿ ಹಕ್ಕುಪತ್ರ ವಿತರಣೆಗೆ ಮುಂದಾದ ಶಾಸಕ ಸೋಮಶೇಖರ್ ರೆಡ್ಡಿ

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಎಂಎಲ್ಸಿ ಎಂ.ಎಲ್‌ ಅನಿಲ್‌ ಕುಮಾರ್‌, ಮಾಜಿ ವಿಧಾನಪರಿಷತ್‌ ಸಭಾಪತಿ ವಿ.ಆರ್‌.ಸುದರ್ಶನ್‌, ಮಾಜಿ ಶಾಸಕ ಎ.ನಾಗರಾಜ್‌, ಮುಖಂಡರಾದ ಊರಬಾಗಿಲು ಶ್ರೀನಿವಾಸ್‌, ಜಯದೇವ್‌, ಮಂಜುನಾಥ್‌, ಸೀಸಂದ್ರ ಗೋಪಾಲಗೌಡ, ಲಕ್ಷ್ಮೀನಾರಾಯಣ್‌, ರಾಮಯ್ಯ, ರಾಜು ಶ್ರೀನಿವಾಸಪ್ಪ, ಮುರಳಿ, ಇಕ್ಬಾಲ್‌, ಜಗನ್‌ ಜಗದೀಶ್‌ ಇದ್ದರು.

ಮಹಿಳೆಯರಿಗೆ ಬಂಪರ್ ಗಿಫ್ಟ್

ಬೆಂಗಳೂರು (ಜ.16): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕರ ಬಂದಾಗಿನಿಂದ ಮಹಿಳೆಯರಿಗೆ ಯಾವುದೇ ಕೊಡುಗೆಯನ್ನೂ ನೀಡಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಗೇಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ಪ್ರತಿ ಮನೆಯ ಒಡತಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಕಾಂಗ್ರೆಸ್‌ ಘೋಷಣೆ ಮಾಡಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ 'ನಾ ನಾಯಕಿ' ಕಾರ್ಯಕ್ರಮದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ನಾನು ಸೋನಿಯಾ ಗಾಂಧಿ ನೋಡಿಕೊಂಡು ಬೆಳದಿದ್ದೇನೆ. ಸೋನಿಯಾ ಗಾಂಧಿ ರಾಜೀವ್ ಗಾಂಧಿ ಮದುವೆಯಾಗಿ ಭಾರತಕ್ಕೆ ಬಂದರು. ದೇಶದ ಸಂಸ್ಕೃತಿ ತಿಳಿದುಕೊಳ್ಳಲು ಸೋನಿಯಾ ಪ್ರಯತ್ನ ಪಟ್ಟರು. ಅನಿವಾರ್ಯ ಕಾರಣದಿಂದ ಜನರ ಸೇವೆ ರಾಜಕೀಯಕ್ಕೆ ಬಂದಿದ್ದಾರೆ. ನಂತರ, ಮಹಿಳೆಯರು ಜೀವನ ಸಾಗಿಸಲು ಎಷ್ಟು ಕಷ್ಟ ಪಡ್ತಾ ಇದ್ದಾರೆ. ನಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಎಲ್ಲ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್ಲ ಮನೆಯ ಯಜಮಾನಿಗೆ ತಲಾ 2 ಸಾವಿರ ರೂ. ಸಹಾಯಧನ ನೀಡುವ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು. 

ಆರ್ಥಿಕ ರಾಜಕೀಯ ಸ್ವಾವಲಂಬಿ ಆಗಬೇಕು: ಕರೋನ ಬಳಿಕ ಜೀವನ ದುಸ್ತರ ಆಗಿದೆ. ಕಷ್ಟ ನನಗೂ ಕೂಡ ಮನವರಿಕೆ ಆಗಿದೆ. ಸರ್ಕಾರ ಬದಲಿಸುವ ಸಮಯ ಬಂದಿದೆ. ನಿಮಗೆ ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿಧ್ಯಾಭ್ಯಾಸ ಎಲ್ಲ ಸರಿಯಾಗಬೇಕು. ದೇಶದಲ್ಲಿ ಶೇ.50 ಮಹಿಳೆಯರು ಇದ್ದೇವೆ. ನಾವೆಲ್ಲರೂ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು. ನೀವು ಶಕ್ತಿವಂತರಗಬೇಕು, ನಿಮ್ಮ ಶಕ್ತಿ ಅರಿವಾಗಬೇಕು. ನೀವು ರಾಜಕೀಯ ಅರಿತುಕೊಳ್ಳಬೇಕು. ರಾಜಕೀಯ ಪಕ್ಷಗಳು ಮಹಿಳೆಯರ ‌ಕಡಗಣನೆ ಮಾಡಿವೆ. ರಾಜಕೀಯ ಪಕ್ಷಗಳಿಗೆ ಈ ವೇದಿಕೆ ಸಂದೇಶ ನೀಡಬೇಕು ಎಂದು ತಿಳಿಸಿದರು. 

ಮತ ಹಾಕುವ ಮುನ್ನ ಯೋಚನೆ ಮಾಡಿ: ಬಿಜೆಪಿ ಎಂಟು ವರ್ಷದಿಂದ ಆಡಳಿತ ಮಾಡುತ್ತಿದೆ. ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೇಯಾ..? ಮೂರು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ನೀವೆಲ್ಲಾ ಯಾರಿಗೆ ‌ಮತ ಹಾಕಬೇಕು ಎಂದು ವಿಚಾರ ಮಾಡಬೇಕು. ರಾಜ್ಯದಲ್ಲಿ ಶೇ. 40 ಸರ್ಕಾರ ಇದೆ. ನಿಮ್ಮ ತೆರಿಗೆ ಹಣ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದೆ. ಅಷ್ಟು ಕೆಲಸ ಬಿಜೆಪಿ ಮಾಡಿದೇಯಾ..? ಸರ್ಕಾರ ಭ್ರಷ್ಟಾಚಾರದಲ್ಲಿ‌ ನಿರತವಾಗಿದೆ ಎಂದು ಆರೋಪ ಮಾಡಿದರು.

click me!